ನರೇಂದ್ರ ಮೋದಿ ಮಹಾ ಸುಳ್ಳುಗಾರ: ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ
ವಿಜಯಪುರ, ಮೇ1: ಪ್ರಧಾನಿ ನರೇಂದ್ರ ಮೋದಿಯಷ್ಟು ಸುಳ್ಳು ಹೇಳುವ ವ್ಯಕ್ತಿ ಜಗತ್ತಿನಲ್ಲಿಯೇ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಬುಧವಾರ ಬೆಳಗ್ಗೆ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಕಾರ್ಯಕ್ರಮಕ್ಕೆ ಜನರೇ ಬರುತ್ತಿಲ್ಲ. ಕುರ್ಚಿಗಳು
ಖಾಲಿ ಇರುತ್ತವೆ. ಬೆಂಗಳೂರಿಗೆ ಬಂದರೆ ಅವರು ಜನರನ್ನು ಕರೆದುಕೊಂಡು ಬರುತ್ತಾರೆ.
ಮೋದಿಗೆ ಮೊದಲಿನಷ್ಟು ಜನಪ್ರಿಯತೆ ಇಲ್ಲ.
ಜನರಿಗೆ ಮೋದಿ ಮೋಸ ಮಾಡುತ್ತಾರೆ ಎಂದರು.
ಈ ಬಾರಿ ಬಿಜೆಪಿಗೆ ಕೇವಲ 200 ಸ್ಥಾನಗಳು ಮಾತ್ರ ಬರುತ್ತವೆ. ಅವರ 400 ಸ್ಥಾನಗಳ ಕನಸು ಬರೀ ಕನಸಾಗಿಯೇ ಉಳಿಯುತ್ತದೆ ಎಂದು ಟೀಕಿಸಿದರು.
ಕೇಂದ್ರವು ರಾಜ್ಯಕ್ಕೆ ಮಲತಾಯಿ ಧೋರಣೆ ಅನುಸರಿಸಿದೆ.
ಬರಗಾಲ ಪರಿಹಾರ ನೀಡುವ ವಿಚಾರದಲ್ಲೂ ತಾರತಮ್ಯ ಮಾಡಿದೆ.
ಏಳು ತಿಂಗಳಾದರೂ ಬರ ಪರಿಹಾರ ನೀಡಲಿಲ್ಲ.
ಮೋದಿ, ಅಮಿತ್ ಶಾ ಅವರಿಗೆ ರಾಜ್ಯದ ಬಗ್ಗೆ ಅಸಡ್ಡೆ ಇದೆ.
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತಿದ್ದೇ ಅವರಿಗೆ ಸಿಟ್ಟು.
ಈ ಕೋಪವನ್ನು ಅವರು ರೈತರ ಮೇಲೆ ತೋರಿಸಿಕೊಳ್ಳುತ್ತಿದ್ದಾರೆ.
4.34 ಲಕ್ಷ ಕೋಟಿ ತೆರಿಗೆಯನ್ನು ಕೇಂದ್ರಕ್ಕೆ ರಾಜ್ಯದಿಂದ ಕಟ್ಟುತ್ತೇವೆ
ರೂಪಾಯಿಯಲ್ಲಿ 13 ಪೈಸೆ ಮಾತ್ರ ಬರುತ್ತಿದೆ. ಈ ವಿಚಾರ ಸಿಎಂ ಜನರಿಗೆ ತಿಳಿಸಿದರು. ಕೇಂದ್ರಕ್ಕೆ ಮನವಿ ಪತ್ರ ಸಲ್ಲಿಸಿ ಭೇಟಿ ಮಾಡಿದರೂ ಹಣ ರಾಜ್ಯಕ್ಕೆ ನೀಡಿಲಿಲ್ಲ.
44000 ಕೋಟಿ ನಮ್ಮ ರಾಜ್ಯಕ್ಕೆ ನೀಡುತ್ತಾರೆ
ಉತ್ತರ ಭಾಗದ ರಾಜ್ಯಗಳಿಗೆ ಹೆಚ್ಚು ಹಣ ಬಿಡುಗಡೆ ಮಾಡುತ್ತಾರೆ
ಹತ್ತು ವರ್ಷದಿಂದ ಮೋದಿ ಸುಳ್ಳು ಹೇಳುತ್ತಿದ್ದಾರೆ ಎಂದು ಮಕ್ಕಳಿಗೆ ಗೊತ್ತಾಗಿದೆ ಎಂದರು.
ಕೃಷಾ ನದಿ ನೀರಿನ ಹಂಚಿಕೆ ಗೆಜೆಟ್ ನೋಟಿಫಿಕೇಶನ್ ಹೊರಡಿಸಿಲ್ಲ.
ಬರ, ತೆರಿಗೆ ಅನುಪಾತ ತಾರತಮ್ಯ ಮಾಡುತ್ತಿದೆ. ಈ ವಿಚಾರವನ್ನು ರಾಜ್ಯದ ಸಂಸದರು ಮಾತನಾಡಲ್ಲ.
ತೆರಿಗೆ ಹಣ ಕೊಟ್ಟಿದ್ದರೆ ಜನರಿಗೆ ಅನಕೂಲವಾಗುತ್ತಿತ್ತು. ಆದರೆ ಕೇಂದ್ರ ಜನರಿಗೆ ಅನುಕೂಲ ಮಾಡಿಲ್ಲ. ರಾಜ್ಯದ ಸಂಸದರು ಮೌನವಾಗಿದ್ದಾರೆ.
ಇಂಥ ಸಂಸದರು ನಮಗೆ ಬೇಕಿಲ್ಲ.
ಹಾಗಾಗಿ ಕಾಂಗ್ರೆಸ್ಸಿನ ಹೆಚ್ವು ಸಂಸದರು ಲೋಕಸಭೆಗೆ ಆಯ್ಕೆಯಾಗಬೇಕು.
ವಿಜಯಪುರ ಅಭ್ಯರ್ಥಿ ರಾಜು ಆಲಗೂರ ಗೆಲ್ಲಬೇಕು ಎಂದರು.
ಸಿಎಂ ಪುತ್ರ ದಿ. ರಾಕೇಶ ಮೃತಪಟ್ಟಾಗ ಮೋದಿ ಸಹಾಯ ಮಾಡಿದ್ದಾರೆ ಎಂಬ ಎಚ್ ಡಿ ಕೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವ ರಾಮಲಿಂಗಾರೆಡ್ಡಿ,
ಅಂಥದ್ದೇನು ದಾಖಲೆ ಇದ್ದರೆ ಕೊಡಿ.
ಆ ವೇಳೆ ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿ ಅವರ ಸಹಾಯ ಪಡೆದಿಲ್ಲ. ಆ ವೇಳೆ ನಾನೇ ಸಿಎಂ ಜೊತೆಗಿದ್ದೆ. ಇಂಥ ಆರೋಪ ರಾಜಕೀಯದಲ್ಲಿ ಸಹಜ ಎಂದು ನುಡಿದರು.
ಹುಬ್ಬಳ್ಳಿ ನೇಹಾ ಕೊಲೆ ಪ್ರಕರಣದಂತೆ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವಿಚಾರದಲ್ಲಿ ಬಿಜೆಪಿಯವರು ಪ್ರತಿರೋಧ ಮಾಡಿಲ್ಲ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವ ರಾಮಲಿಂಗಾರೆಡ್ಡಿ
ಬಿಜೆಪಿಯವರು ಮಹಿಳಾ ವಿರೋಧಿಗಳು. ಬಿಜೆಪಿಯವರು ಮಹಿಳೆಯರಿಗೆ ಯಾವುದೇ ಶಿಕ್ಷಣ ಕೊಟ್ಟಿಲ್ಲ. ಮಾತೃ ಶಕ್ತಿ ಎನ್ನುವ ಕೇಂದ್ರ ಗೃಹ ಸಚಿವ ಅಮಿತ್ ಶಾ
ಮಣಿಪುರದ ಮಹಿಳೆ ಮೇಲೆ ಅತ್ಯಾಚಾರ ನಡೆದಾಗ ಮಾತನಾಡಿಲ್ಲ. ಉತ್ತರ ಪ್ರದೇಶದಲ್ಲಿ ಒಬ್ಬರು ತಪ್ಪು ಮಾಡಿದರೆ ಬುಲ್ಡೋಜರ್ ನಿಂದ ಮನೆ ಒಡೆಯುತ್ತಾರೆ. ಯುಪಿಯಲ್ಲಿ
ಎಂಪಿಯನ್ನು ಗುಂಡಿಕ್ಕಿ ಕೊಂದರೂ
ಈ ವಿಚಾರದಲ್ಲಿ ಅಮಿತ್ ಶಾ ಬಾಯಿ ಬಿಡಲಿಲ್ಲ. ದೆಹಲಿಯಲ್ಲಿ ರೈತರ ಹೋರಾಟದಲ್ಲಿ 700 ಜನ ರೈತರು ಮೃತಪಟ್ಟರು. ಆಗಲೂ ಮಾತನಾಡಲಿಲ್ಲ. ಪ್ರಜ್ವಲ್ ರೇವಣ್ಣ ರೀತಿ ಕಾಂಗ್ರೆಸ್ ಮಾಡಿದ್ದರೆ ಬಿಜೆಪಿಯವರು ಬೊಬ್ಬೆ ಹೊಡೆಯುತ್ತಿದ್ದರು ಎಂದು ವಾಗ್ದಾಳಿ ನಡೆಸಿದರು.
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋಗಳನ್ನು ಡಿ.ಕೆ. ಶಿವಕುಮಾರ ಬಿಡುಗಡೆ ಮಾಡಿದ್ದಾರೆಂಬ ಅರೋಪ ವಿಚಾರವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದ ಅವರು, ಶಿವಕುಮಾರ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ. ಡಿಕೆಶಿ ಹೆಸರನ್ನು ನೂರು ಬಾರಿ, ನೂರು ವಿಚಾರಗಳಲ್ಲಿ ಹೇಳುತ್ತಾರೆ.
ಜಾರಕಿಹೋಳಿ ವಿಚಾರದಲ್ಲಿಯೂ ಡಿಕೆಶಿ ಹೆಸರು ಹೇಳಿದ್ದರು ಎಂದರು.
ರಾಜ್ಯದಲ್ಲಿ ಬಾಂಬ್ ಸ್ಟೋಟವಾಗಿದ್ದರ ಕುರಿತು ಸರ್ಕಾರದ ಮೇಲೆ ಮೋದಿ ಆರೋಪ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ರಾಮಲಿಂಗಾರೆಡ್ಡಿ,
2008 ರಲ್ಲಿ ಸಿಎಂ ಯಡಿಯೂರಪ್ಪ ಇದ್ದಾಗ ಕಂಠೀರವ ಸ್ಟುಡಿಯೋ ಬಳಿ ಬಾಂಬ್ ಸ್ಪೋಟವಾಗಿತ್ತು.
2010ರಲ್ಲಿ ಸರಣಿ ಬಾಂಬ್ ಸ್ಪೋಟವಾಗಿತ್ತು
2013ರಲ್ಲಿ ಮಲ್ಲೇಶ್ವರಂನಲ್ಲಿ ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ ಸ್ಪೋಟವಾಗಿತ್ತು.
2020 ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ ಬಾಂಬ್ ಬ್ಲಾಸ್ಟ್ ಆಗಿತ್ತು.
2022 ರಲ್ಲಿ ಬೊಮ್ಮಾಯಿ ಸಿಎಂ ಆಗಿದ್ದಾಗ ಬಾಂಬ್ ಬ್ಲಾಸ್ಟ್
ಆಗಿತ್ತು.
2024 ರಲ್ಲಿ ಬೆಂಗಳೂರಿನಲ್ಲಿ ರಾಮೇಶ್ವರ ಕೆಫೆ ಬ್ಲಾಸ್ಟ್ ಆಗಿದೆ.
ಈಗ ಮೋದಿ ಯಾರ ಅಧಿಕಾರದಲ್ಲಿ ಹೆಚ್ಚು ಸ್ಪೋಟ್ ಆಗಿದೆ ಎಂದು ಹೇಳಲಿ ಎಂದು ಸವಾಲು ಹಾಕಿದರು.
ಶಕ್ತಿ ಯೋಜನೆಯಲ್ಲಿ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದಾರೆ.
ಬಸ್ ನಲ್ಲಿ ಹೆಚ್ವಿನ ಮಹಿಳಾ ಪ್ರಯಾಣಿಕರು ಓಡಾಡುತ್ತಿದ್ದಾರೆ
5800 ಹೊಸ ಬಸ್ ಗಳನ್ನು ಖರೀದಿ ಮಾಡುತ್ತೇವೆ.
ಇದರಿಂದ ಬಸ್ ನಲ್ಲಿನ ರಷ್ ಕಡಿಮೆಯಾಗಲಿದೆ.
5200 ಕೋಟಿ ಸಾರಿಗೆ ಇಲಾಖೆ ಮೇಲೆ ಬಿಜೆಪಿಯವರು ಸಾಲ ಇಟ್ಟಿದ್ದರು. ಆ ಕಾರಣ ಸಾರಿಗೆ ಇಲಾಖೆ ಸಿಬ್ಬಂದಿಗಳಿಗೆ ಅರಿಯರ್ಸ್ ಕೊಟ್ಟಿಲ್ಲ. ಮುಂದಿನ ದಿನಗಳಲ್ಲಿ ಅರಿಯರ್ಸ್ ಕೊಡಲಾಗುತ್ತದೆ ಎಂದು ಹೇಳಿದರು.
ಈ ಭಾಗದಲ್ಲಿ ಎಂ ಬಿ ಪಾಟೀಲ ಜಲಸಂಪನ್ಮೂಲ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದರು.
ಈ ಭಾಗದಲ್ಲಿ ಅಭಿವೃದ್ಧಿಯಾಗಿದೆ.
ಇದರಿಂದ ಲೋಕಸಭಾ ಚುನಾವಣೆಯಲ್ಲಿ ವಿಜಯಪುರ ಅಭ್ಯರ್ಥಿ ರಾಜು ಆಲಗೂರ ಗೆಲುವಿಗೆ ಅನಕೂಲವಾಗುತ್ತದೆ ಎಂದು ಹೇಳಿದರು.