ಕಡ್ಡಾಯ ಮತದಾನ ಭಾರತ ಪ್ರಜೆಗಳ ಹಕ್ಕು:ಮಹಾಂತೇಶ
ಯಡ್ರಾಮಿ:ಮೇ:1:ಕಡ್ಡಾಯ ಮತದಾನ ಭಾರತ ಪ್ರಜೆಗಳ ಹಕ್ಕು ತಪ್ಪದೇ ಮತದಾನ ಮಾಡಬೇಕು ಎಂದು ಮಹಾಂತೇಶ ಕೌಲಾಪೂರ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಯಡ್ರಾಮಿ ಅವರು ಮತದಾರರಿಗೆ ಮತದಾನ ಜಾಗೃತಿ ಮೂಡಿಸಿದರು.
ಪಟ್ಟಣದಲ್ಲಿ ಮಂಗಳವಾರ ಪಟ್ಟಣ ಪಂಚಾಯತಿ ವತಿಯಿಂದ ಮತದಾನ ಜಾಗೃತಿ ಅಭಿಯಾನ ಉದ್ದೇಶಿಸಿ ಮಾತನಾಡುತ್ತ.ಸದೃಢ ಭಾರತ ದೇಶ ನಿರ್ಮಾಣ ಮಾಡುವ ಹಕ್ಕು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಮೂಲಕ ಪ್ರಜೆಗಳಿಗೆ ತನ್ನದೇ ಆದ ಹಕ್ಕು ನೀಡಿದ್ದಾರೆ.
ಭಾರತದ ಭವಿಷ್ಯ ಅಭಿವೃದ್ಧಿಗೆ ಸಹಕಾರ ನೀಡುವ ವ್ಯಕ್ತಿಗೆ ಮತದಾನ ಮಾಡುವ ಮೂಲಕ ತಮ್ಮ ಮತದಾನ ಹಕ್ಕು ಚಲಾಯಿಸಬೇಕು ಇತರರಿಗೂ ತಿಳಿಸಬೇಕು ಎಂದು ಮನವಿ ಮಾಡಿದ್ದರು.
ಮತದಾನ ನಮ್ಮ ಹಕ್ಕು ಕಡ್ಡಾಯ ಮತದಾನ ಮಾಡಬೇಕು ಎಂದು ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಘೋಷಣೆಯೊಂದಿಗೆ ಅಂಗನವಾಡಿ ಶಿಕ್ಷಕಿಯರು ಹಾಗೂ ಪಟ್ಟಣ ಪಂಚಾಯತಿ ಸಿಬ್ಬಂದಿವರ್ಗದವರು ಅಂಬೇಡ್ಕರ್ ವೃತ್ತದ ವರಿಗೆ ಅಭಿಯಾನ ಕೈಗೊಂಡರು.
ಈ ಸಂದರ್ಭದಲ್ಲಿ ಮಹಾಂತೇಶ ಕೌಲಾಪೂರ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಯಡ್ರಾಮಿ,ಪಾತೀಮಾ ಮೇಲ್ವಿಚಾರಕರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,ಮಲ್ಲಿಕಾರ್ಜುನ ಯತ್ನಾಳ, ಯಲ್ಲಪ್ಪ ಮೇಲಿನಮನಿ,ಅಂಗನವಾಡಿ ಶಿಕ್ಷಕರು ಹಾಗೂ ಪಟ್ಟಣ ಪಂಚಾಯತಿ ಸಿಬ್ಬಂದಿವರ್ಗ ಇತರರು ಉಪಸ್ಥಿತರಿದ್ದರು.