ಜಿಲ್ಲಾ ತಿಗಳ ಜನಾಂಗದ ಸಮನ್ವಯ ಸಮಿತಿ ಅಧ್ಯಕ್ಷರಾಗಿ ಎಂ. ವೆಂಕಟೇಶ್
ಕೋಲಾರ.ಸೆ.೨೨-ಕೋಲಾರ ಜಿಲ್ಲಾ ತಿಗಳ ಜನಾಂಗದ ಸಮನ್ವಯ ಸಮಿತಿಯನ್ನು ನೂತನವಾಗಿ ರಚಿಸುವ ಮೂಲಕ ಸಮಾಜ ಮುಖಿಯಾಗಿ ಒಂದು ಶಕ್ತಿಯನ್ನಾಗಿ ಬೆಳೆಸ ಬೇಕು, ಶೈಕ್ಷಣಿಕವಾಗಿ, ಸಮಾಜಿಕವಾಗಿ, ಅರ್ಥಿಕವಾಗಿ ಹಾಗೂ ರಾಜಕೀಯವಾಗಿ ಸಧೃಡವಾಗಿಸುವ ದಿಸೆಯಲ್ಲಿ ಸಮುದಾಯವನ್ನು ಸಂಘಟಿಸಿ ಶೈಕ್ಷಣಿಕವಾಗಿ ಹೆಚ್ಚಿನ ಒತ್ತು ನೀಡಿ ರಾಜ್ಯದಲ್ಲಿಯೇ ಮಾದರಿ ಸಮುದಾಯವನ್ನಾಗಿಸಬೇಕೆಂದು ಆಶಯವನ್ನು ಹೊಂದಿರುವುದಾಗಿ ಸಂಸ್ಥಾಪಕ ಅಧ್ಯಕ್ಷ ಎಲ್.ಎ.ಮಂಜುನಾಥ್ ತಿಳಿಸಿದರು,
ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಾ ಸಮಿತಿ ರಚನೆಗೆ ಸಮುದಾಯದ ಎಲ್ಲಾ ಮುಖಂಡರು, ದೇವಾಸ್ಥಾನ ಸಮಿತಿ ಹಾಗೂ ಯುವ ಸಂಘಟನೆಯನ್ನು ಒಗ್ಗೂಡಿಸಿ ಕೊಂಡು ಜಿಲ್ಲಾ ಸಮಿತಿ ಮತ್ತು ಯುವ ಘಟಕದ ಸಮಿತಿಯ ಪದಾಧಿಕಾರಿಗಳನ್ನು ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ, ಜಿಲ್ಲಾ ಸಮಿತಿಗೆ ಮುಳಬಾಗಿಲಿನ ಎಂ. ವೆಂಕಟೇಶ್ ಅವರನ್ನು ಅಧ್ಯಕ್ಷರನ್ನಾಗಿ, ಬಂಗಾರಪೇಟೆಯ ಪಲ್ಲವಿ ಮಣಿ ಅವರನ್ನು ಗೌರವ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದರು.
ಪ್ರಧಾನ ಕಾರ್ಯದರ್ಶಿಯಾಗಿ ಪಾಲ್ಗುಣ,ಖಜಾಂಜಿಯಾಗಿ ಎಂ.ಪಿ.ಶ್ರೀನಿವಾಸ್, ಉಪಾಧ್ಯಕ್ಷರಾಗಿ ನಾರಾಯಣಸ್ವಾಮಿ, ಶ್ರೀನಿವಾಸ್,ಹಾಗೂ ಎಂ.ಕೆ.ವೆಂಕಟೇಶ್, ಮುನಿಯಪ್ಪ ಶಂಕರಪ್ಪ ಇವರನ್ನು ಆಯ್ಕೆ ಮಾಡಲಾಗಿದೆ. ಯುವ ಘಟಕದ ಅಧ್ಯಕ್ಷರಾಗಿ ಆರ್.ಎನ್.ಮಂಜುನಾಥ್ ಅಧ್ಯಕ್ಷ, ಮುದುವತ್ತಿ ಬಾಬು ಪ್ರಧಾನ ಕಾರ್ಯದರ್ಶಿ,ಅಂಜಿನಪ್ಪ ಅವರನ್ನು ಖಜಾಂಜಿಯನ್ನಾಗಿ ಹಾಗೂ ಚಂದ್ರ ಶೇಖರ್ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸಮಿತಿಯನ್ನು ಎಲ್ಲಾ ತಾಲ್ಲೂಕುಗಳಲ್ಲಿ ವಿಸ್ತರಿಸಿ ಸಂಘಟಿಸಲಾಗುವುದು ಎಂದು ಹೇಳಿದರು.
ನೊತನ ಅಧ್ಯಕ್ಷ ವೆಂಕಟೇಶ್ ಮಾತನಾಡಿ ಜಿಲ್ಲೆಯಲ್ಲಿ ಸುಮಾರು ಒಂದೂ ಮುಕ್ಕಾಲು ಲಕ್ಷ ಜನರು ತಿಗಳ ಸಮುದಾಯಕ್ಕೆ ಸೇರಿದವರು ಇದ್ದರೂ ಸಹ ಜಿಲ್ಲೆಯಲ್ಲಿ ಯಾವೂದೇ ರೀತಿ ಮುಂದುವರೆಯಲು ಸಾಧ್ಯವಾಗುತ್ತಿಲ್ಲ.
ಪ್ರಥಮವಾಗಿ ಶೈಕ್ಷಣಿಕವಾಗಿ ಒತ್ತು ನೀಡ ಬೇಕೆಂಬ ದೆಸೆಯಲ್ಲಿ ಇಂಜನಿಯರಿಂಗ್ ಕಾಲೇಜ್ ಸ್ಥಾಪಿಸಲು ದಾನಿಗೊಳಬ್ಬರು ೩೦ ಎಕರೆ ಜಾಗವನ್ನು ಸಮುದಾಯದ ಚಟುವಟಿಕೆಗಳಿಗೆ ನೀಡುವ ಮೂಲಕ ಸಮುದಾಯಕ್ಕೆ ಶೈಕ್ಷಣಿಕವಾಗಿ ಶಕ್ತಿ ತುಂಬಲು ಮುಂದಾಗಿರುವುದು ಸ್ವಾಗತಾರ್ಹವಾಗಿದೆ ಎಂದು ಹರ್ಷ ವ್ಯಕ್ತ ಪಡೆಸಿದರು,
ಎಲ್ಲಾ ಸಮುದಾಯಗಳಲ್ಲಿ ಶೈಕ್ಷಣಿವಾಗಿ ಪ್ರೋತ್ಸಾಹ ನೀಡುವ ರೀತಿಯಲ್ಲಿ ತಿಗಳ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಆಯೋಜಿಸಲಾಗುವುದು. ಸ್ನಾತಕೋತ್ತರದಲ್ಲಿ ಶೇ ೮೦ ಕ್ಕೂ ಹೆಚ್ಚು ಅಂಕಗಳನ್ನು ಪಡೆದವರು ಹಾಗೂ ಪದವಿಗಳಲ್ಲಿ ಶೇ ೭ಂಕ್ಕಿಂತ ಹೆಚ್ಚು ಅಂಕ ಪಡೆದ ಪ್ರತಿಭಾವಂತರನ್ನು ಪುರಸ್ಕಾರಿಸಲು ಸಮಿತಿ ನಿರ್ಧಾರ ಕೈಗೊಂಡಿದೆ. ಶೀಘ್ರದಲ್ಲಿಯೇ ಸಮಾವೇಶದ ದಿನಾಂಕವನ್ನು ಸಮಿತಿ ನಿರ್ಧರಿಸಲಿದ ಎಂದು ತಿಳಿಸಿದರು,
ತಿಗಳ ಸಮುದಾಯವನ್ನು ಯಾವೂದೇ ಸಮುದಾಯಗಳಿಗಿಂತ ಕಡಿಮೆ ಇಲ್ಲದಂತೆ ಉನ್ನತ ಮಟ್ಟಕ್ಕೆ ಕೊಂಡಯ್ಯಲು ಸಮಿತಿಗೆ ಬೆನ್ನಲುಬಾಗಿ ಉತ್ತಮ ಕೆಲಸಗಳಿಗೆ ಶ್ರಮಿಸಲಿದೆ. ಜಿಲ್ಲಾ ಸಮಿತಿಗೆ ಬೆಂಬಲವಾಗಿ ಯುವ ಸಮಿತಿ ಸಮುದಾಯದ ಬೆಳವಣಿಗೆ ಹಾಗೂ ಅಭಿವೃದ್ದಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು,
ಪತ್ರಿಕಾಗೋಷ್ಠಿಯಲ್ಲಿ ಸಮುದಾಯದ ಮುಖಂಡರಾದ ವೆಂಕಟೇಶ್, ನಾರಾಯಣಸ್ವಾಮಿ, ಶ್ರೀನಿವಾಸ್, ಆನಂದಕುಮಾರ್, ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು,