ಸಿಯುಕೆಯಲ್ಲಿ ಎರಡು ಹೊಸ ಹಾಸ್ಟೆಲ್ ಕಟ್ಟಡಗಳ ಉದ್ಘಾಟನೆ
ಕಲಬುರಗಿ:ಸೆ.21:”ಸಿಯುಕೆ ಈಗ ಸಂಪೂರ್ಣವಾಗಿ ವಸತಿ ಸಹಿತ ಕ್ಯಾಂಪಸ್ ಆಗಿದೆ, ಈಗ ನಾವು ಎಲ್ಲಾ ವಿದ್ಯಾರ್ಥಿಗಳಿಗೆ ವಸತಿ ನೀಡಬಹುದು” ಎಂದು ಸಿಯುಕೆಯ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಹೇಳಿದರು.
ಇಂದು ಸಿಯುಕೆ ಕ್ಯಾಂಪಸ್‍ನಲ್ಲಿ ನೂತನವಾಗಿ ನಿರ್ಮಿಸಿರುವ ಎರಡು ಹಾಸ್ಟೆಲ್ ಕಟ್ಟಡಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಅವರು ಮುಂದುವರೆದು ಮಾತನಾಡಿ “ಈ ಎರಡು ಹಾಸ್ಟೆಲ್‍ಗಳು ಒಟ್ಟಾಗಿ 1080 ವಿದ್ಯಾರ್ಥಿಗಳ ವಸತಿ ಸಾಮಥ್ರ್ಯವನ್ನು ಹೊಂದಿವೆ. ಈಗ ನಾವು ಕ್ಯಾಂಪಸ್‍ನಲ್ಲಿ 3000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನೀಡಬಹುದು. ಸ್ಥಳೀಯ ವಿದ್ಯಾರ್ಥಿಗಳಿಗೂ ಸಹ ನಾವು ಹಾಸ್ಟೆಲ್ ನೀಡಬಹುದು ಮತ್ತು 100 ಪ್ರತಿಶತ ವಸತಿ ಕ್ಯಾಂಪಸ್ ಮಾಡಬಹುದು. ಇದು ವಿದ್ಯಾರ್ಥಿಗಳು ಗುಣಮಟ್ಟದ ಸಮಯವನ್ನು ಕ್ಯಾಂಪಸ್‍ನಲ್ಲಿ ಕಳೆಯಲು ಅನುವು ಮಾಡಿಕೊಡುತ್ತದೆ. ಆದ್ದರಿಂದ ಅವರು ಕ್ಯಾಂಪಸ್‍ನಲ್ಲಿರುವ ಗ್ರಂಥಾಲಯ, ಲ್ಯಾಬ್ ಮತ್ತು ಇತರ ಸೌಲಭ್ಯಗಳನ್ನು ಉತ್ತಮವಾಗಿ ಬಳಸಿಕೊಳ್ಳಬಹುದು. ಮುಂದಿನ ಎರಡು ವರ್ಷಗಳಲ್ಲಿ ಇನ್ನೂ ನಾಲ್ಕು ಹಾಸ್ಟೆಲ್‍ಗಳನ್ನು ನಿರ್ಮಿಸುವುದು ಮತ್ತು ನಾಲ್ಕರಿಂದ ಐದು ಹೊಸ ವಿಭಾಗಗಳನ್ನು ಪ್ರಾರಂಭಿಸುವುದು ಮತ್ತು ಎಲ್ಲಾ ಕೋರ್ಸಗಳಲ್ಲಿ ವಿದ್ಯಾರ್ಥಿಗಳ ಪ್ರವೇಶವನ್ನು ದ್ವಿಗುಣಗೊಳಿಸುವುದು ನನ್ನ ಗುರಿಯಾಗಿದೆ. ಈ ವರ್ಷ ನಾವು ಕೆಲವು ವಿಭಾಗಗಳಲ್ಲಿ ವಿದ್ಯಾರ್ಥಿಗಳ ಪ್ರವೇಶವನ್ನು ದ್ವಿಗುಣಗೊಳಿಸಿದ್ದೇವೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಕುಲಸಚಿವ ಪೆÇ್ರ.ಆರ್.ಬಿರಾದಾರ್, ಮುಖ್ಯ ಅಭಿಯಂತರ ಶ್ರೀ ಐ.ಎಸ್.ಮಹಾಗಾಂವಕರ, ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಡಾ.ಬಸವರಾಜ ಕುಬಕಡ್ಡಿ, ಮುಖ್ಯ ವಾರ್ಡನ್ ಡಾ.ಬಸವರಾಜ ಎಂ.ಎಸ್., ಸಿಪಿಡಬ್ಲ್ಯೂಡಿ ಎಂಜಿನಿಯರ್ ವಿಕ್ರಮ ಶರ್ಮಾ, ಪೆÇ್ರ.ಚನ್ನವೀರ ಆರ್.ಎಂ., ಪೆÇ್ರ.ಬಸವರಾಜ ಡೋಣೂರ, ಪೆÇ್ರ.ಆರ್.ಎಸ್.ಹೆಗಡಿ, ಪೆÇ್ರ. ಜಿ ಆರ್ ಅಂಗಡಿ ಇತರರು ಉಪಸ್ಥಿತರಿದ್ದರು.