ಪಡಸಾವಳಿಯಲ್ಲಿ ಭಾವೈಕ್ಯತೆಯ ಜಾತ್ರೆ
ಆಳಂದ :ಮೇ.1:ತಾಲ್ಲೂಕಿನ ಪಡಸಾವಳಿ ಗ್ರಾಮದಲ್ಲಿ ಪ್ರಾಚೀನ ಕಾಲದಿಂದಲೂ ಹಿಂದೂ -ಮುಸ್ಲಿಂರೆನ್ನದೆ ಭಾವೈಕ್ಯತೆಯಿಂದ ಅಣ್ಣತಮ್ಮಂದಿರಂತೆ ಬೆರೆತು ಜಾತ್ರೆ ಮಾಡುವ ವಾಡಿಕೆ ಇದೆ ಶ್ರೀ ಷ. ಬ್ರ. ಡಾ. ಶಂಭುಲಿಂಗ ಶಿವಾಚಾರ್ಯರ ದಿವ್ಯಸಾನಿಧ್ಯದಲ್ಲಿ ಧರ್ಮರಾಯ ಮತ್ತು ಸೂಫಿ ಸಂತ ಹಜ್ರತ್ ಲಾಡ್ಲೆಮಶಾಖರ ಜಾತ್ರೆ ಅದ್ದೂರಿಯಾಗಿ ನಡೆಯಿತು. ಸಾಯಂಕಾಲ 6 ಗಂಟೆಗೆ ರಥೋತ್ಸವ ಜರುಗಿತು. ರಾತ್ರಿ 10 ಗಂಟೆಗೆ ಸಾಮಾಜಿಕ ನಾಟಕ ಪ್ರದರ್ಶನ ನಡೆದವು ಜಾತ್ರೆಯಲ್ಲಿ ಸುತ್ತಮುತ್ತಲಿನ ಊರಿನಭಕ್ತರು ಭಾಗವಹಿಸಿದರು.