ರಂಗಭೂಮಿಯಿಂದ ಭವ್ಯ ಸಂಸ್ಕಾರ ಉಳಿಸಲು ಸಾಧ್ಯ:ಡಾ.ಅಜಯಸಿಂಗ್
ಯಡ್ರಾಮಿ:ಮೇ.1:ರಂಗಭೂಮಿ ಕಲಾವಿದರಿಂದ ಸಾಮಾಜದಲ್ಲಿ ಕಲೆ ಹಾಗೂ ಸಂಸ್ಕಾರ ಉಳಿಲು ಸಾಧ್ಯವಾಗುವುದು ಎಂದು ಡಾ.ಅಜಯಸಿಂಗ್ ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ಜೇವರ್ಗಿ ಶಾಸಕರು ತಿಳಿಸಿದರು.
ಯಡ್ರಾಮಿ ಪಟ್ಟಣದಲ್ಲಿ ಬಸವೇಶ್ವರ ಹವ್ಯಾಸಿ ಕಲಾ ಬಳದ ವತಿಯಿಂದ ಉಸ್ಮಾನ ಮಸ್ಟರ್ ಗಣಿಯಾರ ವಿರಚಿತ ನಾಟಕ ಉದ್ಘಾಟನೆ ನೇರವೇರಿಸಿ ಮಾತನಾಡುತ್ತ.
ಇಂದಿನ ಟಿವಿ ಹಾಗೂ ಸಾಮಾಜಿಕ ಜಾಲತಾಣ ಇರುವಾಗ ರಂಗಭೂಮಿ ನಾಟಕ ಮಾಡುವದು ವಿಶೇಷ ಎನ್ನುವ ರೀತಿಯಾಗಿದೆ.ಪಟ್ಟಣದಲ್ಲಿ ಸಿಗದಂತಹ ಭಾವೈಕ್ಯತೆ ಇಂದು ಹಳ್ಳಿಗಳಲ್ಲಿ ಮಾತ್ರ ನೋಡಬಹುದು ಎಂದು ಹೇಳಿದರು.
ಹೀಗೆಯೇ ಮುಂದಿನ ಜನಾಂಗದವರಿಗೂ ಕೂಡ ಈ ರಂಗಭೂಮಿಯ ಕಲೆ ಹಾಗೂ ಸಂಸ್ಕಾರ ಉಳಿಸಿಕೊಂಡು ನೀಡುವ ಜವಾಬ್ದಾರಿ ನಮ್ಮ ನಿಮ್ಮ ಮೇಲೆ ಇರುತ್ತದೆ ಎಲ್ಲರೂ ಮಾಡಬೇಕು ಸಲಹೆ ನೀಡಿದರು.
ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ಮಾತಾನಾಡಿ ಸತಿ ಸಿಲವಂತಿ ಎಂಬ ನಾಟಕದ ಸಾರಂಶ ಇಷ್ಟೇ ಸತಿ ಮತ್ತು ಪತಿಗಳು ಸಿಲವಂತರಾಗಿ ಜೀವನ ಮಾಡಿದಾಗ ಮಾತ್ರ ಸುಖ ಜೀವನ ಮಾಡಲು ಸಾಧ್ಯವಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಿರುಪತಿ ದೇಸಾಯಿ, ವಿಜಯಕುಮಾರ ಪಾಟೀಲ, ರಾಜಶೇಖರ ಸಿರಿ, ಬಾಬುರಾವ ಕುಳಗೇರಿ,ಬಸವರಾಜ ಖಾನಗೌಡರು, ಮಲ್ಲನಗೌಡ ಕುಳಗೇರಿ,ರಾಜೇಸಾಬ ಮುಲ್ಲಾ, ನಿಲಕಂಠ ಅವಂಟಿ,ಶಿವಕುಮಾರ ಕಲ್ಲಾ,ರಜಾಕ್ ಮನಿಯಾರ್,ಸಿದ್ದನಗೌಡ ಮಾಲಿಪಾಟೀಲ,ರವಿ ಕೋಳಕೂರ,ಸಂತೋಷ ಯಾದಗಿರಿ,ಮೈಬುಬ ಮನಿಯಾರ,ಜಾವೇದ ಉಸ್ತಾದ,ಬೀಮಾಶಂಕರ ಕಟ್ಟಿಮನಿ,ಮಾಹಾಂತೇಶ ಪೆÇಲೀಸ್ ಪಾಟೀಲ, ಹಣಮಂತ ಕಂಟ್ರೋಲರ್,ಲಾಲಸಾಬ್ ಅಮೀನ್ ಪಾಟೀಲ ಚಿಂಚೋಳ್ಳಿ, ನಿಂಗಣ್ಣ ಮಳ್ಳಿ ನಾಟಕ ಮಾಲಿಕರಾದ ಇಬ್ರಾಮ್ ಸಾದ್ ಉಸ್ತಾದ್,ಹಯ್ಯಾಳಪ್ಪ ಗಂಗಾಕರ್, ಚಂದ್ರಶೇಖರ್ ಪುರಾಣಿ ಇತರರು ಭಾಗವಹಿಸಿದ್ದರು.