ಆಳಂದ ಪೋಲೀಸರ ಕಾರ್ಯಾಚರಣೆ:ಮದ್ಯ-ಗುಟಕಾ ಜಪ್ತಿ
ಆಳಂದ:ಮೇ.1:ಆಳಂದ ಪೊಲೀಸ್ ಠಾಣೆಯ ಪಿ.ಐ. ಶರಣಬಸಪ್ಪ ಕೊಡ್ಲಾ ಮತ್ತು ಸಿಬ್ಬಂದಿಗಳಾದ ಮಹೆಬೂಬ ಶೇಖ, ಚಂದ್ರಶೇಖರ, ಗಣಪತರಾವ, ಮಲ್ಲಿನಾಥ, ಮಾಳಪ್ಪ ರವರುಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಕಳ್ಳತನದಲ್ಲಿ ಭಾಗಿಯಾದ ಮೂವರನ್ನು ದಸ್ತಗಿರಿ ಮಾಡಿ 64800 ರೂ ಮೌಲ್ಯದ ಮದ್ಯ ಮತ್ತು ಗುಟಕಾ ವಶಪಡಿಸಿಕೊಂಡು ಅವರಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಆಳಂದ ಪೆÇಲೀಸರ ಈ ಕಾರ್ಯಕ್ಕೆ ಆರಕ್ಷಕ ಅಧೀಕ್ಷಕರು ಕಲಬುರಗಿ ರವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.