37ಲಕ್ಷ ಮೌಲ್ಯದ 1870 ಟ್ರ್ಯಾಕ್ಟರ್ ಮರಳು ಜಪ್ತಿ
ಅಫಜಲಪುರ:ಮೇ.1:ಭೀಮಾನದಿ ದಡದಲ್ಲಿರುವ ಹವಳಗಾ ಗ್ರಾಮದ ಸಿಮಾಂತರದ ಜಮೀನುಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿದ ಮರಳು ದಾಸ್ತಾನುಗಳ ಮೇಲೆ ಅಫಜಲಪುರ ಪೆÇಲೀಸರು ದಾಳಿ ನಡೆಸಿ ಅಕ್ರಮ ಮರಳನ್ನು ಜಪ್ತಿ ಮಾಡಿಕೊಂಡು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಏಪ್ರಿಲ್ 28ರಂದು ಅಕ್ರಮ ಮರಳು ಸಂಗ್ರಹ ಬಗ್ಗೆ ಅಫಜಲಪುರ ಪೆÇೀಲಿಸ್ ಅಧಿಕಾರಿಗಳಿಗೆ ಬಂದ ಖಚಿತ ಮಾಹಿತಿ ಮೇರೆಗೆ ಪೆÇೀಲಿಸ್ ವರಿಷ್ಠಾಧಿಕಾರಿ ಅಕ್ಷಯ ಹಾಕೆ,ಹೆಚ್ಚುವರಿ ಪೆÇಲೀಸ್ ಅಧೀಕ್ಷಕರಾದ ಶ್ರೀನಿಧಿ,ಡಿವೈಎಸ್ಪಿ ಮಹಮ್ಮದ್ ಶರೀಫ್ ರಾವುತರ್ ಮಾರ್ಗದರ್ಶನದಲ್ಲಿ ಸಿಪಿಐ ಚನ್ನಯ್ಯ ಹಿರೇಮಠ, ಪಿಎಸಐ ಮಹೆಬೂಬ ಅಲಿ,ಸಿಬ್ಬಂದಿಗಳಾದ ಇಮಾಮ್, ವಿಶ್ವನಾಥ, ಮಹೇಶ್, ಚಂದ್ರಕಾಂತ, ಮಲ್ಲಿನಾಥ ತಂಡದೊಂದಿಗೆ ಅಫಜಲಪುರ ಪೆÇೀಲಿಸ್ ಠಾಣೆ ವ್ಯಾಪ್ತಿಯ ಭೀಮಾನದಿ ದಡದಲ್ಲಿರುವ ಶಿವಪೂರ,ಹವಳಗಾ ಗ್ರಾಮದ ವಿವಿಧ ಜಮೀನುಗಳಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಮರಳು ದಾಸ್ತಾನುಗಳ ಮೇಲೆ ದಾಳಿ ನಡೆಸಿ ಅಂದಾಜು 37 ಲಕ್ಷದ 40 ಸಾವಿರ ಮೌಲ್ಯದ ಒಟ್ಟು 1870 ಟ್ರಾಕ್ಟರ್ ಗಳಷ್ಟು ಮರಳನ್ನು ಜಪ್ತಿ ಮಾಡಿಕೊಂಡು 15 ಜನ ಆರೋಪಿತರ ವಿರುದ್ಧ 5 ಪ್ರಕರಣಗಳನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.ಕಾರ್ಯಚರಣೆಯಲ್ಲಿ ಭಾಗವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯವನ್ನು ಪೆÇೀಲಿಸ್ ವರಿಷ್ಠಾಧಿಕಾರಿಗಳು, ಹೆಚ್ಚುವರಿ ಪೆÇಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.