ಹಬೋಹಳ್ಳಿ : ಮಾಲವಿ  ಜಲಾಶಯದ ಬಳಿ ಕಾರ್ಮಿಕ ದಿನಾಚರಣೆ
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಮೇ.01 ತಾಲೂಕಿನ ಮಾಲವಿ  ಜಲಾಶಯದ ಬಳಿ ಗ್ರಾ ಪಂ ವತಿಯಿಂದ ವಿಶ್ವ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕೂಲಿ ಕಾರ್ಮಿಕರ ಸಂಘದ ತಾಲೂಕ ಸಂಚಾಲಕಿ ಕೊಟ್ರಮ್ಮ ಮಾತನಾಡಿ ಪ್ರತಿ ವರ್ಷಕ್ಕೊಮ್ಮೆ ಮೇ 1 ವಿಶ್ವ ಕಾರ್ಮಿಕ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಕೂಲಿ  ಕಾರ್ಮಿಕರಿಗೆ ಒಂದು ದಿನ ಬಿಡುವು ಮಾಡುವ ಜೊತೆಗೆ ಕಾರ್ಮಿಕರು ತಮ್ಮದೇ ಆದ ಸಂಘಟನೆ ಮಾಡುವ ಮೂಲಕ ಅವರ ಸಮಸ್ಯೆಗಳಿಗೆ ಸ್ಪಂದಿಸುವಂತಹ ಈ ಒಂದು ದಿನಾಚರಣೆ ಮಹತ್ವದ್ದಾಗಿದೆ ಎಂದರು.
ಗ್ರಾ ಪಂ ಪಿಡಿಒ ಶ್ರೀಕಾಂತ್ ಸಿಬ್ಬಂದಿಗಳಾದ ಕವಿತಾ ವೀರ ರತ್ನ ನಾಯಕ್ ಗುರುಡಪ್ಪ ಶ್ರೀನಿವಾಸ ಮೇಟಿಗಳಾದ ಶಶಿಕುಮಾರ್ ಟಿ ಕುಮಾರ್ ಜಗದೀಶ ಗೋಣೆಪ್ಪ ರಾಘವೇಂದ್ರ ಪೂಜಾರ್ ಸಿದ್ದಪ್ಪ ಇತರರಿದ್ದರು.
 ಕಾರ್ಯಕ್ರಮದಲ್ಲಿ ಹಿರಿಯ ಕಾರ್ಮಿಕರನ್ನು ಸನ್ಮಾನಿಸಿ  ಗೌರವಿಸಲಾಯಿತು.