ಜೀವನದಲ್ಲಿ ಆರೋಗ್ಯ ಕಾಳಜಿ ಅಗತ್ಯ
ಸಂಜೆವಾಣಿ ವಾರ್ತೆ
ಗಂಗಾವತಿ: ಪ್ರತಿಯೊಬ್ಬರ ಜೀವನದಲ್ಲಿ ಆರೋಗ್ಯ ಅತಿ ಮುಖ್ಯವಾಗಿದ್ದು, ಎಲ್ಲರೂ ಆರೋಗ್ಯದ ಬಗ್ಗೆ ಅತಿ ಹೆಚ್ಚು ಕಾಳಜಿ ವಹಿಸಬೇಕು ಎಂದು ಹೆಬ್ಬಾಳ ಬೃಹನ್ಮಠದ ನಾಗಭೂಷಣ ಸ್ವಾಮೀಜಿ ಹೇಳಿದರು. ಗಂಗಾವತಿ ನಗರದ ರಾಯಚೂರು ರಸ್ತೆಯ ವಿದ್ಯಾನಗರದಲ್ಲಿರುವ ಸ್ಫೂರ್ತಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಬೃಹತ್ ಆರೋಗ್ಯ ಉಚಿತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರದಲ್ಲಿ ಭಾಗವಹಿಸಿ, ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿಕೊಂಡು ಮಾತನಾಡಿದರು .
ಕೋಟಿ ಕೋಟಿ ಹಣ ಗಳಿಸಿದರೂ ಆರೋಗ್ಯ ಕಾಪಾಡಿಕೊಳ್ಳದಿದ್ದರೆ ಪ್ರಯೋಜನವಿಲ್ಲ. ಆರೋಗ್ಯವೇ ಮಹಾ ಭಾಗ್ಯವಾಗಿದ್ದು, ಪ್ರತಿಯೊಬ್ಬರೂ ತಮ್ಮ ತಮ್ಮ ಆರೋಗ್ಯವನ್ನು ಕೋಟ್ಯಂತರ ರೂಪಾಯಿ ಬೆಲೆಬಾಳುವ ಆಸ್ತಿಯಂತೆ ನೋಡಿಕೊಳ್ಳಬೇಕು. ಈ ಹಿಂದೆ ನಮ್ಮ ತಾತ, ಮುತ್ತಾತಾ, ಹಿರಿಯರು ತಮ್ಮ ಜೀವನ ಶೈಲಿಯ  ಆಹಾರ ಪದ್ಧತಿಯಲ್ಲಿ ಗುಣಮಟ್ಟದ ಆಹಾರವನ್ನು ಅನುಭೋಗಿಸುತ್ತಿದ್ದರು. ಇದರಿಂದ ಆರೋಗ್ಯ ಚೆನ್ನಾಗಿರುತ್ತಿತ್ತು. ಆದರೆ, ಇತ್ತೀಚೆಗೆ ಆಧುನಿಕ ಜೀವನ ಶೈಲಿಯ ಭರಾಟೆಯಲ್ಲಿ ಮನುಷ್ಯ ಒತ್ತಡದ ಜೀವನ ನಡೆಸಿ, ಆಹಾರ ಪದ್ಧತಿ ಯನ್ನು ಸಂಪೂರ್ಣ ಬದಲಾವಣೆ ಮಾಡಿಕೊಂಡಿದ್ದಾನೆ. ಇದರಿಂದಾಗಿ ಜೀವನದ ಆರೋಗ್ಯದ ಮೇಲೆ ಇಲ್ಲಸಲ್ಲದ ರೋಗಗಳು ಹುಟ್ಟಿಕೊಳ್ಳುತ್ತಿವೆ. ನಾವೆಲ್ಲರೂ ಈ ದಿಶೆಯಲ್ಲಿ ಎಚ್ಚೆತ್ತುಕೊಳ್ಳಬೇಕು. ಉತ್ತಮ ರೀತಿಯಲ್ಲಿ ಆಹಾರ ಸೇವನೆ ಮಾಡುವ ಮೂಲಕ, ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಬೇಕು ಎಂದು ಹೇಳಿದರು.
ನಂತರ ಮಾತನಾಡಿದ ಸ್ಪೂರ್ತಿ ಗ್ರೂಪ್ ಆಫ್ ಇನ್ಸ್ಟಿಟ್ಯೂಟಷನ್ಸ್ ಅಧ್ಯಕ್ಷ ಡಾ.ಬಸವರಾಜ ಶಿ ಸವಡಿ  ನಮ್ಮ ಗುರಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಸಲುವಾಗಿ ನಮ್ಮ ಸಹೋದರ ಡಾ.ಈಶ್ವರ ಶಿ.ಸವಡಿ ನಮ್ಮ ಕುಟುಂಬ ಯಾವಾಗಲೂ ನಿಮ್ಮ ಸೇವೆಗೆ ಸದಾ ಸಿದ್ದ ಮತ್ತು ಆರೋಗ್ಯದಿಂದ ಇದ್ರೇ ನಾವು ನೀವು ಚನ್ನಾಗಿ ಇರುತ್ತದೆ ಎಂದು ಸಲಹೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಡಾ.ಉಮೇಶ ವಿ.ಪುರದ, ಸ್ಪೂರ್ತಿ ಕಾಲೇಜು  ನಿರ್ದೇಶಕ ಡಾ.ಸತೀಶ್ ರಾಯ್ಕರ್,ಡಾ.ನಾಗರಾಜ ಗುಡ್ಲಾನೂರು,ಡಾ.ಬಸವರಾಜ ಅಯೋಧ್ಯ,ಡಾ.ರಾಜಶೇಖರ ನಾರಿನಾಳ,ಮಕ್ಕಳ ತಜ್ಞರಾದ ಡಾ.ಎಸ್. ಜಿ.ಮಟ್ಟಿ,ಚರ್ಮರೋಗ ತಜ್ಞರು ಡಾ.ಭರತ ಮೇಕ,ಡಾ.ಮೋಹನ,ಸೇರಿದಂತೆ ಇತರರು ಇದ್ದರು