ಅಲೆಮಾರಿ ಸಮುದಾಯದ ಕಾಲೋನಿಗಳಲ್ಲಿ ಬಜೆಪಿ ಅಭ್ಯರ್ಥಿಗೆ ಮತಯಾಚನೆ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.01: ತಾಲೂಕಿನ ಶ್ರೀಧರಗಡ್ಡೆ ಬಳಿ  ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗ ವಾಸವಿರುವ ಗುಡಾರನಗರದಲ್ಲಿ  ಇಂದು  ಬಳ್ಳಾರಿ ಜಿಲ್ಲಾ ಜುಗ್ಗಿ ಜೋಪಡಿಯ ನಿರ್ವಹಣಾ ಸಮಿತಿಯ ಸದಸ್ಯ ಹಾಗು ಎಸ್ಸಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರುಣಾಚಲಂ ನೇತೃತ್ವದಲ್ಲಿ ಮನೆ ಮನೆಗೆ ತೆರಳಿ ಮೋದಿಯವರ ಅಭಿವೃದ್ಧಿ  ಕಾರ್ಯಗಳ ಕುರಿತು ಜನರಿಗೆ ಮನವರಿಕೆ ಮಾಡಿ ಬಿಜೆಒಇಗೆ ಮತ ನೀಡುವಂತೆ ಮನವಿ ಮಾಡಲಾಯ್ತು.
ಇದೇ ವೇಳೆ ಸಂವಿಧಾನ ಶಿಲ್ಪಿ ಡಾ||ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪಂಚತೀರ್ಥ ಯೋಜನೆಗಳನ್ನು ಜಾರಿಗೆ ತರುವುದಕ್ಕೆ ಟೊಂಕಕಟ್ಟಿ ಅವಿರತ ಶ್ರಮಿಸಿದ ಭಾರತೀಯ ಜನಾತಾ ಪಕ್ಷವನ್ನು ಈ ಬಾರಿ ಮತ್ತೊಮ್ಮ ಮೋದಿಯನ್ನು ಪ್ರಧಾನಿಯನ್ನಾಗಿ ಮಾಡಲು ನಮ್ಮ ಅಭ್ಯರ್ಥಿ ಬಿ.ಶ್ರೀರಾಮುಲು ಅವರಿಗೆ ಮತ ನೀಡುವಂತೆ ಕೋರಿದರು.
ಕಾಂಗ್ರೇಸ್ ಪಕ್ಷವು ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತಗೊಂಡು ಉಳಿದ ಸಮುದಾಯಗಳನ್ನು ಕಡೆಗಣಿಸುತ್ತಿದೆ.  ಇಂತಹ ಪಕ್ಷವನ್ನು ಅಧಿಕಾರಕ್ಕೆ ತಂದರೆ ಮುಂದಿನ ದಿನಗಳಲ್ಲಿ ಸಾಕಷ್ಟು ಸಂಕಷ್ಟಗಳನ್ನು ಎದರಿಸಬೇಕಾಗಿದ್ದು. ದೇಶದ ಅಭಿವೃದ್ಧಿ ಭಾರತೀಯ ಜನತಾಪಾರ್ಟಿಯಿಂದ ಮಾತ್ರ ಸಾಧ್ಯವಿದ್ದು, ಅದಕ್ಕಾಗಿ ನಾವುಗಳ ಎಲ್ಲರೂ ಬಿ.ಜೆ.ಪಿ. ಗೆ ಮತನೀಡಿ ಹಾಗೂ ತಮ್ಮ ಸಮುದಾಯದ ಎಲ್ಲರೂ ಭಾರತೀಯ ಜನತಾ ಪಕ್ಷಕ್ಕೆ ಮತದಾನ ಮಾಡುವಂತೆ ಕರೆ ನೀಡಲಾಯಿತು.
ಈ ಸಂದರ್ಭದಲ್ಲಿ  ಎಸ್.ಸಿ. ಮೋರ್ಚಾ ಜಿಲ್ಲಾ ಕಾರ್ಯದರ್ಶಿಗ ಹೆಚ್.ಮಾರಣ್ಣ, ಎಸ್.ಸಿ. ಮೋರ್ಚಾ ತಾಲೂಕು ಅಧ್ಯಕ್ಷ ಆರ್.ಶಿವಶಂಕರ, ಪ್ರಧಾನ ಕಾರ್ಯದರ್ಶಿ ಹೆಚ್. ತಿಪ್ಪೇಸ್ವಾಮಿ ಹಲಕುಂದಿ, ವಿಶ್ವನಾಥ ಶರ್ಮಾ ಕಾರೇಕಲ್ಲು, ಕಂಪ್ಲಿ ಎಸ್.ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಕಪ್ಪಗಲ್ಲು ಹುಲಿಯಪ್ಪ ಹಾಗೂ ಇನ್ನೂ ಮುಂತಾದವರು ಇದ್ದರು.