ಕಾಂಗ್ರೆಸ್ ಪರ ಬಿರು ಬಿಸಿಲಿನಲ್ಲೂ  ಬಿರುಸಿನ ಪ್ರಚಾರ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.01: ದಿನೇ ದಿನೇ ಹೆಚ್ಚುತ್ತಿರುವ ಬಿರು ಬಿಸಿಲಿನ ತಾಪಮಾನದಂತೆ ನಗರದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಿಂದ ಲೋಕಸಭಾ ಚುನಾವಣೆಯ ಪ್ರಚಾರದ ಬಿಸಿ ಹೆಚ್ಚತೊಡಗಿದೆ. 
ನಗರದ 18  ನೇ ವಾರ್ಡಿನಲ್ಲಿ  ಇಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ತುಕರಾಂ ಅವರಿಗೆ ಮತ ನೀಡುವಂತೆ  ಎಪಿಎಂಸಿ ಅಧ್ಯಕ್ಷ ಕಟ್ಟೆಮನೆ ನಾಗೇಂದ್ರ ಹಾಗು ಪಕ್ಷದ ಹಿರಿಯ ಮುಖಂಡ ಬಿ.ರಾಂಪ್ರಸಾದ್ ನೇತೃತ್ವದಲ್ಲಿ ಮನೆ ಮನೆ ಮನೆಗೆ ತೆರಳಿ ಕರಪತ್ರ ನೀಡಿ  ಮತಯಾಚನೆ ಮಾಡಲಾಯ್ತು.
ಕಾಂಗ್ರೆಸ್ ಶ್ರಮಿಕರು, ದುಡಿಯುವ ವರ್ಗಗಳು, ಮಹಿಳೆಯರಿಗೆ ಆರ್ಥಿಕವಾಗಿ ಶಕ್ತಿ ತುಂಬವ ಕೆಲಸ ಮಾಡುತ್ತಿದೆ. ಆದರೆ ಹತ್ತು ವರ್ಷ ಪ್ರಧಾನಿ ಆಗಿ ಮೋದಿಗೆ ಒಂದೇ ಒಂದು ಭರವಸೆಯನ್ನೂ ಈಡೇರಿಸಲು ಸಾಧ್ಯವಾಗಿಲ್ಲ. ಬರೀ ಸುಳ್ಞು ಹೇಳ್ಕೊಂಡು ತಿರುಗಿದ್ರು.
ಬಿಜೆಪಿ ಸರ್ಕಾರ ಅನ್ನಭಾಗ್ಯದ ಅಕ್ಕಿಯ ಪ್ರಮಾಣವನ್ನು 2 ಕೆಜಿ ಕಡಿತ ಮಾಡಿತ್ತು. ನಾವು ಮತ್ತೆ ಅಧಿಕಾರಕ್ಕೆ ಬಂದು 10kg ಗೆ ಹೆಚ್ಚಿಸಿದ್ದೇವೆ. ಇದು ಕಾಂಗ್ರೆಸ್ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಸರ್ಕಾರ ಜಾರಿಗೆ ತಂದಿದ್ದ ಆಹಾರ ಭದ್ರತಾ ಕಾಯ್ದೆ ಯ ಫಲ.
ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭಾರತದ ವಿದ್ಯಾವಂತ ಯುವ ಸಮೂಹವನ್ನು ನಂಬಿಸಿದ ಮೋದಿ ಈಗ ಪಕೋಡ ಮಾರಿ ಎಂದು ಹೇಳಿ ಮೂರು ನಾಮ ಬಳಿದಿದ್ದಾರೆ. ಬೆಲೆ ಏರಿಕೆಗೆ ಬ್ರೇಕ್ ಹಾಕ್ತೀನಿ ಎಂದು ನಂಬಿಸಿ ದೇಶದ ಜನರುಗೆ ಮೂರು ನಾಮ ಹಾಕಿದ ಮೋದಿ ಮುಖ ನೋಡಿ ಮತ ಹಾಕಿದ್ರೆ ಆ ಮತಕ್ಕೆ ಗೌರವ ಬರುತ್ತಾ, ಮೋದಿಯ ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಮಧ್ಯಮ ವರ್ಗ ಮತ್ತು ಬಡವರಿಗೆ ಸ್ಪಂದಿಸುವ ಸಲುವಾಗಿ ನಾವು ಗ್ಯಾರಂಟಿಗಳನ್ನು ರೂಪಿಸಿ ಜಾರಿ ಮಾಡಿದ್ದೇವೆ. ಅದರಿಂದ ನಿಮಗೆ ಸಹಕಾರಿತಾಗಿದ್ದು. ಉತ್ತಮ ವ್ಯಕ್ತಿತ್ವದ ತುಕರಾಂ ಅವರಿಗೆ ಮತ ನೀಡಿ ಎಂದು ಮನವಿ ಮಾಡಿದರು.
ಈ ವೇಳೆ ಪಕ್ಷದ  ಮುಖಂಡರುಗಳಾದ ಸುರೇಶ್, ಅಬ್ದುಲ್ ಬರಿಸಾಬ್, ಹೊನ್ನಪ್ಪ, ಹಗರಿ ಗೋವಿಂದ ವಿ.ರಾಜಶೇಖರ, ಗುಂತಕಲ್ ಬಾಬು, ಶ್ರೀನಿವಾಸುಲು, ಎರ್ರಿಸ್ವಾಮಿ, ಬಾಲು, ಕಟ್ಟೆಪ್ಪ, ಮತ್ತು ನಾಯ್ಡು ಮತ್ತಿತರರು ಇದ್ದರು.