ಗ್ಯಾರಂಟಿ ಯೋಜನೆಗಳು ಜನರ  ಆರ್ಥಿಕ ಅಭಿವೃದ್ಧಿಗೆ ಸಹಕಾರಿ: ಅಲ್ಲಂ ಪ್ರಶಾಂತ್
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.01: ಗ್ಯಾರಂಟಿ ಯೋಜನೆಗಳು ರಾಜ್ಯದ ಜನರ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿವೆ ಎಂದು ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ಲಂ ಪ್ರಶಾಂತ್ ಹೇಳಿದ್ದಾರೆ.
ಅವರು ನಿನ್ನೆ  ನಗರದ 34ನೇ ವಾರ್ಡಿನ ಭತ್ರಿ ಪ್ರದೇಶದಲ್ಲಿ ನಗರ ಶಾಸಕ ಭರತ್ ರೆಡ್ಡಿ ಅವರೊಂದಿಗೆ  ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಅವರ ಪರ ಮತ ಯಾಚಿಸಿ ಮಾತನಾಡುತ್ತಿದ್ದರು.
ಕಳೆದ ವಿಧಾನಸಭೆ ಚುನಾವಣೆ ವೇಳೆ ಗ್ಯಾರಂಟಿ ಯೋಜನೆಗಳನ್ನು ನಮ್ಮ ಪಕ್ಷ ಪ್ರಕಟಿಸಿದಾಗ  ಬಿಜೆಪಿಯವರು ಕುಹಕವಾಡಿ.  ಈ  ಯೋಜನೆಗಳ ಜಾರಿ ಅಸಂಭವ ಎಂದಿದ್ದರು. ಆದರೆ ನಮ್ಮ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ಕೊಟ್ಟ ಮಾತಿನಂತೆ ಗ್ಯಾರೆಂಟಿ  ಯೋಜನೆಗಳನ್ನು ಜಾರಿಗೆ ತಂದಿದೆ  ಎಂದು ಶಾಸಕ  ಹೇಳಿದರು.
ಜನರ ಕಷ್ಟಕ್ಕೆ ನೆರವಾಗುವುದು ನಮ್ಮ ಪಕ್ಷ ಕಾಂಗ್ರೆಸ್,  ನಾಲ್ಕು ಸಲ ಶಾಸಕರಾಗಿ, ಒಮ್ಮೆ ಸಚಿವರಾಗಿದ್ದ ತುಕಾರಾಂ ಅವರು ಸಜ್ಜನ ರಾಜಕಾರಣಿ, ಅವರಿಗೆ ನಿಮ್ಮ ಅಮೂಲ್ಯವಾದ ಮತ ನೀಡಿ ಎಂದು ಮನವಿ ಮಾಡಿದರು.
ಪಾಲಿಕೆಯ ಸದಸ್ಯೆ ಮಾಜಿ ಮೇಯರ್ ರಾಜೇಶ್ವರಿ ಸುಬ್ಬರಾಯುಡು ,  ಬುಡಾ ಅಧ್ಯಕ್ಷ ಆಂಜನೇಯಲು, ವಿಷ್ಣು ಬೋಯಪಾಟಿ, ಶೋಭಾ ಹಾಗೂ ಸ್ಥಳೀಯ ಮುಖಂಡರಾದ ಲತಾವರಂ ಮಲ್ಲಿ, ಲಾಲಮೋಹನ್, ಗುರ್ರಂ ಮೋಹನದಾಸ್, ನೆಕ್ಕಲಪೋಡಿ ಹರಿಬಾಬು, ಚೇರಕುರಿ ಅನೂಪ್, ಅಭಿರಾಂ, ಕಟ್ಟಾ ರಘು ಮೊದಲಾದವರು ಇದ್ದರು.