ಸಂತೇಬೆನ್ನೂರಿನಲ್ಲಿ ಜಿ. ಬಿ. ವಿನಯ್ ಕುಮಾರ್ ರೋಡ್ ಶೋ: ಭಾರೀ ಬೆಂಬಲ, ಅದ್ಧೂರಿ ಸ್ವಾಗತ
ಸಂಜೆವಾಣಿ ವಾರ್ತೆ
ಚನ್ನಗಿರಿ.ಮೇ.೧: ದಾವಣಗೆರೆ ಲೋಕಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಅವರು ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಗ್ರಾಮದಲ್ಲಿ ಭರ್ಜರಿ ರೋಡ್ ಶೋ ನಡೆಸಿದರು. ನೂರಾರು ಗ್ರಾಮಸ್ಥರು ವಿನಯ್ ಕುಮಾರ್ ಅವರಿಗೆ ಅದ್ಧೂರಿ ಸ್ವಾಗತ ಕೋರಿದರು. ಜನರಿಂದ ಭಾರೀ ಬೆಂಬಲ ವ್ಯಕ್ತವಾಯಿತು.ವಿನಯ್ ಕುಮಾರ್ ಅವರು ಸಂತೇಬೆನ್ನೂರಿಗೆ ಆಗಮಿಸುತ್ತಿದ್ದಂತೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಗ್ರಾಮಸ್ಥರು, ಹೂವಿನ ಹಾರ ಹಾಕಿ ಅದ್ಧೂರಿಯಾಗಿ ಬರಮಾಡಿಕೊಂಡರು. ನೂರಾರು ಜನರು ವಿನಯ್ ಕುಮಾರ್ ಪರ ಜೈಕಾರ ಕೂಗಿದರು.ಈ ವೇಳೆ ಜನರನ್ನುದ್ದೇಶಿಸಿ ಮಾತನಾಡಿದ ಜಿ. ಬಿ. ವಿನಯ್ ಕುಮಾರ್ ಅವರು, 2019ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರದ ಜನರಿಗೆ ಆಯ್ಕೆ ಇರಲಿಲ್ಲ. ಬಿಜೆಪಿಗೆ ಇಲ್ಲವೇ ಕಾಂಗ್ರೆಸ್ ಗೆ ಮತ ಹಾಕಬೇಕಾದ ಅನಿವಾರ್ಯತೆ ಇತ್ತು. ಆದ್ರೆ,
ಈ ಬಾರಿ ಮತ್ತೊಂದು ಆಯ್ಕೆ ಇದೆ. ಸ್ಪಷ್ಟವಾದ ಅವಕಾಶವೂ ಇದೆ. ಸಂತೇಬೆನ್ನೂರು ಗ್ರಾಮಕ್ಕೆ ಈ ಹಿಂದೆ ಬಂದಾಗಲೂ ಜನರು ಪ್ರೀತಿ ತೋರಿದ್ದರು. ಇಂದು ತೋರುತ್ತಿರುವ ಪ್ರೀತಿ, ವಿಶ್ವಾಸ, ಭಾರೀ ಬೆಂಬಲ ನನಗೆ ಮತ್ತಷ್ಟು ಚೈತನ್ಯದ ಜೊತೆ ಶಕ್ತಿ ಕೊಟ್ಟಿದೆ ಎಂದು ಹೇಳಿದರು.ಈ ವೇಳೆ ಸಂತೇಬೆನ್ನೂರು ಗ್ರಾಮದ ಮುಖಂಡರಾದ ಇರ್ಫಾನ್, ರಾಘಣ್ಣ, ಗಂಗಣ್ಣ, ರಾಜೀಫ,  ಖಾದರ್, ಫೈರಜ್, ಸಾಹಿಂ, ಜೌಬಿ ಸಾಬ್, ಜಬೀರ್, ಜೌಕೀರ್, ಯಂಕೇಶ್ವರಪ್ಪ, ನಾಗರಾಜ್ ಮತ್ತಿತರರು ಹಾಜರಿದ್ದರು.