ತರಳಬಾಳು ಶ್ರೀಗಳ ಆಶೀರ್ವಾದ ಪಡೆದ ನಟ ಶಿವರಾಜ್ ಕುಮಾರ್ ದಂಪತಿ

ದಾವಣಗೆರೆ. ಮೇ.೧; ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠಕ್ಕೆ  ಹ್ಯಾಟ್ರಿಕ್ ಹೀರೋ ನಟ ಶಿವರಾಜ್ ಕುಮಾರ್ ಹಾಗೂ ಪತ್ನಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್  ಭೇಟಿ ಮಾಡಿ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರ ಆಶೀರ್ವಾದ ಪಡೆದರು. ಐಕ್ಯಮಂಟಪಕ್ಕೆ ತೆರಳಿ ಲಿಂ.ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಹಾಗೂ ಶ್ರೀ ಗುರುಶಾಂತೇಶ್ವರ ಸ್ವಾಮೀಜಿಯವರ ಕರ್ತೃಗದ್ದಿಗೆಗೆ ಪುಷ್ಪ ನಮನ ಸಲ್ಲಿಸಿದರು.ಶ್ರೀಗಳು ೧೯೮೨ರಲ್ಲಿ ಡಾ. ರಾಜಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಅವರು ಸಿರಿಗೆರೆ ಭೇಟಿ ಮಾಡಿದ್ದ ದಿನಗಳನ್ನು ಹಾಗೂ ಬಂಗಾರಪ್ಪನವರು ನಾವು ಶಿವಮೊಗ್ಗದಲ್ಲಿ ಒಟ್ಟಿಗೆ ಶಿಕ್ಷಣ ಪಡೆದ ಕ್ಷಣಗಳನ್ನು ಶ್ರೀಗಳು ಮೆಲುಕು ಹಾಕಿದರು. ನಮ್ಮದು ಪಕ್ಷಾತೀತ ಮಠ. ನಾವು ಎಲ್ಲರಿಗೂ ಮಾರ್ಗದರ್ಶನ ಮಾಡತ್ತೇವೆ. ದೇಶದಲ್ಲಿ ಪಕ್ಷಾತೀತ ನಿಷೇಧವಾಗಬೇಕು. ದೇಶ ಹಾಗೂ ರಾಜ್ಯದಲ್ಲಿ ಒಂದೇ ಸಲ ಚುನಾವಣೆ ಆಗಬೇಕಿದೆ. ಜಿ.ಪಂ, ತಾ.ಪಂ, ಗ್ರಾ.ಪಂ. ಚುನಾವಣೆಗಳು ಏಕಕಾಲಕ್ಕೆ ನಡೆಯಬೇಕು. ಒಬ್ಬ ರಾಜಕಾರಣಿ ಒಂದು ಪಕ್ಷದಲ್ಲಿ ಸತತವಾಗಿ ೫ ವರ್ಷ ಇದ್ದರೆ ಮಾತ್ರ ಅವನಿಗೆ ಆ ಪಕ್ಷದಿಂದ ಟಿಕೆಟ್ ನೀಡಬೇಕು. ಪದೇ ಪದೇ ಪಕ್ಷ ಬದಲಾಯಿಸಲು ಅವಕಾಶ ನೀಡಬಾರದು ಹಾಗೂ ಎಂದರು.ನಟ ಶಿವರಾಜಕುಮಾರ್ ಮಾತನಾಡಿ ಫೋಟೋ ಗ್ಯಾಲರಿಯಲ್ಲಿ ನಮ್ಮ ತಂದೆ ಡಾ.ರಾಜಕುಮಾರ್‌ರವರು, ತಮ್ಮ ಪುನೀತ್ ಹಾಗೂ ಮಾವ ಬಂಗಾರಪ್ಪನವರು ಶ್ರೀಮಠದೊಂದಿಗೆ ಹೊಂದಿರುವ ಸಂಬAಧ ನೋಡಿ ತುಂಬಾ ಖುಷಿಯಾಯಿತು. ಈ ಪ್ರೀತಿ, ವಿಶ್ವಾಸ ಹಾಗೂ ನಿಮ್ಮ ಆಶೀರ್ವಾದ ನಮ್ಮ ಮೇಲೆ ಸದಾ ಇರಲಿ ಎಂದರು.ಗೀತಾ ಶಿವರಾಜ್‌ಕುಮಾರ್ ಮಾತನಾಡಿ ಶ್ರೀಗಳನ್ನು ನೋಡಿದ ಮೇಲೆ ದೇವರನ್ನೇ ನೋಡಿದಂತಾಯಿತು. ಸಿರಿಗೆರೆ ಮಠದಂತೆ ನಮ್ಮ ಶಕ್ತಿಧಾಮದಲ್ಲಿ ಬೆಳಗಾವಿ, ಯಾದಗಿರಿ, ಕಲಬುರಗಿ, ರಾಯಚೂರು ಇನ್ನಿತರೆ ಕಡೆಗಳಿಂದ ಬಂದು ನೆಲೆಸಿರುವ ಸು. ೨೦೦ ಹೆಣ್ಣು ಮಕ್ಕಳಿಗೆ  ಉಚಿತ ಶಿಕ್ಷಣ, ವಸತಿ, ಊಟದ ಸೌಲಭ್ಯ ಕಲ್ಪಿಸಿದ್ದೇವೆ. ಫೋಟೋ ಗ್ಯಾಲರಿ ವೀಕ್ಷಿಸಿ ನಮ್ಮ ತಂದೆಯವರು, ಮಾವನವರು ಶ್ರೀಮಠದೊಂದಿಗೆ ಹೊಂದಿದ್ದ ಸಂಬAಧ ತಿಳಿಯಿತು. ನೀವು ಮಾಡುತ್ತಿರುವ ಕೆಲಸಗಳಲ್ಲಿ ಅಲ್ಪ ಕೆಲಸಗಳನ್ನಾದರೂ ಸಹ ನಾವು ಮಾಡಲು ನಿಮ್ಮ ಆಶೀರ್ವಾದ ಮುಖ್ಯ ಎಂದರು.ಸಿರಿಗೆರೆಯ ಕಾಂಗ್ರೆಸ್ ಮುಖಂಡರಾದ ನಾಗರಾಜ್ ಬೆಲ್ಲದ್, ಚೇತನ್, ಸಿರಿ, ತಿಪ್ಪೇಶ್, ವಾಲ್ಮಿಕಿ, ಮಧು ಹಾಗೂ ಅಪಾರ ಅಭಿಮಾನಿಗಳು ಇದ್ದರು.