ಕೆಪಿಸಿಸಿಯ ಸಫಾಯಿ ಕರ್ಮಚಾರಿ ಘಟಕದ ರಾಜ್ಯ ಉಪಾಧ್ಯಕ್ಷರಾಗಿ ಕಂದುಕೂರು ರಾಮುಡು ನೇಮಕ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.01: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ)ಯ ಪೌರಕಾರ್ಮಿಕರು ಮತ್ತು ಸಫಾಯಿ ಕರ್ಮಚಾರಗಳ ವಿಭಾಗಕ್ಕೆ ರಾಜ್ಯ  ಉಪಾಧ್ಯಕ್ಷರನ್ನಾಗಿ ನಗರದ ಕಂದುಕೂರು ರಾಮುಡು ಅವರನ್ನು ರಾಜ್ಯ ಅಧ್ಯಕ್ಷ  ಮುರುಳಿ ಅಶೋಕ ಸಾಲಪ್ಪ ಅವರು ಎ.ಐ.ಸಿ.ಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,  ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವುಕುಮಾರ್, ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ  ನಿರ್ದೇಶನದಂತೆ ನೇಮಕ ಮಾಡಿದ್ದಾರೆ.
ಕೆಪಿಸಿಸಿಯ ಮಾರ್ಗದರ್ಶನ ಹಾಗೂ ಬಳ್ಳಾರಿ ನಗರ ಜಿಲ್ಲೆಯ ಅಧ್ಯಕ್ಷರು ಮತ್ತು ರಾಜ್ಯದ ನಾಯಕರ ಮಾರ್ಗದರ್ಶನ ಸಹಕಾರದೊಂದಿಗೆ ಸಫಾಯಿ ಕರ್ಮಚಾರಿಗಳ ಶ್ರೇಯೋಭಿವೃದ್ಧಿಗಾಗಿ ಕಾರ್ಯನಿರ್ವಹಿಸಿ ಈ ಮೂಲಕ ಕಾಂಗ್ರೆಸ್ ಪಕ್ಷದ ಸಂಘಟನೆ ಮತ್ತು ಬಲವರ್ಧನೆಗೆ ಕಾರ್ಯೋನ್ಮುಖರಾಗಬೇಕೆಂದು ಅವರು ರಾಮುಡು ಅವರಿಗೆ ಸೂಚಿಸಿದ್ದಾರೆ.
ಕಳೆದ 30 ವರ್ಷಗಳ ಕಾಲ  ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ,  ಜಿಲ್ಲಾ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಉಪಾಧ್ಯಕ್ಷನಾಗಿ, ಜಿಲ್ಲಾ ಸಫಾಯಿ ಕರ್ಮಚಾರಿಗಳ ನಾಮ ನಿರ್ದೇಶನದ ಸದಸ್ಯನಾಗಿ,  ಜಿಲ್ಲಾ ಮ್ಯಾನ್ಯುವೆಲ್ ಸ್ಕ್ಯಾವೆಂಜರ್ಸ್ ಗಳ ಜಿಲ್ಲಾ ಸಂಯೋಜಕನಾಗಿ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯ ಕಾರ್ಯದರ್ಶಿಯಾಗಿ,  ಕರ್ನಾಟಕ ಪ್ರದೇಶ್ ಕಾಂಗ್ರೇಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದಿಂದ ಹುಬ್ಬಳ್ಳಿ-ಧಾರವಾಡ ನಗರದ 2023 ನೇ ವಿಧಾನ ಸಭೆ ಚುನಾವಣೆಯ ವೀಕ್ಷಕರಾಗಿ  ಕಾಂಗ್ರೆಸ್ ಪಕ್ಷವು ನೀಡಿರುವಂತಹ ಪ್ರತಿಯೊಂದು ಚುನಾವಣೆಗಳಲ್ಲಿ ಸಕ್ರಿಯವಾಗಿ ನಿಷ್ಠಾವಂತ ಕಾರ್ಯಕರ್ತನಾಗಿ  ಕಾರ್ಯ ನಿರ್ವಹಿಸಿದ ನನ್ನ ಸೇವೆಯನ್ನು ಪರಿಗಣಿಸಿ ನನ್ನ ಈ ನೇಮಕವಾಗಿದೆ.
ಪಕ್ಷದ ಮುಖಂಡರುಗಳಾದ ಅಲ್ಲಂ ವೀರಭದ್ರಪ್ಪ,  ಧರ್ಮಸೇನಾ,  ಸಚಿವ ಬಿ. ನಾಗೇಂದ್ರ, ನಗರ ಶಾಸಕ  ನಾರಾಭರತರೆಡ್ಡಿ, ನಗರ ಡಿ.ಸಿ.ಸಿ ಅಧ್ಯಕ್ಷ ಅಲ್ಲಂ ಪ್ರಶಾಂತ ಅವರ ಮಾರ್ಗದರ್ಶನದಲ್ಲಿ  ಪಕ್ಷ ವಹಿಸಿರುವಂತಹ  ರಾಜ್ಯ ಉಪಾಧ್ಯಕ್ಷರ ಹುದ್ದೆಯನ್ನು ಸಕ್ಷಮವಾಗಿ ಮತ್ತು ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತೆನೆಂದು ರಾಮುಡು ಅವರು ಹೇಳಿದ್ದಾರೆ.