ಸ್ವಾತಂತ್ರ್ಯ ತಂದು ಕೊಟ್ಟಂತಹ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಬೇಕು; ಎಸ್ ಎಸ್

ಸಂಜೆವಾಣಿವಾರ್ತೆ
ಹರಪನಹಳ್ಳಿ.ಮೇ.1;ಸ್ವಾತಂತ್ರ್ಯ ತಂದುಕೊಟ್ಟವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಟೀಕೆ ಮಾಡುವುದಲ್ಲ, ದೇಶಕ್ಕೆ ಅವರ ಕೊಡುಗೆ ಏನು ಎಂಬುದನ್ನು ಜನತೆಗೆ ತಿಳಿಸಿ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಡಾ.ಎಸ್.ಶಾಮನೂರು ಶಿವಶಂಕರಪ್ಪ ಹೇಳಿದರು.ಪಟ್ಟಣದ ಆರ್‌ಎಸ್‌ಎನ್ ಶಾಲೆಯ ಆವರಣದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು ಮಹಾತ್ಮಗಾಂಧಿ, ಜವಹಾರಲಾಲ್ ನೇಹರು, ಸೇರಿದಂತೆ ಅನೇಕರು ಸ್ವಾತಂತ್ರö್ಯ ತಂದು ಕೊಟ್ಟಿದ್ದಾರೆ ಅದರಲ್ಲೂ ಎಲ್ಲರೂ ಕಾಂಗ್ರೆಸ್ ಪಕ್ಷದವರಾಗಿದ್ದಾರೆ ಅವರನ್ನು ಟೀಕೆ ಮಾಡುವುದು ಅವರ ಘನತೆ ಹೆಚ್ಚುವುದಿಲ್ಲ ಎಂದರು.ಬಿಜೆಪಿಯವರು ದೇಶದಲ್ಲಿ ನಾಲ್ಕಾರು ಶ್ರೀಮಂತರನ್ನು ಇಟ್ಟುಕೊಂಡು ಅವರಿಗೆ ಅನುಕೂಲ ಕಲ್ಪಿಸಿಕೊಟ್ಟು ಅವರಿಗೆ ಮಾರಾಟ ಮಾಡಲು ಹೊರಟ್ಟಿದ್ದಾರೆ, ಹಣವಿದ್ದವರಿಗೆ ಅಧಿಕಾರ ಕೊಡುವ ಅಮೀಷವೊಡ್ಡಿ  ರಾಜಕೀಯ ಮಾಡುತ್ತಿರುವ ಬಿಜೆಪಿ ಮೋದಿಯವರಿಗೆ ಮತ ಹಾಕಬೇಕೆ ಅಥವಾ ಸ್ವಾತಂತ್ರö್ಯ ತಂದು ಕೊಟ್ಟಂತಹ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಬೇಕು ಎನ್ನುವುದನ್ನು ಪ್ರಜಾಪ್ರಭುತ್ವದಲ್ಲಿ ತಾವೆಲ್ಲರೂ ಚಿಂತನೆ ಮಾಡಬೇಕು ಎಂದ ಅವರು ಐಟಿ, ಇಡಿ ಮೂಲಕ ಜನರಿಗೆ ಎದರಿಸಿ, ತಮ್ಮ ಕೆಲಸವನ್ನು ಮಾಡುತ್ತಿರುವ ಅವರು ಸೇಡಿನ ರಾಜಕಾರಣವನ್ನು ಮಾಡುತ್ತಿದ್ದಾರೆ, ಯಾಕೇಂದ್ರೆ ಅವರನ್ನು ಐಟಿ, ಇಡಿಯವರು ಕಳಿಸುತ್ತಾರೆ ಎನ್ನುವ ಭಯದಿಂದ ದೊಡ್ಡ ಶ್ರೀಮಂತರು ಬಿಜೆಪಿಯಲ್ಲಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.ಪ್ರಧಾನಮಂತ್ರಿಗಳಾಗಿ ಪ್ರತಿಯೊಂದು ತಾಲೂಕಿಗೂ ಬಂದು ಚುನಾವಣಾ ಪ್ರಚಾರ ಮಾಡುತ್ತಿರುವುದು ಎಷ್ಟು ಸರಿ ಇದೆ ಎಂದು ಪ್ರಶ್ನಿಸಿದ ಅವರು ಈ ಚುನಾವಣೆಯಲ್ಲಿ ರಾಜ್ಯದಲ್ಲಿ 28 ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ಹೇಳುತ್ತಾರೆ ಆದರೆ ಈ ಬಾರಿ ನಾವು ರಾಜ್ಯದಲ್ಲಿ 28 ಸ್ಥಾನಗಳನ್ನು ಪಡೆಯಲಿದ್ದೇವೆ ಎಂದ ಅವರು ಡಾ.ಪ್ರಭ ಮಲ್ಲಿಕಾರ್ಜುನರವರ ಗೆಲುವು ಖಚಿತವಾಗಿದ್ದು, ಪ್ರಭುದ್ಧ ಮತದಾರರು ಮತ ಹಾಕಿ, ತಮ್ಮವರ ಮೂಲಕ ಮತ ಹಾಕಿಸುವುದರೊಂದಿಗೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಕೋರಿದರು.