ಆರೋಗ್ಯ ನಿರೀಕ್ಷಕರ ಕಚೇರಿಯಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆ
ಕಲಬುರಗಿ,ಮೇ.1- ಜಿಲ್ಲಾ ಕೊಳಗೇರಿ ನಿವಾಸಿಗಳ ಒಕ್ಕೂಟ ಹಾಗೂ ಕಲ್ಯಾಣ ಕರ್ನಾಟಕ ಗುತ್ತಿಗೆ ಸಫಾಯಿ ಕರ್ಮಚಾರಿ ಸಂಘಟನೆ ವತಿಯಿಂದ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯನ್ನು ನಗರದ ಶಹ ಬಜಾರ್ ಆರೋಗ್ಯ ನಿರೀಕ್ಷಕರ ಕಚೇರಿಯಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಕರಾದ ತುಕ್ಕಾರೆಡ್ಡಿ, ಸಮಿತಿ ಅಧ್ಯಕ್ಷರಾದ ಅಲ್ಲಮಪ್ರಭು ನಿಂಬರ್ಗಾ, ಕಾರ್ಯದರ್ಶಿಗಳಾದ ವಿಕಾಸ ಸವಾರಿಕರ, ಅನಿಲ್ ಚಕ್ರ, ಬ್ರಹ್ಮಾನಂದ ಮಿಂಚಾ, ಮಲ್ಲಿಕಾರ್ಜುನ್ ಬಾಪುನಗರ, ಜಗನ್ನಾಥ ಪೂಜಾರಿ,ಪೀರಪ್ಪ, ಶಿವಯೋಗಿ ಕಿವಡೆ, ರಾಜಕುಮಾರ ಮದ್ಯಾನಕರ್, ಕಮಲಾಭಾಯಿ ಖಾನಾಪುರ, ಜಗದೇವಿ, ಚಂದ್ರಕಲಾ, ಇಂದುಮತಿ, ಹಾಗೂ ಸಮಿತಿಯ ಪದಾಧಿಕಾರಿಗಳು ಮತ್ತು ಪೌರಕಾರ್ಮಿಕರು ಉಪಸ್ಥಿತರಿದ್ದರು.