ಮೇ ೩ರಂದು ಕರಗ ಮಹೋತ್ಸವ
ಕೆ.ಆರ್. ಪುರ, ಮೇ.೧- ಮಹದೇವಪುರ ಕ್ಷೇತ್ರದ ಕಾಡುಗೋಡಿ ಚನ್ನಸಂದ್ರದಲ್ಲಿ ೧೨ನೇ ವರ್ಷದ ಶ್ರೀ ದ್ರೌಪತಾಂಭ ಧರ್ಮರಾಯಸ್ವಾಮಿ ಕರಗ ಶಕ್ತೋತ್ಸವ ಹಾಗೂ ಪಲ್ಲಕ್ಕಿ ಮಹೋತ್ಸವ ಇದೇ ೩ರಂದು ಅದ್ಧೂರಿಯಾಗಿ ನಡೆಯಲಿದೆ.
ಕರಗ ಮಹೋತ್ಸವ ಒಂದು ವಾರಗಳ ಕಾಲ ನಡೆಯ ಲಿದ್ದು, ಇಂದು ರಾತ್ರಿ ಹಸಿಕರಗ ಮಹೋತ್ಸವ ನಡೆಯಲಿದ್ದು, ೩ರಂದು ಹೂಕರಗ ನಡೆಯಲಿದೆ ಎಂದು ಕರಗ ಸಮಿತಿ ಅಧ್ಯಕ್ಷ ಸಿ.ಎ.ಚಂದ್ರಶೇಖರ್ ಅವರು ನುಡಿದರು.
ಕರಗ ಮಹೋತ್ಸವದ ಹಿನ್ನೆಲೆಯಲ್ಲಿ ಕಲ್ಯಾಣೋತ್ಸವ,ಆರತಿ ಉತ್ಸವ,ಸವಾರಮ್ಮ ದೇವಿಗೆ ವಿಶೇಷ ಪೂಜಾ ಉತ್ಸವ ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದರು.
ಕರಗ ಮಹೋತ್ಸವದಲ್ಲಿ ಆದಿಶಕ್ತಿ ಪಿಠಾಧ್ಯಕ್ಷರಾದ ಪ್ರಣವಾನಂದಪುರಿ ಸ್ವಾಮಿಜಿ,ಮಾಜಿ ಸಚಿವ ಅರವಿಂದ ಲಿಂಬಾವಳಿ, ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಅವರು ಸೇರಿದಂತೆ ಹಲವು ಸಮಾಜದ ಮುಖಂಡರು ಕರಗ ಮಹೋತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಮಹದೇವಪುರ ಕ್ಷೇತ್ರದ ಚನ್ನಸಂದ್ರನಾಗೋಂಡನಹಳ್ಳಿ,ರಾಮೇಗೌಡರನಗರ ಮತ್ತು ಎಕೆಜಿ ಕಾಲೋನಿಯ ವಹ್ನಿಕುಲಸ್ಥರು ಹಾಗೂ ಗ್ರಾಮಸ್ಥರು ಸಮ್ಮುಖದಲ್ಲಿ ನಡೆಯಲಿದ್ದು,ವರ್ತೂರು,ವೈಟ್ ಫೀಲ್ಡ್, ಹೊರಮಾವು,ರಾಮಗೊಂಡನಹಳ್ಳಿ ಸೇರಿದಂತೆ ಸಾವಿರಾರು ಮಂದಿ ಭಕ್ತಾದಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.