ವಿಶ್ವಕರ್ಮ ಮಹಾಸಭಾ ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ಮಾರುತಿ ಕಮ್ಮಾರ ಆಯ್ಕೆ
ಕಲಬುರಗಿ,ಮೇ 1:ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಜಿಲ್ಲಾ ಘಟಕ ಆಯೋಜಿಸಿದ ಸಭೆಯಲ್ಲಿ
ಮಾರುತಿ ಎಂ ಕಮ್ಮಾರ ಅವರನ್ನು ಜಿಲ್ಲಾ ಯುವ ಘಟಕದ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಪದಗ್ರಹಣ ಸಮಾರಂಭ ಆಯೊಜಿಸಲಾಯಿತು.ಸಮಾರಂಭದ ಸನ್ನಿಧಾನವನ್ನು ವಿಶ್ವಕರ್ಮ ಮಠಾಧಿಪತಿಗಳ ಮತ್ತು ಸ್ವಾಮೀಜಿಗಳ ರಾಜ್ಯಮಟ್ಟದ ಸಂಘಟನಾ ವೇದಿಕೆ ರಾಜ್ಯಾಧ್ಯಕ್ಷ ಪೂಜ್ಯ ದೊಡ್ಡೇಂದ್ರ ಮಹಾಸ್ವಾಮೀಜಿಮತ್ತು ಸುಲೇಪೇಟ ವಿಶ್ವಕರ್ಮ ಏಕದಂಡಗಿ ಮಠದ ಪೂಜ್ಯ ಚಂದ್ರಶೇಖರ ಮಹಾಸ್ವಾಮೀಜಿ ವಹಿಸಿದ್ದರು.ಮುಖ್ಯ ಅಥಿತಿಗಳಾಗಿ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಹಿತ್ ವೈ ವಿಶ್ವಕರ್ಮ ಕಲ್ಲೂರ್,ಕಲಬುರಗಿ ಮತ್ತು ಬೀದರ ಜಿಲ್ಲೆಗಳ ಉಸ್ತುವಾರಿಅಶೋಕ ಎಸ್.ಪೆÇದ್ದಾರ ಹರಸೂರ, ಅತಿಥಿಗಳಾಗಿ ಗೌರವ ಅಧ್ಯಕ್ಷ ಸುಧಾಕರ ಎಸ್.ಪೆÇದ್ದಾರ ಹರಸೂರ,ಜಿಲ್ಲಾ ಮಹಿಳಾ ಅಧ್ಯಕ್ಷೆ ಚಿತ್ರಲೇಖಾ ಅ.ಟೆಂಗಳಿಕರ್ ಆಗಮಿಸಿದ್ದರು.ಜಿಲ್ಲಾಧ್ಯಕ್ಷ ಕಮಲಾಕರ ವಿಶ್ವಕರ್ಮ ಅರಣಕಲ ಅಧ್ಯಕ್ಷತೆ ವಹಿಸಿದ್ದರು.
ಕಲಬುರಗಿ ಜಿಲ್ಲೆಯ ವಿಶ್ವಕರ್ಮ ಸಮಾಜದ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ರಾಜು ಮಹಾಗಾಂವ,ಮಂಜುನಾಥ್ ಕಮ್ಮಾರ ಸೇರಿದಂತೆ ಹಲವರು ಭಾಗವಹಿಸಿದರು.