ಪ್ರೀಮಿಯರ್ ಲೀಗ್‌ನ ೨ನೇ ಆಟಗಾರರ ಹರಾಜು
ಆನೇಕಲ್.ಮೇ.೦೧:ಗ್ರಾಮೀಣ ಪ್ರತಿಭೆಗಳಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಜೊತೆಗೆ ಯುವಕರನ್ನು ದುಶ್ಚಟಗಳಿಂದ ದೂರ ಮಾಡುವ ಉದ್ದೇಶದಿಂದ ಐಪಿಎಲ್ ಮಾದರಿಯಲ್ಲಿಯೇ ಹೀಲಲಿಗೆ ಪ್ರೀಮಿಯರ್ ಲೀಗ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ೨ ನೇ ಸೀಜನ್ ಮೇ ೧೨ ರಂದು ಆರಂಭಗೊಳ್ಳಲಿದೆ ಎಂದು ಆಯೋಜಕರಾದ ಹೀಲಲಿಗೆ ಸಂತೋಷ್ (ಟೋನಿ) ತಿಳಿಸಿದರು.
ಅವರು ಹಳೆ ಚಂದಾಪುರದಲ್ಲಿ ಟಿ.ಎಸ್.ಗಾರ್ಡನ್ ಹೋಟಲ್ ಆವರಣದಲ್ಲಿ ನಡೆದ ಆಟಗಾರರ ಹರಾಜು ಪ್ರಕ್ರಿಯೆ ಸಭೆಯಲ್ಲಿ ಬಾಗವಹಿಸಿ ಮಾತನಾಡಿದರು. ಈಗಾಗಲೇ ಹೀಲಲಿಗೆ ಪ್ರೀಮಿಯರ್ ಲೀಗ್ ಮೊದಲನೆ ಸೀಜನ್ ಆರಂಭಿಸಿ ಯಶಸ್ವಿಗಳಿಸಿದ್ದು ಮುಂದುವರೆದ ಬಾಗವಾಗಿ ಮೇ ೧೨ ರಂದು ೨ ನೇ ಸೀಜನ್ ಆರಂಭಗೊಳ್ಳಲಿದ್ದು ಈ ನಿಟ್ಟಿನಲ್ಲಿ ಇಂದು ಏಪಿಎಲ್ ಮಾದರಿಯಲ್ಲಿಯೇ ಆಟಗಾರರ ಹರಾಜು ಪ್ರಕ್ರಿಯೆ ನಡೆಸಲಾಯಿತು. ಇನ್ನು ಈ ಪಂದ್ಯಾವಳಿಯಲ್ಲಿ ಒಟ್ಟು ೭ತಂಡಗಳು ಬಾಗವಹಿಸಲಿದ್ದು ಗೆದ್ದಂತಹ ತಂಡಗಳಿಗೆ ಪಾರಿತೋಶಕ ಹಾಗೂ ಬಹುಮಾನವನ್ನು ನೀಡಲಾಗುವುದು ಎಂದು ತಿಳಿಸಿದರು.
ಹೀಲಲಿಗೆ ಲಯನ್ಸ್ ತಂಡದ ಮಾಲೀಕರಾದ ವೇಣು ಗೋಪಾಲ್ ಮತ್ತು ರಮೇಶ್, ಮತ್ತು ಹೀಲಲಿಗೆ ಲಜೆಂಟ್ಸ್ ತಂಡದ ಮಾಲೀಕರಾದ ಮದು ಹಾಗೂ ಮನು ವಾರಿಯರ್‍ಸ್ ತಂಡದ ಮಾಲೀಕರಾದ ವಿಕೆಟಿ ರಾಮು, ಮತ್ತು ಹೀಲಲಿಗೆ ಈಗಲ್ಸ್ ತಂಡದ ಮಾಲೀಕರಾದ ಕೀರ್ತಿರಾಜ್ ಹಾಗೂ ಕೆಂಪೇಗೌಡ ಕಿಕ್ರೆಟರ್‍ಸ್ ತಂಡದ ಮಾಲೀಕರಾದ ಕಿರಣ್ ಹಾಗೂ ಬಜರಂಗಿ ಬಾಯ್ಸ್ ತಂಡದ ಮಾಲೀಕರಾದ ಉಮೇಶ್ ಮತ್ತು ಸುಜಯ್, ಮತ್ತು ಹೀಲಲಿಗೆ ಸೀನಿಯರ್ ಟೈರ್‍ಸ್ ತಂಡದ ಮಾಲೀಕರಾದ ಮಂಜುನಾಥ್ ಮತ್ತು ಗಜೇಂದ್ರರವರು. ಹಾಗೆಯೇ ಆಯೋಜಕರಾದ ನವೀನ್, ಪ್ರಶಾಂತ್, ಗುರು, ನಿತೇಶ್, ಸುನೀಲ್, ಎಂ.ಜೆ. ಮಂಜುನಾಥ್, ಕಾರ್ತಿಕ್, ಕಿರಣ್, ಮನು, ಉದಯ್, ನಂದ, ಅಭಿ, ಹರೀಶ್. ಕುಮಾರ್ ಬಾಗವಹಿಸಿದ್ದರು.