ಕೆರೆಗಳಲ್ಲಿ ಅವೈಜ್ಞಾನಿಕವಾಗಿ ಹೂಳೆತ್ತುತ್ತಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ
ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ: ಏ.01:- ಕೆರೆಗಳಲ್ಲಿ ಅವೈಜ್ಞಾನಿಕವಾಗಿ ಹೂಳೆತ್ತುತ್ತಿರುವವರ ವಿರುದ್ಧ ಕೂಡಲೇ ತಾಲೂಕು ಆಡಳಿತ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ಪಿ.ಜಿ ಜನಸ್ಪಂದನ ಫೌಂಡೇಷನ್ ಅಧ್ಯಕ್ಷ ಪಿ.ಪ್ರಶಾಂತ್‍ಗೌಡ ಒತ್ತಾಯಿಸಿದರು.
ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು, ಜಿಲ್ಲೆಯಲ್ಲಿಯೆ ಪಿರಿಯಾಪಟ್ಟಣ ತಾಲೂಕಿನಲ್ಲಿ ಅತಿ ಹೆಚ್ಚು ಕೆರೆಕಟ್ಟೆಗಳಿದ್ದು ಈ ಬಾರಿ ಸಕಾಲಕ್ಕೆ ಮಳೆಯಾಗದ ಕಾರಣ ಬತ್ತಿ ಹೋಗಿವೆ ಇದೆ ಸಂದರ್ಭ ಉಪಯೋಗಿಸಿಕೊಂಡಿರುವ ಹಲವರು ತಾಲೂಕಿನ ವಿವಿಧ ಕೆರೆಕಟ್ಟೆಗಳಲ್ಲಿ ಅವೈಜ್ಞಾನಿಕವಾಗಿ ಮಣ್ಣು ತುಂಬಿಕೊಂಡು ಕೆರೆಗಳನ್ನು ಹೂಳೆತ್ತುವ ನೆಪದಲ್ಲಿ ಹಾಳು ಮಾಡುತ್ತಿದ್ಧಾರೆ.
ಕೆರೆಯ ಮಣ್ಣಿಗೆ ಗ್ರ್ಯಾವಲ್‍ಗಾಗಿ ಅತಿಹಾದ ಆಳವನ್ನು ತೆಗೆದು ಮಣ್ಣು ತುಂಬಲಾಗುತ್ತಿದೆ ಇದರಿಂದ ಕೆರೆ ಏರಿಗಳಿಗೂ ಸಹ ಹಾನಿ ಉಂಟಾಗುವ ಅಪಾಯವಿದ್ದು ಬಹುತೇಕ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಕೆರೆ ಏರಿ ಬಳಿ ಸಾರಿಗೆ ಸೇರಿದಂತೆ ಇತರೆ ವಾಹನಗಳು ಸಂಚರಿಸುವುದರಿಂದ ಅನಾಹುತ ಸಂಭವಿಸುವ ಅಪಾಯವಿದೆ.
ಮಳೆಬಿದ್ದು ಕೆರೆ ತುಂಬಿದಾಗ ಕೆರೆಕಟ್ಟೆಗೆ ಬರುವ ಹಸುಕರು ಮಕ್ಕಳು ಮಹಿಳೆಯರು ಕಾಲುಜಾರಿ ಈ ಗುಂಡಿಗಳಿಗೆ ಬಿದ್ದರೆ ಜೀವ ಹಾನಿಯಾಗಲಿದೆ ಇದಕ್ಕೆ ಯಾರು ಹೊಣೆ ತಾಲೂಕು ಆಡಳಿತ ಈ ಬಗ್ಗೆ ನಿರ್ಲಕ್ಷವಹಿಸಿದ್ದು ತಕ್ಷಣ ಈ ಬಗ್ಗೆ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಪೆÇಟೋ ಸಾಕ್ಷಿ ಸಮೇತ ದೂರು ನೀಡಿರುವುದಾಗಿ ದೂರು ಪ್ರತಿಯನ್ನು ಪ್ರದರ್ಶಿಸಿದರು.
ತಾಲೂಕಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹೊರತುಪಡಿಸಿದರೆ ಇತರೆಯವರು ಕೆರೆಗಳಲ್ಲಿ ಹೂಳೆತ್ತುತಿರುತ್ತಿರುವುದು ಅವಜ್ಞಾನಿಕವಾಗಿದೆ ಇದರಿಂದ ಮುಂದಿನ ದಿನಗಳಲ್ಲಿ ಕೆರೆಯಲ್ಲಿ ನೀರು ಹೆಚ್ಚು ಸಂಗ್ರಹವಾಗಿ ಕೆರೆ ಕೋಡಿಗಳು ಒಡೆದು ರೈತರ ಜಮೀನುಗಳಿಗೆ ನುಗ್ಗಿ ಬೆಳೆ ಹಾಳಾಗುವ ಸಂಭವಗಳು ಹೆಚ್ಚಾಗಿವೆ ಆದ್ದರಿಂದ ಈ ಬಗ್ಗೆ ಅಧಿಕಾರಿಗಳು ಶೀಘ್ರದಲ್ಲೆ ಸೂಕ್ತ ಕ್ರಮವಹಿಸಬೇಕು ಇಲ್ಲವಾದರೆ ಉಗ್ರಹೋರಾಟ ನಡೆಸುವುದಾಗಿ ತಿಳಿಸಿದರು.
ತಾಲೂಕಿನಲ್ಲಿ ಆಡಳಿತ ವ್ಯವಸ್ಥೆ ಹದಗೆಟ್ಟಿದ್ದು ಸಾರ್ವಜನಿಕರು ಪ್ರತಿಯೊಂದು ಕೆಲಸಕ್ಕೂ ಲಂಚ ನೀಡಿ ಕೆಲಸ ಮಾಡಿಸಿಕೊಳ್ಳುವ ಸ್ಥಿತಿ ಎದುರಾಗಿದೆ ಕೂಡಲೇ ತಹಶೀಲ್ದಾರ್ ಹಾಗೂ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕಾಧಿಕಾರಿ ಸೇರಿದಂತೆ ಇತರೆ ಸರ್ಕಾರಿ ಕಚೇರಿಗಳ ಕೊಠಡಿ ಬಳಿ ನಾವು ಲಂಚ ಪಡೆಯುವುದಿಲ್ಲ ಎಂಬ ಫಲಕ ಹಾಕಿ ಧೈರ್ಯ ಪ್ರದರ್ಶಿಸಬೇಕಿದೆ ಎಂದು ತಾಕೀತು ಮಾಡಿದರು.
ಕೆರೆ ಕಟ್ಟೆಗಳಿಗೆ ನೀರು ತುಂಬಿಸಲಾಗದಿದ್ದರು ಚುನಾವಣೆ ಸಂದರ್ಭ ಮುಖ್ಯಮಂತ್ರಿ ಸೇರಿದಂತೆ ಮಂತ್ರಿಗಳನ್ನು ಕರೆಸಿ ನೀರು ತುಂಬಿಸುವ ಯೋಜನೆ ಏಕೆ ಉದ್ಘಾಟನೆ ಮಾಡಬೇಕಿತ್ತು ಎಂದು ಪ್ರಶ್ನಿಸಿ ಶೀಘ್ರ ಯೋಜನೆ ಚಾಲನೆ ನೀಡುವಂತೆ ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ಮುಖಂಡರಾದ ಕಿರಂಗೂರು ಮೋಹನ್, ಸುಂಡವಾಳು ಆದಿತ್ಯ, ಬೆಳತೂರು ಮನು, ಮಾಗಳಿ ಸ್ವಾಮಿ, ಹುಣಸೇಕುಪ್ಪೆ ಚಂದ್ರು ಇದ್ದರು.