ಶ್ರೀನಿವಾಸ್ ಪ್ರಸಾದ್ ನಿಧನಕ್ಕೆ ಸಂಸದ ಜಿ.ಎಂ.ಸಿದ್ದೇಶ್ವರ್ ಸಂತಾಪ
ಸಂಜೆವಾಣಿ ವಾರ್ತೆ
ದಾವಣಗೆರೆ. ಏ.೩೦; ಸುಧೀರ್ಘ  5  ದಶಕಗಳ  ಕಾಲ  ರಾಜಕಾರಣ  ಮಾಡಿ  ಇತ್ತೀಚಿಗಷ್ಟೇ  ಸಕ್ರಿಯ  ರಾಜಕಾರಣದಿಂದ  ನಿವೃತ್ತಿ  ಘೋಷಣೆ  ಮಾಡಿದ್ದ,  ಚಾಮರಾಜನಗರ  ಲೋಕಸಭಾ  ಸದಸ್ಯರಾದ ಶ್ರೀನಿವಾಸ್ ಪ್ರಸಾದ್ ಅವರು ಇಹಲೋಕ ತ್ಯಜಿಸಿರುವುದು ಆಘಾತ ತಂದಿದೆ ಎಂದು ಸಂಸದ ಜಿ.ಎಂ‌ ಸಿದ್ದೇಶ್ವರ್ ಸಂತಾಪ ಸೂಚಿಸಿದ್ದಾರೆ. 2016  ಮತ್ತು  2019ರಲ್ಲಿ ಎರಡು  ಬಾರಿ  ಅವರ  ಜೊತೆ  ಲೋಕಸಭಾ  ಸದಸ್ಯರಾಗಿ  ಕೆಲಸ  ಮಾಡುವ  ಅವಕಾಶ  ನನಗೆ  ಒದಗಿ  ಬಂದಿತ್ತು. ಕೇಂದ್ರ ಸಚಿವರಾಗಿ ರಾಜ್ಯ  ಸರ್ಕಾರದಲ್ಲಿ  ಸಚಿವರಾಗಿ  ಹಲವಾರು  ಖಾತೆಗಳನ್ನು ಯಶಸ್ವಿಯಾಗಿ  ನಿರ್ವಹಿಸಿದ ಶ್ರೀಯುತರ ಅಗಲಿಕೆ ತುಂಬಲಾರದ ನಷ್ಟ. ಮೌಲ್ಯಯುತ ರಾಜಕಾರಣಕ್ಕೆ ಒಂದು ಅರ್ಥ ತಂದುಕೊಟ್ಟವರು ಶ್ರೀನಿವಾಸ್ ಪ್ರಸಾದ್‌ರವರು. ಶ್ರೀಯುತರ ಅಗಲಿಕೆಯಿಂದ ಅವರ ಕುಟುಂಬಕ್ಕೆ ಹಾಗೂ ಅವರ ಅಪಾರ ಅಭಿಮಾನಿಗಳಿಗೆ ಆಗಿರುವ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದಿದ್ದಾರೆ