ಅಲೆಮಾರಿ ಬುಡಕಟ್ಟು ಮಹಾಸಭಾದಿಂದ ಕಾಂಗ್ರೆಸ್ ಗೆ ಬೆಂಬಲ

ಸಂಜೆವಾಣಿ ವಾರ್ತೆ
ದಾವಣಗೆರೆ.ಏ.೩೦: ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾವು ಲೋಕಸಭಾ  ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಬೆಂಬಲ ಸೂಚಿಸಿದೆ. ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಹಾಸಭಾದ ಗೌರವಾಧ್ಯಕ್ಷ ಡಿ.ತಿಪ್ಪಣ್ಣ ಮಾತನಾಡಿ,ದಾವಣಗೆರೆ ಜಿಲ್ಲೆಯ ಅಲೆಮಾರಿ ಬುಡಕಟ್ಟು ಮಹಾಸಭಾವು  ಮೇ 7 ರಂದು ನಡೆಯಲಿರುವ ಈ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳು, ತಳ ಸಮುದಾಯದ ಶ್ರೇಯೋಭಿವೃದ್ಧಿಗೆ ಹಲವಾರು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರಲು ತಮ್ಮ ಪ್ರಣಾಳಿಕೆಯಲ್ಲಿ ಹೇಳಿರುವುದು ಮತ್ತು ಕಾಂಗ್ರೆಸ್ ನೇತೃತ್ವದ ಯು.ಪಿ.ಎ. ಸರ್ಕಾರವು ರಾಷ್ಟ್ರೀಯ ಅಲೆಮಾರಿ ಆಯೋಗವನ್ನು ಸಮುದಾಯದ ಮುಖಂಡರ ಮನವಿಯ ಮೇರೆಗೆ ರಚಿಸಿರುತ್ತಾರೆ ಇದು ಸಹ ನಮ್ಮ ಶ್ರೇಯೋಭಿವೃದ್ಧಿಯಾಗಿರುತ್ತದೆ ಎಂದರು.ಹಾಗೆಯೇ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಅಲೆಮಾರಿ ನಿಗಮವನ್ನು ಸ್ಥಾಪಿಸಿ ನಿಗಮದ ಮುಖಾಂತರ ಕರ್ನಾಟಕ ರಾಜ್ಯದ ಎಲ್ಲಾ ಅಲೆಮಾರಿ ಸಮುದಾಯಗಳಿಗೆ ಅಭಿವೃದ್ಧಿಗೆ ಸವಲತ್ತುಗಳನ್ನು ತಲುಪಿಸುತ್ತಿರುವುದರಿಂದ ನಾವುಗಳು ನಮ್ಮ ಅಭಿವೃದ್ಧಿ ಮಾಡುವ ಪಕ್ಷಕ್ಕೆ ಸಂಪೂರ್ಣವಾಗಿ ಈ ಚುನಾವಣೆಯಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ರವರಿಗೆ ಸಂಪೂರ್ಣ ಬೆಂಬಲ ಸೂಚಿಸಲು ಅಲೆಮಾರಿ ಬುಡಕಟ್ಟು ಮಹಾಸಭಾದ ಸದಸ್ಯರುಗಳು ಒಮ್ಮತದಿಂದ ಬೆಂಬಲ ಘೋಷಿಸಿರುತ್ತೇವೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಹಾಸಭಾದ ತಿಪ್ಪೇಶಪ್ಪ ಗುರುರಾಜಪುರ, ಡಾ.ಎಸ್.ವಿ.ಮಂಜಪ್ಪ, ಕೆ.ಪಿ.ಸಿದ್ದಪ್ಪ, ಡಿ.ಕುಮಾರ್, ಹನುಮಂತಪ್ಪ, ಹರೀಶ್, ಪ್ರದೀಪ್, ಚಿತ್ರಲಿಂಗಪ್ಪ ಇದ್ದರು.