ನಿರ್ಭೀತಿಯಿಂದ ಮತದಾನ ಮಾಡಲು ‌ಕಲಾವಿದರ ಮನವಿ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.30: ನಗರದ  ಕುಂಟೆರಾಯ ತೊಗಲುಗೊಂಬೆ ಕಲಾ ತಂಡದಿಂದ ಇಲ್ಕಕಿನ  ಗುಗ್ಗರಹಟ್ಟಿಯ ವೀರಾಂಜಿನೇಯ ಸ್ವಾಮಿ ದೇವಸ್ಥಾನದಲ್ಲಿ ಆಯೋಜಿಸಿದ್ದ ಮತದಾನ ಜಾಗ್ರತೆ ಹಾಗೂ ತೊಗಲುಗೊಂಬೆ ಕುರಿತ ವಿಚಾರ ಸಂಂಕಿರಣ  ಹಮ್ಮಿಕೊಂಡಿತ್ತು.
ಬಯಲಾಟದ ಹಿರಿಯ ಕಲಾವಿದೆ ಚಾಮುಂಡಿ ಎಳ್ಳಾರ್ತಿ ಇವರು ಮಾತನಾಡುತ್ತಾ ಬಯಲಾಟಕ್ಕಿಂತಲೂ ಅತ್ಯಂತ ಕಠಿಣವಾದ ಕಲೆ ಎಂದರೆ ಅದು ತೊಗಲುಗೊಂಬೆಯಾಟ ಈ ಕಲೆಯನ್ನು ಹುಲಿಕುಂಟೆರಾಯ ಕಲಾ ತಂಡ  ಅದನ್ನು ಇಂದಿಗೂ ಉಳಿಸಿ ಬೆಳಸಿಕೊಂಡು ಬಂದಿರುವುದು ಸಾಹಸವೇ ಸರಿ ಎಂದರು. ಹಾಗೆಯೇ ಮೇ ತಿಂಗಳಿನಲ್ಲಿ ಜರುಗುವ ಚುನಾವಣೆಯಲ್ಲಿ ಎಲ್ಲರೂ ತಪ್ಪದೇ ಮತದಾನ ಮಾಡಿ ಎಂದು ವಿನಂತಿಸಿದರು. ಈ ಕಾರ್ಯಕ್ರಮದಲ್ಲಿ ತೊಗಲುಗೊಂಬೆಗಳ ಕುರಿತು ವಿಶೇಷ ಉಪನ್ಯಾಸ ನೀಡಿದ ಬಾಲಕಿಯರ ಸರ್ಕಾರಿ ಪ.ಪೂ ಕಾಲೇಜಿನ ಕನ್ನಡ ಉಪನ್ಯಾಸಕರಾದ ಚಾಂದ್ ಪಾಷಾ ಅವರು ತೊಗಲು ಗೊಂಬೆ ಕಲೆ ಬೆಳದು ಬಂದ ಬಗೆಯನ್ನು ಅದರ ಸ್ವರೂಪ ಹಾಗೂ ಇಂದಿನ ದಿನಗಳಲ್ಲಿ ಈ ಕಲೆ ಎದುರಿಸುತ್ತಿರುವ ಸವಾಲುಗಳನ್ನು ವಿವರಿಸಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೀ ವಿ ಸಂಘದ ಸ್ವತಂತ್ರ ಪ ಪೂ ಕಾಲೇಜಿನ ಕನ್ನಡ ಉಪನ್ಯಾಸಕರಾದ ಎ.ಎಂ.ಪಿ ವೀರೇಶಸ್ವಾಮಿ ಇವರು ಮಾತನಾಡುತ್ತಾ ಭಾರತದ ಸಂವಿಧಾನದ ಶ್ರೇಷ್ಠತೆಯನ್ನು ಸಾರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ನಿರ್ಭಯವಾಗಿ ಮತದಾನ ಮಾಡಿ ಉತ್ತಮ ಅಭ್ಯರ್ಥಿಗಳಿಗೆ ಮತಹಾಕಿ ಯಾವುದೇ ಪಕ್ಷಗಳು ಕೊಡುವ ಹಣ ಒಡವೆ ವಸ್ತುಗಳ ಆಮಿಷಕ್ಕೆ ಒಳಗಾಗದೆ ಉತ್ತಮ ಅಭ್ಯರ್ಥಿಗಳಿಗೆ ಮತದಾನ ಮಾಡಿ ಸಂವಿಧಾನದ ಶ್ರೇಷ್ಠತೆಯನ್ನು ಎತ್ತಿ ಹಿಡಿಯಿರಿ ಎಂದು ಮನವಿ ಮಾಡಿದರು.
ಈ ಕಾರ್ಯಕ್ರಮದಲ್ಲಿ   ವಕೀಲರಾದ ಪಿ ಮಲ್ಲಯ್ಯ, ನಿವೃತ್ತ ಪೋಲಿಸ್ ಅಧಿಕಾರಿಗಳಾದ  ಪಿ.ಬಿ ನಾಗರಾಜ್ ಭಾಗಹಿಸಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಂದಿ ಪ.ಪೂ ಕಾಲೇಜಿನ ಕನ್ನಡ ಉಪನ್ಯಾಸಕರಾದ ಶ್ರೀ ಹನುಮಂತರೆಡ್ಡಿ ವಹಿಸಿದ್ದರು.   ಹುಲಿಕುಂಟೆರಾಯ ಕಲಾ ತಂಡದ ಅದ್ಯಕ್ಷರಾದ ಶ್ರೀ ಹೊನ್ನೂರಸ್ವಾಮಿ ಇವರು ಪ್ರಾಸ್ತಾವಿಕ ನುಡಿಯನ್ನಾಡಿ ಅಥಿತಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಶ್ರೀಮತಿ ಕವಿತಾ ಕಗ್ಲಲ್  ಪುಟ್ಟರಾಜ ಹಾಗೂ ವೀರ ಪಂಚಾಕ್ಷರಿ ಇವರು ವಚನಗಾಯನ ಕಾರ್ಯಕ್ರಮ ನಡೆಸಿಕೊಟ್ಟರು ಎಸ್ ಡಿ ಎಂ ಸಿ ಸದಸ್ಯರಾದ ಕೆ ಪುರುಷೋತ್ತಮ ಇವರು ಕಾರ್ಯಕ್ರಮ ನಿರ್ವಹಿಸಿದರು.