17 ನೇ ವಾರ್ಡಿನಲ್ಲಿತುಕಾರಾಂ ಗೆಲುವಿಗೆ ರಾಂಪ್ರಸಾದ್ಕಟ್ಟೆಮನೆ ನಾಗೇಂದ್ರ ಮನವಿ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.30: ನಗರದ 17 ನೇ ವಾರ್ಡಿನಲ್ಲು ಇಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ತುಕರಾಂ ಅವರನ್ನು ಗೆಲ್ಲಿಸಬೇಕೆಂದು ಎಪಿಎಂಸಿ ಅಧ್ಯಕ್ಷ ಕಟ್ಟೆಮನೆ ನಾಗೇಂದ್ರ ಹಾಗು ಪಕ್ಷದ ಹಿರಿಯ ಮುಖಂಡ ಬಿ.ರಾಂಪ್ರಸಾದ್ ಮೊದಲಾದವರು ಮನೆ ಮನೆಗೆ ತೆರಳಿ  ಮತಯಾಚನೆ ಮಾಡಿದರು.
ಬಿಜೆಪಿ ಪಕ್ಷ ನಿಮಗೆಲ್ಲ ಮೋದಿ ಗ್ಯಾರೆಂಟಿ ಎನ್ನುತ್ತಿದೆ. ಆದರೆ ನಮ್ಮ ಕಾಂಗ್ರೆಸ್ ಪಕ್ಷ ಪಂಚ ಗ್ಯಾರೆಂಟಿಗಳ ಮೂಲಕ ಈಗಾಗಲೇ ಮಹಿಳೆಯರಿಗೆ ಪ್ರತಿ ತಿಂಗಳು ಎರೆಡು ಸಾವಿರ ರೂ ನೀಡುತ್ತಿದೆ. ಹತ್ತು ಕಿಲೋ ಅಕ್ಕಿ ನೀಡುತ್ತಿದೆ. ಉಚಿತವಾಗಿ ಎರೆಡು ನೂರು ಯೂನಿಟ್  ವಿದ್ಯುತ್ ನೀಡುತ್ತಿದೆ. ಇನ್ನು ಈ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಮಹಾಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ  ವರ್ಷಕ್ಕೆ ಒಂದು ಲಕ್ಷರೂ ನೀಡಲಿದೆ. ಈ ಹಣ ನಿಮ್ಮ‌ಅಕೌಂಟ್ ಗೆ
 ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ದೇಶ ಮತ್ತು ಜನರ ಅಭಿವೃದ್ಧಿಗೆ ನೀಡಿರುವ ವಾಗ್ದಾನದ ಪ್ರಣಾಳಿಕೆಯ ಅಂಶಗಳ ಕರಪತ್ರವನ್ನು ಮತದಾರರಿಗೆ ನೀಡಿ. ಅಭ್ಯರ್ಥಿ ಇ.ತುಕರಾಂ ಅವರಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು
ಈಗಾಗಲೇ ರಾಜ್ಯದಲ್ಲಿ ಪಂಚ ಗ್ಯಾರೆಂಟಿಗಳ ಮೂಲಕ, ಬಡ,ಮಹಿಳೆಯರು ಮತ್ತು ಯುವ ಜನರ ಅಬಿವೃದ್ದಿಗೆ ಪೂರಕವಾಗಿರುವ ಕಾಂಗ್ರೆಸ್ ಸರ್ಕಾರ. ಕೇಂದ್ರದಲ್ಲಿಯೂ ಅಧಿಕಾರಕ್ಕೆ ಬಂದರೆ ವಾರ್ಷಿಕವಾಗಿ ಮಹಿಳೆಯರಿಗೆ ಒಂದು ಲಕ್ಷ ರೂ ನೀಡುವುದು ಸೇರಿದಂತೆ 25 ಗ್ಯಾರೆಂಟಿ ನೀಡಲಿದೆಂದರು.
ಈ ದೇಶದಲ್ಲಿ ಜಾತಿ, ಧರ್ಮ ಸಂಘರ್ಷ ಇಲ್ಲದೆ ಸಹಬಾಳ್ವೆಯ ಜೀವನಕ್ಕೆ ಕಾಂಗ್ರೆಸ್ ಮಾತ್ರ ಉತ್ತಮ ಆಡಳಿತ ನೀಡಲಿದ್ದು ಎಲ್ಲರೂ ಕಾಂಗ್ರೆಸ್ ಗೆ ಮತ ನೀಡಬೇಕು ಎಂದು ಅವರು ಕರ ಪತ್ರ ನೀಡಿ ಮನವಿ ಮಾಡಿದರು.
ಈ ವೇಳೆ ಪಕ್ಷದ  ಮುಖಂಡರುಗಳಾದ ಸುರೇಶ್, ಅಬ್ದುಲ್ ಬರಿಸಾಬ್, ವಲೀಸಾಬ್ ,ಶ್ರೀನಿವಾಸುಲು, ಹೊನ್ನಪ್ಪ, ಹಗರಿ ಗೋವಿಂದ ರಾಜಶೇಖರ್ ಮತ್ತು ನಾಯ್ಡು ಮತ್ತಿತರರು ಇದ್ದರು.