1,02,500 ರೂ.ಮೌಲ್ಯದ ಮದ್ಯಜಪ್ತಿ
ಯಾದಗಿರಿ,ಏ.30-ಕಲಬುರಗಿ ವಿಭಾಗದ ಅಬಕಾರಿ ಜಂಟಿ ಆಯುಕ್ತರು ಹಾಗೂ ಯಾದಗಿರಿ ಅಬಕಾರಿ ಉಪ ಆಯುಕ್ತರ ನಿರ್ದೇಶನದ ಮೇರೆಗೆ ಶಹಾಪುರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಆನಂದ ಉಕ್ಕಲಿ ಅವರ ಮಾರ್ಗದರ್ಶನದಲ್ಲಿ ಅಬಕಾರಿ ನಿರೀಕ್ಷಕ ವಿಜಯಕುಮಾರ ಹೀರೆಮಠ, ಅಬಕಾರಿ ಉಪ ನಿರೀಕ್ಷಕ ಅನಿಲ್ ಎಂ.ಪತ್ತಾರ್, ಅಬಕಾರಿ ಮುಖ್ಯ ಪೇದೆಯಾದ ಮಹ್ಮದ ಸುಭಾನಿ, ಗುರುನಾಥ ಮತ್ತು ನಾಗರಾಜ, ಅಬಕಾರಿ ಪೇದೆಯಾದ ಬಸ್ಸಪ್ಪ ಚಲುವಾದಿ ಕೊಂಗಂಡಿ ವಾಹನ ಚಾಲಕರಾದ ಗೋಪಾಲ ರೆಡ್ಡಿ ಮತ್ತು ಗೃಹ ರಕ್ಷಕ ಸಿಬ್ಬಂದಿಯಾದ ಸೂರ್ಯಕಾಂತ, ಇಮಾಮುದ್ದೀನ್, ಸಂತೋಷ್ ಅವರು ವಡಗೇರಾ ತಾಲ್ಲೂಕಿನ ತಡಿಬಿಡಿ ಗ್ರಾಮದ ಹತ್ತಿರ ದಾಳಿ ನಡೆಸಿ 1,02,500 ರೂ.ಮೌಲ್ಯದ 31.200 ಲೀ ಬಿಯರ್ ಜಪ್ತಿ ಮಾಡಿದ್ದಾರೆ ಎಂದು ಯಾದಗಿರಿ ಅಬಕಾರಿ ಉಪ ಆಯುಕ್ತೆ ಶಾರದಾ ಸಿ.ಕೋಲಕಾರ ಅವರು ತಿಳಿಸಿದ್ದಾರೆ.