ಜಿ. ಬಿ. ವಿನಯ್ ಕುಮಾರ್ ಗೆ ಮತ ನೀಡಿ, ಲೋಕಸಭೆಗೆ ಕಳುಹಿಸಿಕೊಡಿ
ಸಂಜೆವಾಣಿ ವಾರ್ತೆ
ದಾವಣಗೆರೆ. ಏ.೩೦; ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾದ ಜಿ.ಬಿ ವಿನಯ್ ಕುಮಾರ್ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಿ ಲೋಕಸಭೆಗೆ ಕಳುಹಿಸಿಕೊಡಿ ಎಂದು ಜಮ್ಮು ಕಾಶ್ಮೀರದ ಐಎಎಸ್ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಮನವಿ ಮಾಡಿಕೊಂಡಿದ್ದಾರೆ.ಇನ್ಸೈಟ್ ಐಎಎಸ್‌ ಸಂಸ್ಥೆಯ ಉಪ ಕಚೇರಿಯೊಂದನ್ನು ಭಾರತದ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಸ್ಥಾಪಿಸಿ ಭಾರತ ಮಾತೆಯ ಸೇವೆ ಮಾಡುತ್ತಿರುವ ಸೈನಿಕರ ಕುಟುಂಬದ ಹೆಣ್ಣು ಮಕ್ಕಳಿಗೆ ಹಾಗೂ ಜಮ್ಮು ಕಾಶ್ಮೀರದ ಮುಸ್ಲಿಂ ಯುವತಿಯರು ಹಾಗೂ ಮಹಿಳೆಯರಿಗೆ ಉಚಿತವಾಗಿ ಐಎಎಸ್‌ ತರಬೇತಿಯನ್ನು ನೀಡುತ್ತಿದ್ದಾರೆ. ಚುನಾವಣೆಗೆ ಸ್ಪರ್ಧೆ ಮಾಡಿರುವ ವಿನಯ್ ಕುಮಾರ್ ಅವರನ್ನು ಹೆಚ್ಚಿನ ಮತಗಳಿಂದ ಆಯ್ಕೆ ಮಾಡಿ. ಸಂಸದರಾಗಬೇಕೆಂದು ಹಳ್ಳಿ ಹಳ್ಳಿಗಳಿಗೂ ಸುತ್ತಿದ್ದಾರೆ. ಪ್ರಚಾರ ಮಾಡುತ್ತಿದ್ದಾರೆ. ಇಂಥ ಯೋಗ್ಯ ಅಭ್ಯರ್ಥಿಗೆ ತಮ್ಮ ಅಮೂಲ್ಯ ಮತ ನೀಡಿ ಎಂದು ಕೇಳಿಕೊಂಡಿದ್ದಾರೆ.ಜಮ್ಮು ಕಾಶ್ಮೀರ ಹಾಗೂ ಶ್ರೀನಗರದ ಐಎಎಸ್‌ ತರಬೇತಿ ಫಲಾನುಭವಿಗಳು ಜಿ.ಬಿ ವಿನಯ್ ಕುಮಾರ್ ಅವರ ಪರ ಮತಚಲಾಯಿಸಲು ಮನವಿ ಮಾಡಿಕೊಳ್ಳುತ್ತಿದ್ದೇವೆ. ಭಾರತದ ಕನ್ಯಾಕುಮಾರಿಯಿಂದ ಹಿಡಿದು ಕಾಶ್ಮೀರದ ಶ್ರೀನಗರದವರೆಗೂ ತಮ್ಮಇನ್ಸೈಟ್ ಐಎಎಸ್‌ ಸಂಸ್ಥೆಯ ಮೂಲಕ ಸಮಾಜ ಸೇವೆಯಲ್ಲಿ ಯಾವ ಜಾತಿ, ಮತ, ಪಂಥ -ಪಂಗಡ ಹಾಗೂ ಧರ್ಮಗಳ ಭೇದಭಾವವಿಲ್ಲದೆ ತೊಡಗಿಕೊಂಡಿದ್ದು ಹೆಮ್ಮೆಯ ಸಂಗತಿ. ಇಂತಹ ಮನೆ ಮಗನ ಕೈ ಬಲಪಡಿಸೋಣ ಎಂದು ಕರೆ ನೀಡಿದ್ದಾರೆ.ಚುನಾವಣಾ ಕಣದಲ್ಲಿ ಮತದಾರ ಪ್ರಭುಗಳ ಮುಂದೆ ಕ್ರ.ಸಂ.:28 ಸಿಲಿಂಡರ್ ಗುರುತಿಗೆ ಮತ ನೀಡಿ ದಾವಣಗೆರೆ ಸಮಗ್ರ ಅಭಿವೃದ್ಧಿಯ ಭಾಗವಾಗಿ ಎಂದು ಮನವಿ ಮಾಡಿಕೊಂಡಿರುವ ವಿದ್ಯಾರ್ಥಿಗಳು, ವಿನಯ್ ಕುಮಾರ್ ಅವರ ಕನಸು ದೊಡ್ಡದಿದೆ.
ದಾವಣಗೆರೆ ಜಿಲ್ಲೆಯ ಅಭಿವೃದ್ಧಿಗೂ ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಜಮ್ಮುಕಾಶ್ಮೀರದಲ್ಲಿ ನಮ್ಮಂಥ ನೂರಾರು ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿದ್ದಾರೆ. ಸೈನಿಕರ ಕುಟುಂಬದ ಹೆಣ್ಣು ಮಕ್ಕಳಿಗೆ ಉಚಿತವಾಗಿ ತರಬೇತಿ ನೀಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಇಂಥವರು ಲೋಕಸಭಾ ಸದಸ್ಯರಾದರೆ ನಿಮ್ಮ ಮಕ್ಕಳ ಭವಿಷ್ಯ ಉಜ್ವಲವಾಗುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದ್ದಾರೆ.