8.640 ಲೀಟರ್ ಮದ್ಯ ಜಪ್ತಿ
ಯಾದಗರಿ,ಏ.30-ಕಲಬುರಗಿ ವಿಭಾಗದ ಅಬಕಾರಿ ಜಂಟಿ ಆಯುಕ್ತರು ಹಾಗೂ ಯಾದಗಿರಿಯ ಅಬಕಾರಿ ಉಪ ಆಯುಕ್ತರ ನಿರ್ದೇಶನದ ಮೇರೆಗೆ ಶಹಾಪುರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಆನಂದ ಉಕ್ಕಲಿ ಅವರ ಮಾರ್ಗದರ್ಶನದಲ್ಲಿ ಸುರಪುರ ವಲಯದ ಅಬಕಾರಿ ಉಪ ನಿರೀಕ್ಷಕ ಮಹೇಶ ಚೌಧರಿ ಹಾಗೂ ಅಬಕಾರಿ ಮುಖ್ಯ ಪೇದೆಗಳಾದ ಸಂದೀಪ್ ನಾಯಕ, ಸಂಪತ್ ಕುಮಾರ ಮತ್ತು ಯಮನಪ್ಪ, ವಾಹನ ಚಾಲಕರಾದ ರಮೇಶ ದೇಸಾಯಿ ಹಾಗೂ ಗೃಹ ರಕ್ಷಕದಳ ಸಿಬ್ಬಂದಿಗಳಾದ ನಿಂಗಣ್ಣಗೌಡ, ಚಂದಪ್ಪ, ರಂಗಪ್ಪ, ಬಸವರಾಜ, ಅರ್ಜುನ ಹಾಗೂ ಪರಶುರಾಮ ಅವರು ಸುರಪುರ ತಾಲ್ಲೂಕಿನ ಪರಸನಹಳ್ಳಿ ಗ್ರಾಮದ ಯಂಕೊಬ್ ತಂದೆ ಚಂದಪ್ಪ ದೊರೆ ಮನೆ ಮೇಲೆ ದಾಳಿ ನಡೆಸಿ 8.640 ಲೀಟರ್ ಮದ್ಯ ಜಪ್ತಿ ಮಾಡಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಯಾದಗಿರಿ ಅಬಕಾರಿ ಉಪ ಆಯುಕ್ತೆ ಶಾರದಾ ಸಿ.ಕೋಲಕಾರ ಅವರು ತಿಳಿಸಿದ್ದಾರೆ.