ನಾನು ಮೋದಿಗಿಂತಲೂ ಹೆಚ್ಚು ಕ್ವಾಲಿಫೈಡ್: ಪ್ರಿಯಾಂಕ್ ಟಾಂಗ್
ಕಲಬುರಗಿ,ಏ.30: ‘ನನ್ನಎಜುಕೇಷನ್‍ಕ್ವಾಲಿಫಿಕೇಷನ್ ಬಗ್ಗೆ ಪ್ರಶ್ನೆ ಮಾಡುವ ಜಾಧವ್‍ಅವರೇ, ಮೊದಲು ನಿಮ್ಮ ಪ್ರಧಾನಿಯಕ್ವಾಲಿಫಿಕೇಷನ್ ಏನು ಎಂದುಜನರಿಗೆ ತಿಳಿಸಿ. ಹಾಗೆ ನೋಡಿದರೆ ನಿಮ್ಮ ಮೋದಿ ಅವರಿಗಿಂತಲೂ ನಾನು ಹೆಚ್ಚಿನಕ್ವಾಲಿಫೈಡ್’ ಎಂದುಜಿಲ್ಲಾಉಸ್ತುವಾರಿ ಸಚಿವ ಪ್ರಿಯಾಂಕ್‍ಖರ್ಗೆ ಇಂದಿಲ್ಲಿ ಟಾಂಗ್ ನೀಡಿದರು.
ಇಲ್ಲಿನಜಿಲ್ಲಾಕಾಂಗ್ರೆಸ್‍ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದಅವರು, ‘ಈ ಹಿಂದೆ ಅರವಿಂದಕೇಜ್ರಿವಾಲ್‍ಅವರು ಆರ್‍ಟಿಐ ಮೂಲಕ ಪ್ರಧಾನಿ ಕ್ವಾಲಿಫಿಕೆಷನ್ ಬಗ್ಗೆ ಮಾಹಿತಿ ಕೇಳಿದಾಗ ಕೊಟ್ಟಿಲ್ಲ.ಆದರೆ, ನಾನು ಎನಿಮೇಷನ್‍ನಲ್ಲಿ ಡಿಪೆÇ್ಲಮಾ ಮಾಡಿದ್ದೇನೆ. ಶಾಸಕನಾಗಲು ಸಂವಿಧಾನಬದ್ದಅರ್ಹತೆ ಪಡೆದಿದ್ದೇನೆ. ಈ ಬಗ್ಗೆ ಅಫಿಡೆವಿಟ್ ಹಾಕುತ್ತೇನೆ.ನಿಮ್ಮ ಮೋದಿ ಅವರಿಗಿಂತ ಹೆಚ್ಚಿಗೆ ನಾನು ಕ್ವಾಲಿಫಾಯ್ಡ್‍ಆಗಿದ್ದೇನೆ. ಮೋದಿ ಅವರುಕೂಡಯಾವುದಾದರೂಕ್ವಾಲಿಫಿಕೇಷನ್ ಪಡೆದಿದ್ದರೆಅಫಿಡೆವಿಟ್ ಹಾಕಲು ಹೇಳಿ’ ಎಂದು ಸವಾಲು ಹಾಕಿದರು.
ಸೋಲಿನ ಭೀತಿಯಿಂದಾಗಿಖರ್ಗೆಕಲಬುರಗಿಗೆ ಪದೇ ಪದೇ ಬರುತ್ತಿದ್ದಾರೆಎಂದು ಸಂಸದಉಮೇಶ್‍ಜಾಧವ್ ನೀಡಿರುವ ಹೇಳಿಕೆಗೆ ನಯವಾಗಿ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್, ಖರ್ಗೆಅವರುಎರಡು ಸಲ ಕಲಬುರಗಿಯಿಂದ ಲೋಕಸಭೆಗೆಆಯ್ಕೆಯಾಗಿದ್ದಾರೆ.ಈಗ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರು.ಅವರು ಕಲಬುರಗಿಗೆ ಬರಲು ಚಿಂಚೋಳಿ ಎಂಪಿ ಅನುಮತಿ ಬೇಕಿಲ ್ಲಎಂದುಜಾಧವ್‍ಅವರಿಗೆತಿರುಗೇಟು ನೀಡಿದರು.
ನೀವು ಕೂಡಪ್ರಧಾನಿ ಮೋದಿ, ಅಮಿತ್ ಶಾ, ಯಡಿಯೂರಪ್ಪ, ವಿಜಯೇಂದ್ರ, ಸಿ.ಟಿ.ರವಿ ಸೇರಿದಂತೆ ಹಲವಾರು ನಾಯಕರನ್ನು ಕರೆಸಿದ್ದೀರಲ್ಲ. ಹಾಗಾದರೆ, ನಿಮಗೂ ಸೋಲಿನ ಭೀತಿ ಆವರಿಸಿದೆಯಾ?ಎಂದು ಪ್ರಶ್ನಿಸಿದರು.
ಮೊದಲ ಸುತ್ತಿನ ಮತದಾನದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರ ಮಾತಿನಧಾಟಿಬದಲಾಗಿದೆ.ವಿಶ್ವಗುರು ಈಗ ಮುಸ್ಲಿಮರ ವಿರುದ್ಧ, ಪಾಕಿಸ್ತಾನದ ವಿರುದ್ಧ ಮಾತನಾಡುತ್ತಿದ್ದಾರೆಎಂದು ಅಣಕಿಸಿದ ಅವರು, ಒಟ್ಟಾರೆಬಿಜೆಪಿ ನಾಯಕರು ಹತಾಶರಾಗಿದ್ದಾರೆಎಂದು ವ್ಯಾಖ್ಯಾನಿಸಿದರು.
ಕಾಂಗ್ರೆಸ್‍ಕುಟುಂಬ ರಾಜಕಾರಣ ಮಾಡುತ್ತಿದೆಎನ್ನುವ ಬಿಜೆಪಿ ನಾಯಕರ ಮಾತಿಗೆ ಸಿಡಿಮಿಡಿಗೊಂಡ ಪ್ರಿಯಾಂಕ್‍ಖರ್ಗೆ, ಬಿಜೆಪಿಯಲ್ಲಿಕುಟುಂಬ ರಾಜಕಾರಣಇಲ್ಲವೇ?ನಮ್ಮಕುಟುಂಬದರಾಜಕಾರಣದ ಬಗ್ಗೆ ಮಾತನಾಡುವಜಾಧವ್‍ತಮ್ಮ ಮಗನಿಗೆ ಚಿಂಚೋಳಿಯಲ್ಲಿ ಶಾಸಕನನ್ನಾಗಿ ಮಾಡಿಲ್ಲವೇ?ಇದೇ ಪ್ರಶ್ನೆಯನ್ನುಯಡಿಯೂರಪ್ಪ, ಅಮಿತ್ ಶಾ ಮುಂದೆಕೇಳಲಿ’ ಎಂದುಗುಡುಗಿದರು.ಪ್ರಿಯಾಂಕ್‍ಖರ್ಗೆ ಸೆಟಲ್‍ಆಗಿದ್ದಾರೆ. ಈಗ ಅಳಿಯನನ್ನು ಸೆಟಲ್ ಮಾಡಲುಖರ್ಗೆಕಣ್ಣೀರು ಹಾಕಿದ್ದಾರೆಎಂದು ಸಿ.ಟಿ ರವಿ ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಪ್ರಿಯಾಂಕ್, ನಿಜ ನಾನು ಸೆಟಲ್‍ಆಗಿದ್ದೇನೆ. ರಾಧಾಕೃಷ್ಣಅವರನ್ನು ಸೆಟಲ್‍ಮಾಡುವ ಬಗ್ಗೆ ಕಲಬುರಗಿಜನರುತೀರ್ಮಾನ ತೆಗೆದುಕೊಳ್ಳುತ್ತಾರೆಎಂದುಟಾಂಗ್ ನೀಡಿದರು.
ಬಹಿರಂಗಚರ್ಚೆಗೆಸಂಸದಜಾಧವ್‍ಆಹ್ವಾನ ನೀಡಿರುವಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ವಿಷಯಾಧಾರಿತಚರ್ಚೆ ಮಾಡೋಣ ಬನ್ನಿ. ನಾನೇ ವೇದಿಕೆ ಸಿದ್ದಪಡಿಸುತ್ತೇನೆ ಎಂದರು.ಶಾಸಕ ಹಾಗೂ ಕೆಕೆಆರ್‍ಡಿಬಿ ಅಧ್ಯಕ್ಷ ಡಾ.ಅಜಯ್‍ಸಿಂಗ್, ವಿಧಾನ ಪರಿಷತ್ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ವಿಧಾನ ಪರಿಷತ್ ಸದಸ್ಯತಿಪ್ಪಣ್ಣಪ್ಪಕಮಕನೂರ್, ಚೇತನ್‍ಗೋನಾಯಕ್, ಅಶೋಕ ವೀರನಾಯಕ, ಶಿವಾನಂದ ಹೊನಗುಂಟಿ ಸೇರಿದಂತೆಇತರರಿದ್ದರು.
ನನಗಿದೆ ಪವರ್‍ಆಫ್‍ಅಟಾರ್ನಿ
ಸಚಿವರಾದ ಕೃಷ್ಣ ಭೈರೇಗೌಡ, ದಿನೇಶ್‍ಗುಂಡೂರಾವ್, ಸಂತೋಷ್ ಲಾಡ್ ಹಾಗೂ ತಮಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರಕಾರದಎಲ್ಲ ಖಾತೆಗಳ ಕುರಿತು ಮುಕ್ತವಾಗಿ ಮಾತನಾಡಲುಅಧಿಕೃತವಾಗಿಅನುಮತಿ ನೀಡಿದ್ದಾರೆ. ಹಾಗಾಗಿ, ತಾವು ಸರಕಾರದ ವಕ್ತಾರರಾಗಿ ಮಾತನಾಡುತ್ತಿದ್ದು, ಸ್ವತಃ ಮುಖ್ಯಮಂತ್ರಿಗಳೇ ನನಗೆ ಪವರ್‍ಆಫ್‍ಅಟಾರ್ನಿ ನೀಡಿದ್ದಾರೆಎಂದು ಸಚಿವ ಪ್ರಿಯಾಂಕ್‍ಖರ್ಗೆ ಸ್ಪಷ್ಟಪಡಿಸಿದರು.
ಪ್ರಜ್ವಲ್‍ಘಟನೆ: ಹೋರಾಟಏಕಿಲ್ಲ?
ಹುಬ್ಬಳ್ಳಿಯ ನೇಹಾ ಹಿರೇಮಠ ಪ್ರಕರಣದ ಬಳಿಕ ಬೀದಿಗಿಳಿದು ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡರು ಪ್ರಜ್ವಲ್‍ರೇವಣ್ಣಅವರು ಮೂರು ಸಾವಿರ ಹೆಣ್ಣು ಮಕ್ಕಳ ಮೇಲೆ ನಡೆಸಿದ ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದು ವಾರ ಕಳೆದರೂ ಇನ್ನೂ ಏಕೆ ಬೀದಿಗಿಳಿದು ಹೋರಾಟ ಮಾಡುತ್ತಿಲ್ಲಎಂದು ಸಚಿವ ಪ್ರಿಯಾಂಕ್‍ಖರ್ಗೆಅಚ್ಚರಿ ವ್ಯಕ್ತಪಡಿಸಿದರು.