ಕೊಟ್ಟಾಯಂಗೆ ಗುವಿವಿ ಹ್ಯಾಂಡ್‍ಬಾಲ್ ತಂಡ
ಕಲಬುರಗಿ,ಏ 30: ಕೊಟ್ಟಾಯಂ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದಲ್ಲಿ ಮೇ.2 ರಿಂದ 6 ರವರೆಗೆ ಜರುಗಲಿರುವ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಹ್ಯಾಂಡ್‍ಬಾಲ್ (ಪುರುಷ) ಪಂದ್ಯಾಟದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ತಂಡವು ಭಾಗವಹಿಸುತ್ತಿದೆ.
ತಂಡದ ನಾಯಕನಾಗಿ, ಕಾರ್ತಿಕ ಎಸ್ ತಂಡದ ಸದಸ್ಯರಾಗಿ ಭೀಮರೆಡ್ಡಿ, ಕಾರ್ತಿಕ, ನಿತೀನ, ಯಲ್ಲಾಲಿಂಗ, ಶ್ರೀಕಾಂತ, ತಿಕ್ಕಾರೆಡ್ಡಿ ಮತ್ತು ಶಿವರಾಜ ಇವರು ಭಾಗವಹಿಸುವರು. ತಂಡದ ವ್ಯವಸ್ಥಾಪಕ ತರಬೇತುದಾರರಾಗಿ ದೈಹಿಕ ಶಿಕ್ಷಣ ವಿಭಾಗದ ಉಪನ್ಯಾಸಕ ಸಂಕೇತ ಭಾಗವಹಿಸುವರು.
ತಂಡದ ಯಶಸ್ವಿಗೆ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿಪ್ರೊ. ದಯಾನಂದ ಅಗಸರ, ಕುಲಸಚಿವ ಡಾ. ಮೇಧಾವಿನಿ ಕಟ್ಟ್ಪಿ, ಡಾ. ಎನ್.ಜಿ. ಕಣ್ಣೂರ, ಡಾ. ಎಚ್.ಎಸ್. ಜಂಗೆ,ಡಾ. ಚಂದ್ರಕಾಂತ ಬಿರಾದಾರ, ಪ್ರಶಾಂತಕುಮಾರ ಡಿ, ಅರುಣಕುಮಾರ ಎಚ್ ಶುಭ ಹಾರೈಸಿದ್ದಾರೆ.