ಎಕ್ಸಲಂಟ್ ಪದವಿ ಪೂರ್ವ ವಿಜ್ಞಾನ ಕಾಲೇಜಿಗೆ ನಿಡಸೋಸಿಯ ಪೂಜ್ಯ ನಿಜಲಿಂಗೇಶ್ವರ ಶ್ರೀಗಳ ಭೇಟಿ
ವಿಜಯಪುರ, ಏ.30:ಸ್ವಚ್ಛ ಭಾರತ ಸಂಕಲ್ಪ ಈಡೇರಿಸುವ ಸ್ವಾಮಿಗಳೆಂದೇ ಖ್ಯಾತರಾಗಿರುವ ನಿಡಸೋಸಿ ದುರದುಂಡೇಶ್ವರ ಸಿದ್ದ ಮಹಾಸಂಸ್ಥಾನ ಮಠದ ಪೂಜ್ಯರಾದ, ಶಿಕ್ಷಣ ಪ್ರೇಮಿ ಶ್ರೀ ನಿಜಲಿಂಗೇಶ್ವರ ಮಹಾಸ್ವಾಮಿಗಳು ವಿಜಯಪುರ ನಗರದ P.Éಎಸ್.ಆರ್À.ಟಿ.ಸಿ ಕಾಲನಿಯಲ್ಲಿರುವ ಎಕ್ಸಲಂಟ್ ಪದವಿ ಪೂರ್ವ ವಿಜ್ಞಾನ ಕಾಲೇಜಿಗೆ ಭೇಟಿ ನೀಡಿದರು.
ಸುಸಜ್ಜಿತ ಕಟ್ಟಡ, ಪ್ರಯೋಗಾಲಯ, ಉತ್ತಮ ಕಲಿಕಾ ಕೊಠಡಿಗಳು, ಅನುಭವಿ ಉಪನ್ಯಾಸಕರು, ಕಲಿಕಾ ಸ್ನೇಹಿ ವಾತಾವರಣವನ್ನು ಕಂಡು ಮೆಚ್ಚುಗೆ ಸೂಸುತ್ತಾ, ಇಂದು ಆಧುನಿಕ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಬಿತ್ತುವ ಸಂಸ್ಕಾರವು ಅತ್ಯಗತ್ಯ. ವಿದ್ಯಾರ್ಥಿಗಳು ಕೇವಲ ಅಂಕಗಳು, ರ್ಯಾಂಕಗಳಿಗಷ್ಟೇ ತಮ್ಮ ಜ್ಞಾನವನ್ನು ಸೀಮಿತಗೊಳಿಸದೇ ರಾಷ್ಟ್ರಪೇಮ, ಸ್ವಚ್ಛತೆ, ಪರಿಸರ ಪ್ರೇಮ, ಸಾಮಾಜಿಕರಣ, ಮಾನವ ಬಂಧುತ್ವಗಟ್ಟಿಗೊಳಿಸುವ ಹೃದಯವಂತಿಕೆ ಬೆಳೆಸಿಕೊಳ್ಳಬೇಕು. ಕಡಿಮೆ ಅವಧಿಯಲ್ಲಿ ಪರಿಣಾಮಕಾರಿ ಶಿಕ್ಷಣ ನೀಡಿ, ಉತ್ತಮ ಸಾಧಕ ವಿದ್ಯಾರ್ಥಿಗಳನ್ನು ತರಬೇತಿಗೊಳಿಸುತ್ತಿರುವ ಎಕ್ಸಲಂಟ್ ಕಾಲೇಜಿನ ಸೇವಾ ಮನೋಭಾವ ಮೆಚ್ಚುವಂತಹದ್ದು. ಮುಂಬರುವ ದಿನಗಳಲ್ಲಿ ಸರ್ವರ ಸಹಕಾರದೊಂದಿಗೆ, ಸಾಧಕರ ಪಾಲಿನ ಸ್ವರ್ಗವಾಗಿರುವ ಈ ಕಾಲೇಜು ನಾಡಿಗೆ ಮತ್ತಷ್ಷು ಕೊಡುಗೆ ನೀಡಲಿ ಎಂದು ಹಾರೈಸಿದರು. ಎಕ್ಸಲಂಟ್‍ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕÀ ಅಧ್ಯಕ್ಷÀ ಬಸವರಾಜ ಕೌಲಗಿ ಅವರು ಕಸದಿಂದ ರಸ ತೆಗೆಯುವ, ತ್ಯಾಜ್ಯ ವಸ್ತು ಮರುಬಳಕೆ ಹಾಗೂ ಸ್ವಚ್ಛತೆಯ ಆಂದೋಲನದ ಸ್ವಾಮಿಗಳೆಂದೇ ಜನಜನಿತರಾಗಿರುವ ನಿಡಸೋಸಿಯ ಶ್ರೀಗಳು ಇಂದು ನಮ್ಮ ಕಾಲೇಜಿಗೆ ದಯಮಾಡಿಸಿರುವುದು ನಮ್ಮೆಲ್ಲರ ಸೌಭಾಗ್ಯ. ಮೊದಲಿನಿಂದಲೂ ನಾವು ಹರ-ಗುರು-ಚರಮೂರ್ತಿಗಳ ಆಶೀರ್ವಾದ ಹಾರೈಕೆ ಬಲದಂತೆಯೇ ನಡೆಯುತ್ತಿದ್ದೇವೆ. ಸಂತಮಹಾತ್ಮರ ಕೃಪೆ ಹಾಗೂ ಸಮರ್ಪಣಾ ಭಾವದಿಂದ ಕಾರ್ಯ ನಿರ್ವಹಿಸುತ್ತಿರುವ ಉಪನ್ಯಾಸಕರ ಶ್ರಮದಿಂದ ನಮ ್ಮಕಾಲೇಜಿನ ವಿದ್ಯಾರ್ಥಿಗಳು ಉತ್ಕøಷ್ಟ ಸಾಧನೆಗೈÀಯ್ಯುವಂತಾಗಿದೆ. ಈ ಮೊದಲು ಹತ್ತನೇ ತರಗತಿ ಮುಗಿದ ಮೇಲೆ ಪಾಲಕರು ತಮ್ಮ ಮಕ್ಕಳನ್ನು ಕಾಲೇಜು ಶಿಕ್ಷಣಕ್ಕಾಗಿ ಬೇರೆ ಜಿಲ್ಲೆಗೆ ಕಳುಹಿಸುತ್ತಿದ್ದರು. ಆದರೆ ಇಂದು ಎಕ್ಸಲಂಟ್ ಕಾಲೇಜ ನೀಡುವ ಪರಿಪೂರ್ಣವಾದ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಕ್ರಮವನ್ನು ಮೆಚ್ಚಿಕೊಂಡು ಬೇರೆ ಜಿಲ್ಲೆಯವರು ಕೂಡಾ ಇಂದು ವಿಜಯಪುರಕ್ಕೆ ಬರುತ್ತಿರುವುದು ಸಂತಸದ ಸಂಗತಿಯಾಗಿದೆ. ಕಾಲೇಜಿನ ಮೇಲೆ ವಿಶ್ವಾಸ ಇಟ್ಟು ಸಹಕರಿಸುತ್ತಿರುವ ಸರ್ವರಿಗೂ ನಾವು ಸದಾಚಿರಋಣಿಯಾಗಿದ್ದೇವೆ ಎಂದು ಕೃತಜ್ಞತೆಯಿಂದ ಸ್ಮರಿಸಿ, ಪೂಜ್ಯರಿಗೆ ಸಂಸ್ಥೆ ಬೆಳೆದು ಬಂದ ಬಗೆಯನ್ನು ವಿವರಿಸಿದರು. ನಿಡಸೋಸಿಯಿಂದ ಆಗಮಿಸಿದ ಆಡಳಿತ ಮಂಡಳಿ ನಿರ್ದೇಶಕರುಗಳಾದ ಜಿ.ಎಮ್. ಪಾಟೀಲ, ರಾಹುಲ್ ಪಾಟೀಲ, ಆರ್ಕಿಟೇಕ್ಚರ ಇಂಜಿನೀಯರ್ ಕಾಶೀನಾಥ ಗುರವ ಹಾಗೂ ವಿಜಯಪುರದ ಉದ್ಯಮಿ ಶಾಂತೇಶ ಕಳಸಗೊಂಡ ಮತ್ತು ಕಾಲೇಜಿನ ಪ್ರಾಚಾರ್ಯ ಶ್ರೀಕಾಂತ ಕೆ.ಎಸ್. ಆಡಳಿತಾಧಿಕಾರಿ ಪರಶುರಾಮ ಭಾವಿಕಟ್ಟಿ, ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪೂಜ್ಯರನ್ನು ಸನ್ಮಾನಿಸಲಾಯಿತು, ಕಾಲೇಜಿನ ಆವರಣದಲ್ಲಿ ಪೂಜ್ಯರು ಸಸಿನೆಟ್ಟು ಶುಭ ಹಾರೈಸಿದರು.