ಭಾರತ ಸಂವಿಧಾನದ ಅರಿವು ಮತ್ತು ಸಮುದಾಯ ಸಬಲೀಕರಣದಲ್ಲಿ ಯುವಜನರ ಪಾತ್ರ: ತರಬೇತಿ ಕಾರ್ಯಾಗಾರ
ವಿಜಯಪುರ,ಏ.30:ಇಲ್ಲಿನ ಅನೌಪಚಾರಿಕ ಶಿಕ್ಷಣ ಸಂಸ್ಥೆ, ಅಜೀಂ ಪ್ರೇಮ್‍ಜೀ ಫೌಂಡೇಶನ್ ಇವರ ಸಹಯೋಗದಲ್ಲಿÉ ಏ.27, 28ರಂದು ಅನೌಪಚಾರಿಕ ಶಿಕ್ಷಣ ಸಂಸ್ಥೆಯ ನವಚೇತನ ಸಭಾ ಭವನದಲ್ಲಿ 2 ದಿನದ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಅನೌಪಚಾರಿಕ ಶಿಕ್ಷಣ ಸಂಸ್ಥೆ ನಿರ್ದೇಶಕÀ ಫಾದರ್ ಟಿಯೋಲ್ ಮಚಾದೊ ಮಾತನಾಡಿ, ಪರಸ್ಪರರಲ್ಲಿ ಪ್ರೀತಿ, ವಿಶ್ವಾಸ, ಸಮಾನತೆ, ಸಹಬಾಳ್ವೆ, ಗೌರವಾನ್ವಿತ ಬದುಕು ಸಾಗಿಸಲು ಪ್ರತಿಯೊಬ್ಬರಿಗೂ ಸಂವಿಧಾನಿಕ ಹಕ್ಕು ಇದೆ. ಹೀಗಾಗಿ ಸಂವಿಧಾನದವನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಅಂದಾಗ ಮಾತ್ರ ನಮ್ಮಲ್ಲಿರುವ ಹಲವಾರು ರೀತಿಯ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಸಾಧ್ಯ. ಯಾವುದೇ ಅನಾವಶ್ಯಕ ತಪ್ಪು ಉಹೆಗಳಿಗೆ ಕಿವಿಗೊಡದೆ ಆಳವಾಗಿ ವಿಚಾರ ಮಾಡಿ ಯಾವುದೇ ಒಬ್ಬ ವ್ಯಕ್ತಿಗೆ ಅಥವಾ ಸಮುದಾಯಕ್ಕೆ ತೊಂದರೆ ಹಾಗೂ ಅಗೌರವ ಆಗದಂತೆ ನಡೆದುಕೊಳ್ಳುವುದು ಪ್ರತಿಯೊಬ್ಬ ಯುವಕ, ಯುವತಿಯರ ಜವಾಬ್ದಾರಿಯಾಗಿದೆ. ನಾವು ನಮ್ಮ ಧರ್ಮವನ್ನು ಹೇಗೆ ಗೌರವಿಸುತ್ತೇವೆಯೋ ಹಾಗೆಯೇ ಇತರ ಧರ್ಮವನ್ನು ಗೌರವದಿಂದ ಕಾಣಬೇಕು ಆಗ ಮಾತ್ರ ನಾವು ಸಂವಿಧಾನದ ಆಶಯದಂತೆ ಸಹಬಾಳ್ವೆ ಮತ್ತು ಸೌಹಾರ್ಧತೆಯಿಂದ ದೇಶ ಮುನ್ನಡೆಸಲು ಸಾಧ್ಯ ಎಂದು ಯುವಕ/ಯುವತಿಯರಿಗೆ ಕರೆ ನಿಡಿದರು.
ಈ ಸಂದರ್ಭದಲ್ಲಿ ಅಜೀಂ ಪ್ರೇಮ್‍ಜೀ ಫೌಂಡೇಶನ್‍ನ ಸಂಯೋಜಕಿ ಸುನಿತಾ ಮತ್ತು ಸಿಬ್ಬಂದಿಗಳಾದ ಇಸ್ಮಾಯಿಲ್ ಸಗರ್, ಸಂತೋಷ, ಶಾಲೋಮ್ ಸುನೈನಾ, ಅನೌಪಚಾರಿಕ ಶಿಕ್ಷಣ ಸಂಸ್ಥೆಯ ಪ್ರೇರಕರಾದ ಮೀನಾಕ್ಷಿ ಸಿಂಗೆ, ರವಿ ದೊಡಮನಿ ಹಾಗೂ ವಿವಿಧ ಸ್ಲಂಗಳಿಂದ ಯುವಕ/ಯುವತಿಯರು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.