ಅಕ್ಕನ ಅನುಭಾವ ನುಡಿಗಳು ಸಾರ್ವಕಾಲಿಕ : ಸಾಹಿತಿ ಗಿರಿಜಾ
ವಿಜಯಪುರ,ಏ,.30:ಮಹಾನ್ ಶರಣೆ ಅಕ್ಕಮಹಾದೇವಿ ಲೌಕಿಕವನ್ನು ಮೀರಿದ ಅಲೌಕಿಕ, ಅಧ್ಯಾತ್ಮದ ಔನ್ನತ್ಯ. ಆತ್ಮ ಸಂಗಾತಕ್ಕೆ ಚೆನ್ನಮಲ್ಲಿಕಾರ್ಜುನ ಉಂಟು ಎಂಬ ದಿಟ್ಟ ಮಾತನ್ನು, ಹೇಳಿದ ಧೀರ ಶರಣೆ. ಹೆಣ್ಣಿನ ಸ್ವಾಭಿಮಾನದ, ಅಭಿವ್ಯಕ್ತಿ ಸ್ವಾತಂತ್ರದ ಪ್ರತಿಪಾದಕಿ. ಪ್ರಥಮ ಕವಯಿತ್ರಿ, ಅಕ್ಕ ಮಹಾದೇವಿ ಬಸವಾದಿ ಪ್ರಮಥರಿಂದ ಗೌರವಿಸಿಕೊಂಡವಳು ಎಂದು ಸಾಹಿತಿ ಗಿರಿಜಾ ಪಾಟೀಲ ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಜಿಲ್ಲಾ ಮಹಿಳಾ ಘಟಕ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಮತ್ತು ಕದಳಿ ಮಹಿಳಾ ವೇದಿಕೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಸಂಸ್ಕøತಿ ಅಳಿಯುತ್ತಿರುವ, ಮೌಲ್ಯಗಳು ಮರೆಯಾಗುತ್ತಿರುವ ಇಂದಿನ ಸಂದರ್ಭದಲ್ಲಿ ಶರಣ – ಶರಣೆಯರ ಜಯಂತಿಗಳು ನಮಗೆಲ್ಲ ದಾರಿದೀಪಗಳಾಗುತ್ತವೆಂದು ಪದ್ಮಜಾ ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅಕ್ಕನ ಅನುಭಾವ ಇಂದು ಎಲ್ಲರಿಗೂ ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ದಾರಿದೀಪವಾಗಿವೆ ಎಂದರು.
ಜಿಲ್ಲಾ ಕದಳಿ ವೇದಿಕೆ ಅಧ್ಯಕ್ಷೆ ಡಾ.ಉμÁದೇವಿ ಹಿರೇಮಠ ಆಶಯಗಳನ್ನಾಡಿದರು. ಪರಮಾತ್ಮನೇ ತನ್ನ ಆತ್ಮ ಸಂಗಾತಿ ಎಂದು ಹೇಳಿದ ಅಕ್ಕನ ದಿಟ್ಟನಿಲುವು, ಸ್ಪಷ್ಟ ಮಾತು ಮತ್ತು ನಡೆ-ನುಡಿ ಒಂದಾಗಿಸಿದ ಅವಳು ಸ್ತ್ರೀ ಲೋಕಕ್ಕೆ ಮಾದರಿಯಾದವಳು. ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಡಾ.ಬನುದೇವಿ ಸಂಕಣ್ಣವರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶೈಲಜಾ ಮೋದಿ, ನೂತನ ಬ್ಯಾಕೋಡ, ದಾನಮ್ಮ ಮಹಾಜನ, ನೀಲಮ್ಮ ಸಂಕನ್ನವರ, ನಿಂಗಮ್ಮ ಡೋಮನಾಳ, ಸ್ವಪ್ನಾ ಅರಕೇರಿ, ಶಕುಂತಲಾ ಮೋಸಲಗಿ, ಡಾ. ವಿ.ಡಿ. ಐಹೊಳ್ಳಿ, ಎಂ.ಎಂ. ಅವರಾದಿ, ಹಾಲಳ್ಳಿ ಉಪಸ್ಥಿತರಿದ್ದರು.
ಬಬಲೇಶ್ವರದ ಜ್ಯೋತಿ ಬಿರಾದಾರ, ಪಾರ್ವತಿ ಕೊರಬು ಮತ್ತು ಮಲ್ಲಮ್ಮ ಹೊಸಮನಿ ಮಠಪತಿ ಸಂಗಡಿಗರು ಅಕ್ಕ ಮಹಾದೇವಿಯ ಜೋಗುಳ ಹಾಡುಗಳನ್ನು ಹಾಡಿದರು. ದಾಕ್ಷಾಯಣಿ ಬಿರಾದಾರ ಸ್ವಾಗತಿಸಿದರು. ಶಾರದಾ ಐಹೊಳ್ಳಿ ನಿರೂಪಿಸಿದರು. ನೂತನ ಬ್ಯಾಕೋಡ ವಂದಿಸಿದರು.