ರೂಪಾದೇವಿ ಬಂಗಾರ ರಚಿಸಿದ ಎರಡು ಕೃತಿಗಳ ಬಿಡುಗಡೆ
ಸೇಡಂ,ಎ, 30: ಇಲ್ಲಿನ ಸಜ್ಜನಶೆಟ್ಟಿ ಕಲ್ಯಾಣ ಮಂಟಪದಲ್ಲಿ ಸಂಸ್ಕøತಿ ಪ್ರಕಾಶನ ಪ್ರಕಟಿಸಿದ ರೂಪಾದೇವಿ ಬಂಗಾರ ಅವರು ಮುಡಿಪು(ಕಾದಂಬರಿ) ಹಾಗೂ ಬಂಗಾರದ ತೇರು (ಕವನ ಸಂಕಲನ) ಪುಸ್ತಕಗಳನ್ನು ಪರಮ ಪೂಜ್ಯ ಶ್ರೀ ಸದಾಶಿವ ಸ್ವಾಮೀಜಿ ಹಾಗೂ ಪರಮ ಪೂಜ್ಯ ಪಂಚಾಕ್ಷರಿ ಮಹಾ ಸ್ವಾಮೀಜಿಯವರು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಈ ವೇಳೆಯಲ್ಲಿ ಪೂಜ್ಯ ಶಿವಶಂಕರ ಶಿವಾಚಾರ್ಯರು,ಕವಿ ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನದ
ಅಧ್ಯಕ್ಷರಾದ ಸಿದ್ದಪ್ಪ ತಳ್ಳಳ್ಳಿ, ಸಂಸ್ಕೃತಿ ಪ್ರಕಾಶನ ಅಧ್ಯಕ್ಷರಾದ ಪ್ರಭಾಕರ ಜೋಶಿ ಎರಡು ಕೃತಿಗಳ ಲೇಖಕಿ ರೂಪಾದೇವಿ ಬಂಗಾರ, ಮಹಿಪಾಲರೆಡ್ಡಿ ಮುನ್ನೂರ,
ಆರತಿ ಕಡಗಂಚಿ ವೇದಿಕೆ ಮೇಲೆ ಇದ್ದರು.