ಅಗತ್ಯ ಸೇವೆಗಳಡಿಯ ಸಿಬ್ಬಂದಿಗೆ ಮೇ 1, 2 ಹಾಗೂ 3 ರಂದು ಮತದಾನ
ಕಲಬುರಗಿ.ಏ.30: 05-ಗುಲಬರ್ಗಾ (ಪ.ಜಾ.) ಲೋಕಸಭಾ ಮತಕ್ಷೇತ್ರದಲ್ಲಿ ಅಗತ್ಯ ಸೇವೆಗಳ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಗೈರು ಮತದಾರರ (ಂಗಿಇS) ವರ್ಗದ ಮತದಾರರಿಗೆ ಮೇ 1, 2 ಹಾಗೂ 3 ರಂದು ಮೂರು ದಿನಗಳ ಕಾಲ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ತಿಳಿಸಿದ್ದಾರೆ.