ಅರಿವು ಶಿಕ್ಷಣ ಕೇಂದ್ರದ ವತಿಯಿಂದ ಹಣ್ಣು ಹಂಪಲು ವಿತರಣೆ
ಆಳಂದ: ಏ.30:ತಾಲ್ಲೂಕಿನ ಕಿಣ್ಣಿಸುಲ್ತಾನ ಗ್ರಾಮದ ಅರಿವು ಶಿಕ್ಷಣ ಕೇಂದ್ರದ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಶೃಂಗೇರಿಯವರು ಆಳಂದ ಸೈನಿಕರ ಅಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಒಂದು ತಿಂಗಳ ಸೈನಿಕರ ಉಚಿತ ತರಬೇತಿ ಶಿಬಿರದ ಶಿಬಿರಾರ್ಥಿಗಳಿಗೆ ಹಣ್ಣು ಹಂಪಲು ಮತ್ತು ಚಹಾ ವಿತರಿಸಿ ಮಾತನಾಡಿದ ಅವರು ಶಿಬಿರಾರ್ಥಿಗಳು ಛಲ ಬಿಡದೆ ಓದಬೇಕು ನೀವು ನಿಮ್ಮ ಪ್ರಯತ್ನ ಬಿಡದೆ ಛಲದಿಂದ ಮುನ್ನುಗಿ ಫಲ ಸಿಕ್ಕೆ ಸಿಗುತ್ತದೆ ನಿಮ್ಮ ತಂದೆ ತಾಯಿ ಮತ್ತು ಊರಿನ,ತರಬೇತಿ ನೀಡಿದ ಸಂಸ್ಥೆಯ ಕೀರ್ತಿ ತರಬೇಕು ಎಂದು ಹಾರೈಸಿದರು.ಆಳಂದ ಸೈನಿಕರ ಅಭಿವೃದ್ಧಿ ಸಂಘದ ಅಧ್ಯಕ್ಷ ಸಿದ್ದಲಿಂಗ ಮಲಶೆಟ್ಟಿ ಮಾತನಾಡಿ ನಮ್ಮ ಶಿಬಿರಾರ್ಥಿಗಳಿಗೆ ಹಣ್ಣು ಹಂಪಲು ಚಹಾ ವಿತರಿಸಿದ ಅರಿವು ಶಿಕ್ಷಣ ಕೇಂದ್ರದ ಅಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಶೃಂಗೇರಿಯವರಿಗೆ ಸನ್ಮಾನಿಸಿ ಅಭಿನಂದಿಸಿ ಅರಿವು ಶಿಕ್ಷಣ ಕೇಂದ್ರ (ಕಿಣ್ಣಿಸುಲ್ತಾನ) ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಹಾರೈಸಿದರು. ಅರಿವು ಶಿಕ್ಷಣ ಕೇಂದ್ರದ ಶಿಕ್ಷಕ ಹಣಮಂತ ಚಿಂಚೋಳಿ ಯವರಿಗೆ ಸನ್ಮಾನಿಸಲಾಯಿತು . ಕಲ್ಯಾಣಿ ತುಕ್ಕಾಣೆಯವರು ದೇಶಭಕ್ತಿ ಗೀತೆ ಹಾಡಿದರು. ಈ ಸಂದರ್ಭದಲ್ಲಿ ಚಂದ್ರಕಾಂತ ಯಳಮೆಲಿ, ಸಿದ್ಧಾರ್ಥ ಹಸೂರೆ, ತಾನಾಜಿ ಜಾಧವ, ಕೃಷ್ಣಾ ಲುಗಡೆ, ಪ್ರಮೋದ್ ಪಾಂಚಾಳ್, ಸಲ್ಮಾನ್ ನಗರ್ ದೇವಂತಗಿ, ಡಾ.ಅವಿನಾಶ ದೇವನೂರ ಹಣಮಂತ ಮಾನೆ ಅಶೋಕ ಶೃಂಗೇರಿ, ಮುಂತಾದವರು ಉಪಸ್ಥಿತರಿದ್ದರು