ಮಹಿಳೆ ಕೊಂದು 30 ತುಂಡು ಮಾಡಿ ಫ್ರಿಜ್ ನಲ್ಲಿಟ್ಟ ಭೂಪ
ಬೆಂಗಳೂರು, ಸೆ.21- ನವದೆಹಲಿಯ ಶ್ರದ್ಧಾ ವಾಕರ್‌ ಭಯಾನಕ ಕೊಲೆ ಮಾಸುವ ಮುನ್ನವೇ ನಗರದ ವೈಯಾಲಿಕಾವಲ್ ಬಳಿ ಅದೇ ರೀತಿಯ ಕೊಲೆ ನಡೆದಿದ್ದು,ವಿವಾಹಿತೆಯನ್ನು ಭೀಕರವಾಗಿ ಕೊಲೆಗೈದು ಮೃತದೇಹ 30ಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟಿರುವುದು ಬೆಳಕಿಗೆ ಬಂದಿದೆ.
ನೆಲಮಂಗಲ ಮೂಲದ ಮಹಾಲಕ್ಷ್ಮಿ ಕೊಲೆಯಾದವರು, ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯ ಮುನ್ನೇಶ್ವರ ಬ್ಲಾಕ್‌ನಲ್ಲಿ ಘಟನೆ ನಡೆದಿದೆ.
ಮನೆಯ ಬಳಿ‌ ದುರ್ವಾಸನೆ ಬರುತ್ತಿರುವುದನ್ನು ಎರಡು ದಿನಗಳಿಂದ ಗಮನಿಸಿ ಅಕ್ಕಪಕ್ಕದವರು ಮಾಹಿತಿಯನ್ನು ನೀಡಿದ ತಕ್ಷಣವೇ ಮೃತಳ ತಾಯಿ ಹಾಗೂ ಸಹೋದರಿ ಮಹಾಲಕ್ಷ್ಮಿ ಮನೆ ಬಳಿ ಬಂದಿದ್ದಾರೆ.
ಮನೆ ಬೀಗ ಒಡೆದು ಒಳ ಹೋದಾಗ ಕೊಲೆಯಾಗಿರುವುದು ಬೆಳಕಿಗೆ ಬಂದಿದ್ದು ಫ್ರಿಜ್ ನಲ್ಲಿದ್ದ ಶವದಿಂದ ಹುಳಗಳು ಹೊರಗೆ ಬರುತ್ತಿದ್ದವು ಎನ್ನಲಾಗಿದೆ.
ಕಳೆದ 10 ರಿಂದ 15 ದಿನಗಳ ಹಿಂದೆ ಕೊಲೆ ನಡೆದಿದೆ ಎನ್ನಲಾಗಿದೆ. ಕಳೆದ ಮೂರು ತಿಂಗಳ ಹಿಂದಷ್ಟೆ ಮಹಾಲಕ್ಷ್ಮಿ ಬಾಡಿಗೆ ಮನೆಗೆ ಬಂದಿದ್ದಳು. ಯುವಕನೊರ್ವ ಆಕೆಯನ್ನು ಪಿಕ್ ಅಪ್ ಮತ್ತು ಡ್ರಾಪ್ ಮಾಡುತ್ತಿದ್ದ. ಆತನೇ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಸುಮಾರು 30ಕ್ಕೂ ಹೆಚ್ಚು ತುಂಡುಗಳನ್ನಾಗಿ ದೇಹವನ್ನು ಕತ್ತರಿಸಿ ಬಳಿಕ ಫ್ರಿಜ್ಜ್‌ನಲ್ಲಿ ಇಟ್ಟು ಕೊಲೆಗಾರ ಎಸ್ಕೇಪ್‌ ಆಗಿದ್ದಾನೆ. ಸದ್ಯ ಪೊಲೀಸರು ಸ್ಥಳೀಯರಿಂದ ಮಾಹಿತಿ ಕಲೆ ಹಾಕುತ್ತಿದ್ದು, ಅಕ್ಕ ಪಕ್ಕದ ಮನೆಗಳ ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆ ನಡೆಸಲಾಗುತ್ತಿದೆ.
ಈಗಾಗಲೇ ಮದುವೆ ಆಗಿರುವ ಮಹಾಲಕ್ಷ್ಮಿ ನೆಲಮಂಗಲದಲ್ಲಿರುವ ಪತಿಯಿಂದ ದೂರಾಗಿ ಒಂಟಿಯಾಗಿ ವೈಯಾಲಿಕಾವಲ್‌ನಲ್ಲಿ ವಾಸವಿದ್ದಳು. ಈ ದಂಪತಿಗೆ ನಾಲ್ಕು ವರ್ಷದ ಮಗು ಕೂಡ ಇದೆ. ಹಲವು ದಿನದಿಂದ ಕರೆ ಮಾಡಿದ್ದರು ಪತ್ನಿ ಮಹಾಲಕ್ಷ್ಮಿ ಸ್ವೀಕರಿಸುತ್ತಿರಲಿಲ್ಲ. ಪತಿ ಬಂದು ಬಾಗಿಲು ತೆರೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಬಾಗಿಲಯ ತರೆದಾಗ ಫ್ರಿಡ್ಜ್‌ನಿಂದ ಹುಳಗಳು ಹೊರಬರುತ್ತಿತ್ತು.
ಸುಮಾರು 10-15ದಿನದ ಹಿಂದೆಯೆ ಕೊಲೆ ನಡೆದಿರುವ ಶಂಕೆ‌ ಇದೆ. ಈ ಕೃತ್ಯದ ಕುರಿತು ಮಾಹಿತಿ ನೀಡಿದ ಸ್ಥಳೀಯರು, ಸ್ವಲ್ಪ ಸಮಯದ ಕಾಲ ಮಹಾಲಕ್ಷ್ಮಿ ಅಣ್ಣ ಜೊತೆಗಿದ್ದರು. ಮಹಿಳೆಯ ಬಗ್ಗೆ ಯಾವುದೇ ರೀತಿಯ ಮಾಹಿತಿ ಗೊತ್ತಿಲ್ಲ. ನಮ್ಮ ಬಳಿ ಮಾತನಾಡುವಾಗ ಕನ್ನಡದಲ್ಲೇ ಮಾತನಾಡುತ್ತಿದ್ದರು. ಸ್ಥಳೀಯ ಮಾಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ಮನೆಯೊಂದರ ಮೊದಲ ಮಹಡಿಯಲ್ಲಿ ಮಹಿಳೆಯ ಮೃತದೇಹವನ್ನು ತುಂಡರಿಸಿ ಫ್ರಿಡ್ಜ್ನಲ್ಲಿ ಇಟ್ಟಿರುವ ಘಟನೆ ನಡೆದಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ ಇದು ಸಂಭವಿಸಿ ನಾಲ್ಕೈದು ದಿನಗಳು ಆಗಿರಬಹುದು. ಕೊಲೆಯಾಗಿರುವ ಮಹಿಳೆಯ ಗುರುತು ಪತ್ತೆಯಾಗಿದೆ. ಹೊರರಾಜ್ಯದವರಾಗಿದ್ದು, ನಗರದಲ್ಲಿ ನೆಲೆಸಿದ್ದರು. ಡಾಗ್ ಸ್ಕ್ವಾಡ್, ಬೆರಳಚ್ಚು ತಜ್ಞರ ತಂಡ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಎಫ್ಎಸ್ಎಲ್ ತಂಡ ಕೂಡ ಆಗಮಿಸುತ್ತಿದೆ. ತನಿಖೆ ಬಳಿಕ ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಲಿದೆ” ಎಂದು ಅವರು ಹೇಳಿದರು.
ನಾಯಿ ನೋಡಿಕೊಳ್ಳುವ ವಿಚಾರವಾಗಿ ಮೃತ ಯುವತಿ ಆಗಾಗ ನಮ್ಮೊಂದಿಗೆ ಮಾತನಾಡುತ್ತಿದ್ದಳು. ಮನೆಯಲ್ಲಿ ಒಬ್ಬಂಟಿಯಾಗಿ ಇರುತ್ತಿದ್ದಳು. ಕೆಲವು ದಿನಗಳ ಕಾಲ ಅವರ ಅಣ್ಣ ಇದ್ದ. ಅವರು ಹೋದ ಬಳಿಕ ಈಕೆ ಒಬ್ಬಳೇ ಮನೆಯಲ್ಲಿ ಇರುತ್ತಿದ್ದಳು. ಅವಳಿಗೆ ಮದುವೆಯಾಗಿತ್ತು ಎಂಬ ವಿಚಾರ ನಮಗೆ ಇವತ್ತೇ ಗೊತ್ತಾಯಿತು ಇಲ್ಲಿಗೆ ಬಂದು ಐದು ತಿಂಗಳು ಆಗಿತ್ತು. ಬೆಳಗ್ಗೆ 9.30ಕ್ಕೆ ಹೊರಗೆ ಹೋದರೆ ರಾತ್ರಿ 10:30ಕ್ಕೆ ಮನೆಗೆ ವಾಪಸ್ ಬರುತ್ತಿದ್ದಳು. ಇವತ್ತು ಆಕೆಯ ತಾಯಿ ಮತ್ತು ಅಕ್ಕ ಬಂದಿದ್ದರು. ಮನೆಯಿಂದ ಏನೋ ವಾಸನೆ ಬರುತ್ತಿದೆ ಎಂದು ಫ್ರಿಡ್ಜ್ ತೆರೆದಿದಾಗ ಪ್ರಕರಣ ಬೆಳಕಿಗೆ ಬಂದಿದೆ” ಎಂದು ಮೇರಿ ಎಂಬಾಕೆ ಘಟನೆಗೆ ಬೇಸರ ವ್ಯಕ್ತಪಡಿಸಿದರು.
ವೈಯಾಲಿಕಾವಲ್ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.