ಋತುಮಾನಕ್ಕೆ ವಿರುದ್ಧವಾಗಿ ಈರುಳ್ಳಿ ಬೆಳೆದು ಸೈ ಎನಿಸಿಕೊಂಡ ರೈತ
ಚಿಂಚೋಳಿ,ಸೆ.21- ತಾಲ್ಲೂಕಿನ ಪೆÇೀಲಕಪಳ್ಳಿ ಗ್ರಾಮದ ಹೊಲವೊಂದರಲ್ಲಿ ಚಿಂಚೋಳಿಯ ಚಂದಾಪುರ ಪಟ್ಟಣ ಮೂಲದ ಶರಣು ಕಾಪೆರ್ಂಟರ್ ಎಂಬುವವರು ಋತುಮಾನಕ್ಕೆ ವಿರುದ್ಧವಾಗಿ ಈರುಳ್ಳಿ ಬೆಳೆಯನ್ನು ಬೆಳೆದು ಸೈ ಎನಿಸಿಕೊಂಡಿದ್ದಾರೆ.
ಮೂಲತಃ ಬಡಿಗತನ ವೃತ್ತಿಯವರಾದ ಇವರು ಬಡಿಗತನದ ಜೊತೆ ಜೊತೆಗೆ ತನ್ನ ಒಂದೂವರೆ ಎಕರೆ ಹೊಲದಲ್ಲಿ ಋತುಮಾನಕ್ಕೆ ವಿರುದ್ಧವಾಗಿ ಈರುಳ್ಳಿ ಬೆಳೆಯನ್ನು ಬೆಳೆದಿದ್ದು ಅದು ಈಗ ಸುಮಾರು 130 ಕ್ವೀಔಟಾಲ್ ನಿಂದ 150 ಕ್ವಿಔಟಾಲ್ ನಷ್ಟು ಫಸಲು ಬಂದಿದ್ದಕ್ಕೆ ಸುತ್ತಮುತ್ತದ ಜನರು ಹುಬ್ಬೇರಿಸುವಂತಾಗಿದೆ.
ಈ ಕುರಿತು ಸಂಜೆವಾಣಿ ಪತ್ರಿಕೆಯೊಂದಿಗೆ ಮಾತನಾಡಿದ ರೈತ ಶರಣು ಕಾಪೆರ್ಂಟರ್, ಈ ಋತುಮಾನದಲ್ಲಿ ನಮ್ಮ ರಾಜ್ಯವನ್ನು ಹೊರತುಪಡಿಸಿ ಬೇರೆ ರಾಜ್ಯಗಳಾದ ಮಹಾರಾಷ್ಟ್ರಗಳಂತಹ ರಾಜ್ಯದಲ್ಲಿ ಈರುಳ್ಳಿ ಬೆಳೆಯನ್ನು ಬೆಳೆಯುತ್ತಿದ್ದು, ನಮ್ಮ ರಾಜ್ಯದ ರೈತರು ಏಕೆ ಬೆಳೆಯಲಾಗುತ್ತಿಲ್ಲ. ನಾವು ಕೂಡ ಬೆಳೆದು ತೋರಿಸಬೇಕು ಎನ್ನುವ ಮನೋಭಾವನೆಯಿಂದ ಋತುಮಾನಕ್ಕೆ ವಿರುದ್ಧವಾದರು ಕೂಡ ಒಂದು ಪ್ರಾಯೋಗಿಕ ರೀತಿಯಲ್ಲಿ ಬೆಳೆಯನ್ನು ಬೆಳೆಯಲು ಯೋಚಿಸಿದ್ದು ಅದು ಇಂದು ಉತ್ತಮ ಫಸಲು ಬಂದು ಯಶಸ್ವಿಯಾಗಿದೆ. ಅಲ್ಲದೆ, ಇದಕ್ಕೂ ಮೊದಲು ಕಳೆದ ವರ್ಷ ಮೂರು ಎಕರೆಗಳಲ್ಲಿ ಕಲ್ಲಂಗಡಿ ಬೆಳೆ ಬೆಳೆದಿದ್ದು, ಅದು ಕೂಡ ಉತ್ತಮ ಬೆಳೆ ಬಂದಿತ್ತು ಅದರಿಂದ ಉತ್ತೇಜನಗೊಂಡು ಈ ಬಾರಿ ಋತುಮಾನದ ವೈಪರೀತ್ಯವಿದ್ದರೂ ಕೂಡ ಈರುಳ್ಳಿ ಬೆಳೆಯನ್ನು ಬೆಳೆದು ಉತ್ತಮ ಫಲಿತಾಂಶ ಬಂದಿರುವುದಕ್ಕೆ ಸಂತಸವಾಗಿದೆ ಎಂದು ತಿಳಿಸಿದರು.