ರಸ್ತೆ ಮಧ್ಯೆ ಸಿಕ್ಕಿ ಬಿದ್ದ ಲಾರಿ
ಕಲಬುರಗಿ,ಸೆ.21-ಮಾರ್ಬಲ್ ಸ್ಟೋನ್ ಸಾಗಿಸುತ್ತಿದ್ದ ಲಾರಿಯೊಂದು ರಸ್ತೆ ಮಧ್ಯೆ ಸಿಕ್ಕಿ ಬಿದ್ದ ಪರಿಣಾಮ ಕೆಲಕಾಲ ವಾಹನÀ ಸಂಚಾರಕ್ಕೆ ಅಡಚಣೆಯುಂಟಾದ ಘಟನೆ ನಗರದ ಡಾ.ಎಸ್.ಎಂ.ಪಂಡಿತ್ ರಂಗ ಮಂದಿರ ಬಳಿ ಇಂದು ನಡೆದಿದೆ.
ರಸ್ತೆ ಮಧ್ಯೆಯೇ ಲಾರಿ ಸಿಕ್ಕಿ ಬಿದ್ದಿದ್ದರಿಂದ ವಾಹನ ಸಂಚಾರಕ್ಕೆ ಕೆಲಕಾಲ ಅಡಚಣೆಯುಂಟಾಗಿತ್ತು. ಸುದ್ದಿ ತಿಳಿದು ಸಂಚಾರಿ ಪೊಲೀಸ್ ಠಾಣೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.