ಮತದಾನ ಜಾಗೃತಿ ಅಭಿಯಾನ
ಕಲಬುರಗಿ:ಏ.30: ಆಳಂದ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ‘ಆಳಂದ ಸೈನಿಕರ ಅಭಿವೃದ್ಧಿ ಸಂಘ’ದ ವತಿಯಿಂದ ಜರುಗುತ್ತಿರುವ ಉಚಿತ ಸೈನಿಕರ ತರಬೇತಿ ಶಿಬಿರದಲ್ಲಿ ‘ಡಾ.ಬಿ.ಆರ್.ಅಂಬೇಡ್ಕರ್ ರೀಸರ್ಚ್ ಇನ್ಸ್ಟಿಟ್ಯೂಟ್’ ಮತ್ತು ‘ಬಸವೇಶ್ವರ ಸಮಾಜ ಸೇವಾ ಬಳಗ’ ಹಾಗೂ ‘ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ’ ಇವುಗಳ ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ ‘ಮತದಾನ ಜಾಗೃತಿ ಅಭಿಯಾನ’ಕ್ಕೆ ನ್ಯಾಯವಾದಿ, ಸಮಾಜ ಸೇವಕ ಡಾ.ಸುನೀಲಕುಮಾರ ಎಚ್.ವಂಟಿ ಚಾಲನೆ ನೀಡಿ ಮಾತನಾಡಿದರು. ಡಾ.ವಾಸುದೇವ ಸೇಡಂ ಎಚ್., ಎಚ್.ಬಿ.ಪಾಟೀಲ, ರಾಜಶೇಖರ ಬಿ.ಮರಡಿ, ಸಿದ್ದಲಿಂಗಪ್ಪ ಮಲಶೆಟ್ಟಿ, ಶಿವಬಸಪ್ಪ ಎಸ್.ಮಲಶೆಟ್ಟಿ, ಮಾಣಿಕರಾವ ಬಿರಾದಾರ, ಚಂದ್ರಕಾಂತ ಯಲಮೇಲಿ, ಗೀತಾ ಎ.ಪಾಟೀಲ, ಉಲ್ಲಾಸ್ ಸಿಂಗೆ, ಸಿದ್ದಾರ್ಥ ಹುಸೂರೆ, ತಾನಾಜಿ ಜಾಧವ, ಕೃಷ್ಣ ಲುಗಡೆ, ಧರ್ಮಾ ಸಿಂಗೆ ಹಾಗೂ ಸೈನಿಕ ತರಬೇತಿಯ ಯುವಕ-ಯುವತಿಯರು ಭಾಗವಹಿಸಿದ್ದರು.