ನಗರದ ವಿವಿಧ ಭಾಗಗಳಿಗೆ ಚುನಾವಣಾಧಿಕಾರಿ ದಿವ್ಯ ಪ್ರಭು ಭೇಟಿ
ಧಾರವಾಡ,ಏ30: ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಧಾರವಾಡ ನಗರದ ಗೊಲ್ಲರ ಕಾಲೋನಿ, ಮೇದಾರ ಓಣಿ ಮುಂತಾದ ಪ್ರದೇಶಗಳಲ್ಲಿ ಮನೆಮನೆಗೆ ಭೇಟಿ ನೀಡಿ, ಮತದಾರರಿಗೆ ವೊಟರ್ ಸ್ಲಿಪ್ ತಲುಪಿರುವ ಬಗ್ಗೆ ಖಚಿತಪಡಿಸಿಕೊಂಡರು.
ಗೊಲ್ಲರ ಓಣಿ ಮತದಾರರಾದ ವಸರವ್ವ ಜಕಾತಿ, ಯಲ್ಲವ್ವ ಉಣಕಲ್ಲ, ತಿಪ್ಪಣ್ಣ ಗೊಲ್ಲರ, ಶಾಂತವ್ವ ದೊಡವಾಡ ಅವರ ಮನೆಗಳಲ್ಲಿನ ವೊಟರ್ ಸ್ಲಿಪ್ ಪರಿಶೀಲಿಸಿ, ಅವರೊಂದಿಗೆ ಮತದಾರ ಗುರುತಿನ ಪತ್ರ, ವೊಟರ್ ಸ್ಲಿಪ್, ಮತಗಟ್ಟೆಗಳಲ್ಲಿನ ಸೌಲಭ್ಯಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಯಾವುದೇ ಭಯ, ಆತಂಕಗಳಿಲ್ಲದೆ ಮುಕ್ತವಾಗಿ ಮತಗಟ್ಟೆಗೆ ಬಂದು ಮತ ಚಲಾಯಿಸುವಂತೆ ಅವರು ತಿಳಿಸಿದರು.
ಜಿಲ್ಲೆಯಲ್ಲಿರುವ 1660 ಮತಗಟ್ಟೆಗಳಲ್ಲಿ ಇರುವ ಪ್ರತಿ ಮತಗಟ್ಟೆ ಮಟ್ಟದ ಅಧಿಕಾರಿಗಳು, ತಮ್ಮ ಮತಗಟ್ಟೆ ವ್ಯಾಪ್ತಿಯ ಪ್ರತಿ ಮನೆಗೆ ಭೇಟಿ ನೀಡಿ, ಪ್ರತಿ ಮತದಾರನಿಗೆ ವೊಟರ್ ಸ್ಲಿಪ್, ಪ್ರತಿ ಕುಟುಂಬಕ್ಕೆ ಮತದಾನ ಮಾಹಿತಿ ಇರುವ ಒಂದು ವೊಟರ್ ಗೈಡ್ ವಿತರಿಸುತ್ತಾರೆ. ಇದು ತಲುಪಿರುವ ಬಗ್ಗೆ ಜಿಲ್ಲಾಧಿಕಾರಿಗಳು ಮಾಹಿತಿ ಪಡೆದುಕೊಂಡರು.
ಮೊದಲ ಬಾರಿಗೆ ಮತ ಚಲಾಯಿಸಲಿರುವ 18 ರಿಂದ 19 ವರ್ಷದೊಳಗಿನ ನವಯುವ ಮತದಾರರಿಗೆ ವೊಟರ್ ಸ್ಲಿಪ್‍ದೊಂದಿಗೆ ಜಿಲ್ಲಾ ಚುನಾವಣಾಧಿಕಾರಿಗಳಿಂದ (ಲೇಟರ್ ಹೆಡ್ ಮೇಲೆ) ವಿಶೇಷವಾಗಿ ಶುಭಾಶಯಪತ್ರವನ್ನು ಸಹ ತಲುಪಿಸಲಾಗುತ್ತಿದೆ. ಈ ಕುರಿತು ಪರಿಶೀಲಿಸಿ, ನವ ಮತದಾರರನ್ನು ಮತದಾನಕ್ಕೆ ಬರುವಂತೆ ಪ್ರೇರಣೆ ನೀಡಿದರು.
ಮತದಾನ ಕೇಂದ್ರಗಳ ಮೂಲಭೂತ ಸೌಲಭ್ಯಗಳು:* ವಿಶೇಷಚೇತನರು ಹಾಗೂ ಹಿರಿಯ ನಾಗರೀಕರಿಗೆ ಇಳಿಜಾರು ಹಾಗೂ ಗಾಲಿ ಕುರ್ಚಿ ನೀಡಲಾಗುತ್ತದೆ. ವಿಶೇಷ ಚೇತನರು ಹಾಗೂ ಹಿರಿಯ ನಾಗರೀಕರಿಗೆ ಆದ್ಯತೆಯ ಪ್ರವೇಶ, ಮೊದಲಿಗೆ ಮಾಹಿತಿ ನೀಡಿರುವ ವಿಶೇಷಚೇತನ ಮತದಾರರಿಗೆ ಸಾರಿಗೆ ವ್ಯವಸ್ಥೆಯನ್ನು ಮಾಡಲಾಗುವುದು.
ಮತದಾರರು ತಮ್ಮ ಮಾಹಿತಿಯನ್ನು voಣeಡಿs.eಛಿi.gov.iಟಿ ನಲ್ಲಿ ಪರಿಶೀಲಿಸಬಹುದು ಎಂದು ಚುನಾವಣಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ಮತದಾರ ಮನೆ ಭೇಟಿ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಸಹಾಯಕ ಮತದಾರ ನೋಂದಣಿ ಅಧಿಕಾರಿ ಆಗಿರುವ ತಹಸಿಲ್ದಾರ ಡಾ.ಡಿ.ಎಚ್.ಹೂಗಾರ, ಗ್ರಾಮ ಆಡಳಿತ ಅಧಿಕಾರಿ ಕರಿಯಪ್ಪ ಗುಡ್ಡದ, ಮತಗಟ್ಟೆ ಮಟ್ಟದ ಅಧಿಕಾರಿಗಳಾದ ನಿರ್ಮಲಾ ಲಕ್ಕುಂಡಿ, ದ್ರಾಕ್ಷಾಯಣಿ ಹಡಗಲಿ, ಉಮಾ ಮುಳ್ಳಮ್ಮ ಸೇರಿದಂತೆ ಇತರರು ಇದ್ದರು.