ನವನಗರದಲ್ಲಿ ಶ್ರೀ ಕಾಳಿಕಾ ದೇವಸ್ಥಾನ ಲೋಕಾರ್ಪಣೆ
ಹುಬ್ಬಳ್ಳಿ,ಏ30: ಹುಬ್ಬಳ್ಳಿಯ ನವನಗರದ ಪಂಚಾಕ್ಷರಿನಗರ ಬಡಾವಣೆಯಲ್ಲಿ ನವೀಕೃತಗೊಂಡ ಶ್ರೀ ಕಾಳಿಕಾ ದೇವಸ್ಥಾನದ ಲೋಕಾರ್ಪಣೆ ಜರುಗಿತು.
ಈ ದೇವಸ್ಥಾನದಲ್ಲಿ ಶ್ರೀ ಕಾಳಿಕಾದೇವಿ, ವಿನಾಯಕ ಹಾಗೂ ಶ್ರೀ ವಿಶ್ವಕರ್ಮ ದೇವರ ಮೂರ್ತಿಗಳು ಪ್ರತಿಷ್ಠಾಪನೆಗೊಂಡವು. ಮೂರು ದಿನಗಳ ಈ ಕಾರ್ಯಕ್ರಮದಲ್ಲಿ ವಿವಿಧ ಹೋಮ, ವಾಸ್ತು ಪೂಜೆಗಳನ್ನು ಉಡುಪಿ ಜಿಲ್ಲೆ ಕಟಪಾಡಿ -ಪಡುಕುತಾರಿನ ಶ್ರೀಮದ್ ಆನೆಗುಂದಿ ಸಂಸ್ಥಾನ ಸರಸ್ವತಿ ಪೀಠದ ಅನಂತವಿಭೂಷಿತ ಕಾಳಹಸ್ತೇಂದ್ರ ಮಹಾಸ್ವಾಮಿಗಳು ದಾವಣಗೆರೆ ಜಿಲ್ಲೆ ವಡ್ಡನಹಾಳ್‍ನ ಸಾವಿತ್ರಿ ಪೀಠದ ಕಾಶೀಮಠದ ಶ್ರೀ ಶಂಕರಾತ್ಮಾನಂದ ಸರಸ್ವರಿ ಮಹಾಸ್ವಾಮಿಗಳು ಮತ್ತು ಯಾದಗಿರಿ ಜಿಲ್ಲೆ ಶಹಪೂರ ವಿಶ್ವಕರ್ಮ ಏಕದಂಡಗಿ ಆನೆಗುಂದಿ ಸಂಸ್ಥಾನದ ಶ್ರೀ ಕಾಳಹಸ್ತೇಂದ್ರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನೆರವೇರಿಸಲಾಯಿತು.
ವೇ. ಬ್ರ, ಸಂಸ್ಕೃತ ವಿದ್ವಾನ್ ಶ್ರೀ ಶಂಕರಾಚಾರ್ಯ ಕಡ್ಲಾಸ್ಕರ ಅವರ ಪೌರೋಹಿತ್ಯದಲ್ಲಿ ಸಕಲ ಪೂಜಾಧಿಗಳು ನೆರವೇರಿದವು.
ಕಾರ್ಯಕ್ರಮದ ಮೂರನೇ ದಿನದಂದು ಕಳಸಾರೋಹಣ ಹಾಗೂ ದೇವಸ್ಥಾನ ಲೋಕಾರ್ಪಣೆ ಸಮಾರಂಭದಲ್ಲಿ ಹಿರಿಯ ಲೇಖಕ ಹಾಗೂ ಸಂಶೋಧಕರಾದ ಪೆÇ್ರೀ. ವಿ. ಜಿ. ದೀಕ್ಷಿತ್ ಅವರ ಸಮಗ್ರ ಸಾಹಿತ್ಯದ ಪ್ರಥಮ ಸಂಪುಟವನ್ನು ಶಿರಸಂಗಿಯ ಶ್ರೀ ವಿಶ್ವಕರ್ಮ ವಿಕಾಸ ಸ0ಸ್ಥೆಯ ಅಧ್ಯಕ್ಷ ಪೆÇ್ರೀ. ಪಿ. ಬಿ. ಬಡಿಗೇರ ಅವರು ಬಿಡುಗಡೆ ಮಾಡಿದರು.
ಸಂಶೋಧಕ ಪೆÇ್ರೀ. ವಿ. ಜಿ. ದೀಕ್ಷಿತ್ ಕರ್ನಾಟಕ ವಿ.ವಿ.ಯ ಇತಿಹಾಸ ಹಾಗೂ ಪ್ರಾಕ್ತನಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಕೆ. ಪಿ. ಈರಣ್ಣ, ಕರ್ನಾಟಕ ಶಿಲ್ಪಕಲಾ ಅಕ್ಯಾಡೆಮಿಯ ನಿಕಟಪೂರ್ವ ಅಧ್ಯಕ್ಷ ಪೆÇ್ರೀ. ವೀರಣ್ಣ ಅರ್ಕಸಾಲಿ, ಬುಕ್‍ಬ್ರಹ್ಮ ಡಿಜಿಟಲ್ ಮೀಡಿಯಾದ ಸಂಪಾದಕ ದೇವೋ ಪತ್ತಾರ, ಗದಗ ಜಿಲ್ಲೆ ವಿಶ್ವಕರ್ಮ ಸರ್ಕಾರಿ ನೌಕರರ ಮತ್ತು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಆರ್. ಡಿ. ಕಡ್ಲಿಕೊಪ್ಪ ದಾವಣಗೆರೆ ಜಿಲ್ಲಾ ವಿಶ್ವಕರ್ಮ ಸಮಾಜ ಸಂಘದ ಅಧ್ಯಕ್ಷ ಬಿ. ನಾಗೇಂದ್ರಾಚಾರ್ ಬಸಾಪೂರ, ವಿಶ್ವಕರ್ಮ ಮಹಾಸಭಾ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಕಾಳಪ್ಪ ಬಡಿಗೇರ ಅಖಿಲ ಭಾರತೀಯ ವಿಶ್ವಕರ್ಮ ಛಾತೃ ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷ ದೆಹಲಿ ಸಂತೊಷ ಬಡಿಗೇರ, ನಿವೃತ್ತ ಸರ್ಕಾರಿ ವೈದ್ಯಾಧಿಕಾರಿ ಡಾ. ಪದ್ಮಾವತಿ ಪತ್ತಾರ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಮೂರು ದಿನಗಳ ಕಾಲ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕು. ವಿಂಧ್ಯಾ ಕಮ್ಮಾರ ಅವರ ಜಾದೂ ಪ್ರದರ್ಶನ, ಹುಬ್ಬಳ್ಳಿಯ ಕಲಾವಿದ ಶ್ರೀ ಪಕೀರೇಶ ಬಡಿಗೇರ ಅವರ ತಂಡದಿಂದ ಸುಗಮ ಸಂಗೀತ, ಹುಬ್ಬಳ್ಳಿಯ ನೇಕಾರನಗರ ವಿಶ್ವಕರ್ಮ ಕಲಾತಂಡಗಳಿಂದ ನೃತ್ಯ ಹಾಗೂ ಗುಳೇದಗುಡ್ಡದ ಗಾನಯೋಗಿ ಪಂಚಾಕ್ಷರಿ ಸಂಗೀತ ವಿದ್ಯಾಲಯದ ಶ್ರೀಮತಿ ಸುಮಿತ್ರಾ ಅಖಂದೇಶ್ವರ ಪತ್ತಾರ ಅವರ ತಂಡದಿಂದ ಸುಗಮ ಸಂಗೀತ ಹಾಗೂ ವಿಶ್ವಚೇತನ ಮಹಿಳಾ ಮಂಡಳದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಮೂರು ದಿನಗಳ ಕಾಲ ಜರುಗಿದ ಧಾರ್ಮಿಕ ಸಭೆಗಳಲ್ಲಿ ಸಾಹಿತಿ ಹಾಗೂ ಸಂಗೀತ ಕಲಾವಿದರಾದ ಡಾ. ವೃಷಬೇಂದ್ರ ಅರ್ಕಸಾಲಿ, ಲೇಖಕರಾದ ಡಾ. ವಿರುಪಾಕ್ಷ ಬಡಿಗೇರ, ಭೀಮಸೇನ ಬಡಿಗೇರ, ಸಮಾಜದ ಸಂಘಟಕರಾದ ಶಿವಣ್ಣ ಬಡಿಗೇರ, ಎಂ. ವಿ. ಹಡಗಲಿ, ಮನೋಹರ ಲಕ್ಕುಂಡಿ, ಶ್ರೀಮತಿ ಲಕ್ಷ್ಮೀ ಬಡಿಗೇರ ನ್ಯಾಯವಾಧಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಗಣ್ಯರು ಪಾಲ್ಗೊಂಡಿದ್ದರು.
ಶ್ರೀ ವಿಶ್ವಕರ್ಮ ವಿಕಾಸ ಸಮಿತಿ ಟ್ರಸ್ಟನ ಅಧ್ಯಕ್ಷರಾದ ಸಿ. ಪಿ. ಮಾಯಾಚಾರಿ ಅಧ್ಯಕ್ಷತೆ ವಹಿಸಿದ್ದರು.