ರಂಗಾಯಣದಲ್ಲಿ ಸಾಮರಸ್ಯದ ದೋಣಿಯಲ್ಲಿ ತೇಲಿದ ಚಿಣ್ಣರು
ಸಂಜೆವಾಣಿ ನ್ಯೂಸ್
ಮೈಸೂರು : ಏ.30:- ಬೇಸಿಗೆಯ ಕಾವಿನಲ್ಲಿ ರಂಗಾಯಣದ ಅಂಗಳದಲ್ಲಿ ತಂಪಿನ ಹೊಳೆ ಹರಿಯಿತು.. 9 ದೋಣಿಗಳನ್ನು ಏರಿದ ಚಿಣ್ಣರು ಸೌಹಾರ್ದದ ಪಯಣದಲ್ಲಿ ಸಾಗಿದರು.. ಅವರನ್ನು ನೋಡಿದ ಪೆÇೀಷಕರಲ್ಲಿ ಸಂತಸ ಉಕ್ಕಿ ಹರಿದಿತ್ತು. ರಂಗಾಯಣದಲ್ಲಿ ಸಮರಸವೇ ಜೀವನ ಪರಿಕಲ್ಪನೆಯಲ್ಲಿ ನಡೆಯುತ್ತಿರುವ ಚಿಣ್ಣರ ಮೇಳದಲ್ಲಿ, ಸಾಮರಸ್ಯ ಕಲಾ ದೋಣಿ ವಿಹಾರದಲ್ಲಿ ಕಂಡು ಬಂದ ದೃಶ್ಯಗಳಿವು. ರಾಣಿ ಚೆನ್ನಮ್ಮ, ಗಾಂಧಿ, ಅಂಬೇಡ್ಕರ್, ಓಬವ್ವ, ಚಾಮರಾಜ ಒಡೆಯರ್, ವಿವಿಧತೆಯಲ್ಲಿ ಏಕತೆ ಬಸವಣ್ಣ, ಅಕ್ಕಮಹಾದೇವಿ, ಭಗತ್ ಸಿಂಗ್, ಕೃಷ್ಣ, ರಾಧೆ ಸೇರಿದಂತೆ ಕನ್ನಡ ನಾಡು, ದೇಶದ ಹೆಮ್ಮೆಯ ವೀರರು, ಸೇರಿದಂತೆ ಕನ್ನಡ ನಾಡು, ದೇಶದ ಹೆಮ್ಮೆಯ ವೀರರು, ಸಂತರು, ಪುರಾಣ ಪುರುಷರು, ನಾಯಕರ ವೇಷಭೂಷಣ ಧರಿಸಿದ್ದ ಚಿಣ್ಣರು ನಾವೆಗಳನ್ನು ಮುನ್ನಡೆಸಿದರು.
300 ಮಕ್ಕಳು ಪುಟ್ಟ ಪುಟ್ಟ ಹೆಜ್ಜೆ ಹಾಕುತ್ತ ಇದು ಸರ್ವ ಜನಾಂಗದ ಶಾಂತಿಯ ತೋಟ, ಬನ್ನಿ ಜೊತೆಯಾಗೋಣ ಸಾಮರಸ್ಯವನ್ನು ಸಂಭ್ರಮಿಸೋಣ, ಸಹಬಾಳ್ವೆಯ ಬದುಕಿನತ್ತ ಈ ಸಾಮರಸ್ಯ ದೋಣಿಗಳು ಸಾಗಲಿ, ದ್ವೇಷ ಕಳೆಯೋಣ, ರಾಧೆಕೂಡಿ ಬಾಳೋಣ ಘೋಷಣೆಗಳನ್ನು ಕೂಗಿದರು. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರೂ ವೇಷ ಧರಿಸಿದ್ದ ಮಗಳು ಆದ್ರಿತಿ ನೋಡಲು ಬಂದರು. ಮಕ್ಕಳೊಂದಿಗೆ ಮಗಳು ಹೆಜ್ಜೆ ಹಾಕುತ್ತಿದ್ದನ್ನು ನೋಡಿ ಸಂತಸ ಪಟ್ಟರು. ಪೆÇೀಷಕರೊಂದಿಗೆ ಬೆರೆತರು.
ಪರಿಸರ ಪ್ರಜ್ಞೆ ಬೆಳೆಸಬೇಕು : ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸಬೇಕೆಂದರೆ ಅವರನ್ನು ಪರಿಸರಕ್ಕೆ ಕರೆದುಕೊಂಡು ಹೋಗಬೇಕು. ಕೇವಲ ನಾಲ್ಕು ಗೋಡೆಯ ತರಗತಿಗಳಲ್ಲಿ ಸಿನಿಮಾ, ಪಾಠಗಳಿಂದ ಕಲಿಸಲಾಗದು. ಕೆರೆಯಂಥ ಹೊರ ಜಾಗಗಳಿಗೆ ಕರೆದೊಯ್ಯಬೇಕು. ದೇಶದ ಜನರು ವಿಜ್ಞಾನ ಸ್ವೀಕರಿಸಲು ಈಗಲೂ ಸಿದ್ಧವಿಲ್ಲ. ಕುವೆಂಪು ಅವರೂ ಮುಂದಿನ ಯುಗ ವಿಜ್ಞಾನಯುಗ ಆಗಬೇಕೆಂದಿದ್ದರು. ವಿಜ್ಞಾನಕ್ಕೆ ಪ್ರಾಮುಖ್ಯತೆ ನೀಡಿದರೆ ಸಾಮರಸ್ಯ ತಂತಾನೆ ಬರುತ್ತದೆ. ಪ್ರಶ್ನಿಸುವ, ಬಗೆಹರಿಸಿಕೊಳ್ಳುವ, ಅರ್ಥ ಮಾಡಿಕೊಳ್ಳುವ ಮನೋಭಾವವನ್ನು ವಿಜ್ಞಾನ ಕಲಿಸುತ್ತದೆ ಎಂದು ಕೃಪಾಕರ ತಿಳಿಸಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಗ್ರೀನ್ ಆಸ್ಕರ್ ಪ್ರಶಸ್ತಿ ಪುರಸ್ಕೃತ ವನ್ಯಜೀವಿ ಛಾಯಾಗ್ರಾಹಕ ಕೃಪಾಕರ ಮಾತನಾಡಿ, ಎಲ್ಲ ದೇಶಗಳಲ್ಲೂ ಧರ್ಮಗಳ ನಡುವೆ ಹೊಡೆದಾಟ ನಡೆದಿದೆ. ಈ ವೇಳೆ ಮಕ್ಕಳಲ್ಲಿ ಸಾಮರಸ್ಯ ಮೂಡಿಸುವ ಇಂಥ ಕಾರ್ಯಕ್ರಮಗಳು ದೇಶವಷ್ಟೇ ಅಲ್ಲ ಜಾಗತಿಕವಾಗಿಯೂ ಮುಖ್ಯವಾಗಿವೆ ಎಂದರು.
ರಂಗಾಯಣದಂಥ ಸರ್ಕಾರಿ ಸಂಸ್ಥೆ ಮಕ್ಕಳಲ್ಲಿ ಸಾಮರಸ್ಯ, ಸೌಹಾರ್ದ ಮೂಡಿಸಲು ಚಿಣ್ಣರ ಮೇಳದ ಮೂಲಕ ಶ್ರಮಿಸಿದೆ. ಸಂತರ-ನಾಯಕರ ವೇಷಭೂಷಣ ಧರಿಸಿದ ಮಕ್ಕಳು ದೇಶದ ಸೌಹಾರ್ದ ಪರಂಪರೆಯನ್ನು ಸಾರಿದ್ದಾರೆ ಎಂದು ಅಭಿಪ್ರಾಯಪಟ್ಟರು.
ರಂಗಾಯಣ ನಿರ್ದೆಶಕಿ ಉಪ ನಿರ್ಮಲಾ ಮಠಪತಿ, ಮೇಳದ ಸಂಚಾಲಕಿ ಗೀತಾ ಮೊಂಟಡ್ಕ, ಕಲಾವಿದರಾದ ಶಶಿಕಲಾ, ಕೆ.ಆರ್.ನಂದಿನಿ, ಅಂಜುಸಿಂಗ್ ಸೇರಿದಂತೆ ರಂಗಾಯಣದ ಸಿಬ್ಬಂದಿ ಹಾಜರಿದ್ದರು.