ಉಚಿತ ಆರೋಗ್ಯ ಶಿಬಿರ ಬಡವರಿಗೆ ಸಹಕಾರಿ
ಆನೇಕಲ್. ಏ. ೩೦- ಗ್ರಾಮೀಣ ಜರ ಆರೋಗ್ಯದ ಜಾಗೃತಿಗೆ ಉಚಿತ ಆರೋಗ್ಯ ಶಿಭಿರಗಳು ಸಹಕಾರಿಯಾಗಿವೆ, ಬಡವರು ಆರೋಗ್ಯದ ಬಗ್ಗೆ ನಿರ್ಲಕ್ಷ ತೋರದೆ ವೈದ್ಯರು, ಲಭ್ಯವಿದ್ದಾಗ ಶಿಭಿರದಲ್ಲಿ ಪಾಲ್ಗೊಂಡು ಉಚಿತ ಆರೋಗ್ಯ ಶಿಭಿರವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ನಿಸರ್ಗ ಸೇವಾ ಸಂಸ್ಥೆಯ ಅಧ್ಯಕ್ಷರಾದ ನಿಸರ್ಗ ದೇವರಾಜ್ ನಾಯಕ್ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಅವರು ರಾಮಸಾಗರ ಗ್ರಾಮದ ಬಳಿಯಿರುವ ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ ಆವರಣದಲ್ಲಿ ಗಂಧದನಾಡು ಜನಪರ ವೇದಿಕೆ ಹಾಗೂ ನಿಸರ್ಗ ಸೇವಾ ಸಂಸ್ಥೆ ಮತ್ತು ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ ಆಶ್ರಯದಲ್ಲಿ ನಡೆದ ಬೃಹತ್ ಉಚಿತ ನೇತ್ರ ಹಾಗೂ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಭಿರದಲ್ಲಿ ಬಾಗವಹಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಬಿಪಿ, ಶುಗರ್, ಹೃದ್ರೋಗ ಹಾಗೂ ಕಿಡ್ನಿ ಖಾಯಿಲೆಗಳು ಸಾಮಾನ್ಯವಾಗಿವೆ, ಇವು ಶ್ರೀಮಂತ ಖಾಯಿಲೆಗಳಾಗಿದ್ದು ಬಡ ಜನರು ಆರ್ಥಿಕವಾಗಿ ಬರಿಸಲು ಅಸಾಧ್ಯ, ಗ್ರಾಮೀಣ ಬಾಗದ ಹಾಗೂ ನಗರ ಪ್ರದೇಶದ ಬಡ ಜನರಿಗೆ ಇಂತಹ ಉಚಿತ ಆರೋಗ್ಯ ಶಿಭಿರಗಳ ಮೂಲಕವೇ ಚಿಕಿತ್ಸೆ ಗೊಳಪಡಿಸಿದಾಗ ಮಾತ್ರ ಅವರನ್ನು ಸಂಕಷ್ಠದಿಂದ ಪಾರು ಮಾಡಲು ಸಾಧ್ಯ ಎಂದು ಹೇಳಿದರು.
ಇನ್ನು ಈ ಶಿಬಿರದಲ್ಲಿ ಕಣ್ಣು ಪರೀಕ್ಷೆ, ಪೊರೆ ಶಸ್ತ್ರಚಿಕಿತ್ಸೆ, ಬಿಪಿ, ಮಧುಮೇಹ, ಹೃದಯ, ಇಸಿಜಿ, ದಂತ ಪರೀಕ್ಷೆ, ಕೀಲು, ಮೂಳೆ, ಕಿವಿ ಮೂಗು, ಬಾಯಿ, ಮಕ್ಕಳ ಮಹಿಳೆಯರ ರೋಗ, ಸಾಮಾನ್ಯ ರೋಗಿಗಳಿಗೆ ವೈದ್ಯಕೀಯ ತಪಾಸಣೆ ಮಾಡಿ ಸ್ಥಳದಲ್ಲಿಯೇ ಔಷಧಿಯನ್ನು ಸಹ ನೀಡಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ ಮುಖ್ಯಸ್ಥರಾದ ಶ್ರೀನಿವಾಸ್, ಪ್ರಾಂಶುಪಾಲರು ಸೈರಾ ಬಾನು, ಆಡಳಿತ ಅಧಿಕಾರಿ ಅಶ್ವಿನಿ, ಗಂಧದನಾಡು ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ಸ್ವಾಭಿಮಾನಿ ಸತೀಶ್, ಜಿಲ್ಲಾ ಉಪಾಧ್ಯಕ್ಷ ಸದಾಶಿವ, ಮಹಾಂತಲಿಂಗಾಪುರ ಮಂಜು, ಅರ್ಜುನ್, ನಿಸರ್ಗ ದೃಷ್ಟಿಧಾಮದ ಸುರೇಶ್, ಆಕ್ಸ್ ಪರ್ಡ್ ಆಸ್ಪತ್ರೆಯ ಕಾರ್ತಿಕ್, ಹಿಮೋ ಕೇರ್ ರಕ್ತನಿಧಿ ಕೇಂದ್ರದ ಮದನ್ ಕುಮಾರ್, ಕಾವೇರಿ ಆಸ್ಪತ್ತೆಯ ನಾಗೇಶ್, ಶ್ರೀ ವೆಂಕಟೇಶ್ವರ ದಂತ ವೈದ್ಯಕೀಯ ಕಾಲೇಜಿನ ಡಾ|| ಶಿಬು ಮತ್ತು ವೈದ್ಯರು ಭಾಗವಹಿಸಿದ್ದರು.