ಶ್ರೀನಗರೇಶ್ವರಸ್ವಾಮಿ ರಥ ಸ್ವಸ್ಥಾನಕ್ಕೆ
ವಿಜಯಪುರ.ಏ೩೦:ಇತಿಹಾಸ ಪ್ರಸಿದ್ದ ಶ್ರೀ ನಗರೇಶ್ವರಸ್ವಾಮಿ ಮತ್ತು ಶ್ರೀ ಆದಿನಾರಾಯಣಸ್ವಾಮಿರವರ ಕಲ್ಲುಗಾಲಿಯ ಬ್ರಹ್ಮರಥೋತ್ಸವವು ಏಪ್ರಿಲ್-೨೩ ರಂದು ನೆರವೇರಿದ್ದು, ರಥೋತ್ಸವದ ಅಂತಿಮ ಹಂತವಾಗಿ ಕಲ್ಲುಗಾಲಿ ರಥೋತ್ಸವವನ್ನು ಶನಿವಾರ ರಾತ್ರಿ ಪಟ್ಟಣದ ಮಹಿಳೆಯರೆಲ್ಲಾ ಸೇರಿ, ಅದರ ಸ್ವಸ್ಥಾನಕ್ಕೆ ಸೇರಿಸಿದರು.
ಕಳೆದ ೯ ವರ್ಷಗಳಿಂದಲೂ ರಥೋತ್ಸವವನ್ನು ಹಗಲಿನಲ್ಲಿ ಪುರುಷರು, ಎಳೆದರೆ, ಅದನ್ನು ಸ್ವಸ್ಥಾನಕ್ಕೆ ಸೇರಿಸುವ ಕಾರ್ಯ ಸಂಪೂರ್ಣ ಮಹಿಳೆಯರದ್ದೇ ಆಗಿದ್ದು, ವಿಶೇಷವಾಗಿರುತ್ತದೆ.
ಪಟ್ಟಣದ ಮಹಿಳೆಯರೆಲ್ಲರೂ ಹರ-ಹರ ಮಹದೇವ ಹಾಗೂ ಗೋವಿಂದ, ಗೋವಿಂದ ನಾಮಸ್ಮರಣೆಗಳೊಂದಿಗೆ ಭಕಿ ಭಾವದಿಂದ ರಥವನ್ನು ಸ್ವಸ್ಥಾನಕ್ಕೆ ಸೇರಿಸಿದರು. ನಂತರ ಎಲ್ಲರಿಗೂ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.