ಬೈರವೇಶ್ವರ ದೇಗುಲಕ್ಕೆ ೨ ಲಕ್ಷ ರೂಗಳ ಸಹಾಯಧನ
ಗೌರಿಬಿದನೂರು.ಏ.೩೦- ತಾಲ್ಲೂಕಿನ ಡಿ.ಪಾಳ್ಯ ಹೋಬಳಿಯ ನಾಮಗೊಂಡ್ಲು ಗ್ರಾಂ.ಪಂ ವ್ಯಾಪ್ತಿಯ ಬುಡಿಗೇನಹಳ್ಳಿ ಗ್ರಾಮದ ಶ್ರೀ ಭೈರವೇಶ್ವರ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶ್ರೀಡಿ.ವೀರೇಂದ್ರ ಹೆಗ್ಗಡೆ ಅವರು ಮಂಜೂರು ಮಾಡಿದ್ದ ೨ ಲಕ್ಷ ಮೊತ್ತದ ಡಿ.ಡಿ ಯನ್ನು ಯೋಜನಾಧಿಕಾರಿ ನಾಗರಾಜ್ ವಿತರಿಸಿದರು.
ಈ ಸಂದರ್ಭದಲ್ಲಿ ಶ್ರೀ ಭೈರವೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ನಾಗರಾಜು, ಕಾರ್ಯದರ್ಶಿ ಶ್ರೀರಾಮರೆಡ್ಡಿ, ಸಮಿತಿ ಸದಸ್ಯ ಸುದರ್ಶನರೆಡ್ಡಿ, ಬೈರಾರೆಡ್ಡಿ, ಸಂಜೀವರೆಡ್ಡಿ, ಅಶ್ವತ್ಥಪ್ಪ, ಅರ್ಚಕರಾದ ಅದಿನಾರಾಯಣಪ್ಪ, ಶ್ರೀನಿವಾಸ ಹಾಗೂ ವಲಯದ ಮೇಲ್ವಿಚಾರಕ ಸುರೇಂದ್ರ ಉಪಸ್ಥಿತರಿದ್ದರು.