ಜೀವನದಲ್ಲಿ ಅಸಾಧ್ಯವಾದುದ್ದು ಯಾವುದು ಅಲ್ಲ ಸಾಧಿಸುವ ಛಲಬೇಕು
ಭಾಲ್ಕಿ: ಏ.30:ಭಾಲ್ಕಿ ತಾಲೂಕಿನ ಉಚ್ಚ ಗ್ರಾಮದ ಪೂಜ್ಯ ಶ್ರೀ ದಿವ್ಯಯೋಗಿ ಶ್ರೀ ಕಂಠಯ್ಯ ಸ್ವಾಮಿಗಳ 5ನೇಯ ಪುಣ್ಯಸ್ಮರಣೆ, 60ನೇಯ ಮಾಸಿಕ ಶಿವಾನುಭವ ಗೋಷ್ಠಿ ಕಾರ್ಯಕ್ರಮ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅಗ್ರಶ್ರೇಣಿ, ಪ್ರಥಮ ಶ್ರೇಣಿಯಲ್ಲಿ ಪಾಸಾದ ಉಚ್ಚ ಗ್ರಾಮದ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ ಸಮಾರಂಭ ಕಾರ್ಯಕ್ರಮ ಲಿಂಗಯೋಗ ಧ್ಯಾನ ಮಂದಿರ ಉಚ್ಚ ಗ್ರಾಮದಲ್ಲಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರಣ ಯೋಗೇಶ್ ಹಿರೇಮಠ್ ಪಿ.ಡಿ.ಓ ಹಾರಕೂಡ ಅವರು ವಹಿಸಿದ್ದರು. ಬಾಬುರಾವ್ ಬಿರಾದಾರ ನಿವೃತ್ತ ಕಾರ್ಯನಿರ್ವಾಹಕ ಅಧಿಕಾರಿಗಳು ಪಿ.ಕೆ.ಪಿ.ಎಸ್. ಮೊರಂಬಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಸಂತೋಷ ಹಡಪದ ಅಧ್ಯಕ್ಷರು ಜಿಲ್ಲಾ ಯುವ ಘಟಕ ಶರಣ ಸಾಹಿತ್ಯ ಪರಿಷತ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಪೆÇ್ರ. ಶಂಭುಲಿಂಗ ಕಾಮಣ್ಣ ಅಧ್ಯಕ್ಷರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಬೀದರ್ ಅವರು ಅನುಭಾವ ನುಡಿದರು. ಬಳಿಕ ಮಾತನಾಡಿದ ಹುಲಸೂರಿನ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಧ್ಯಾಪಕರಾದ ಸತೀಶ್ ಸಜ್ಜನಶೆಟ್ಟಿ ಅವರು, ಜೀವನದ ಕೆಲವು ಗೋಲ್ಡನ್ ಸಮಯದ ಎರಡು ವರ್ಷ ಕಳೆದಿದ್ದಿರಿ. ಬರಿ ನಾಲ್ಕು ಗೋಡೆಯ ಒಳಗೆ ನೀವು ಈಗ ಕಳೆದಿದ್ದೀರಿ ಈ ಮುಂದಿನ ನಾಲ್ಕೈದು ವರ್ಷಗಳು ಹೊರ ಪ್ರಪಂಚಕ್ಕೆ ಕೊಂಡೊಯ್ಯುತ್ತವೆ ಆದ್ದರಿಂದ ಯಾವುದೇ ಬಾಹ್ಯ ಆಕರ್ಷಣೆಗೆ ಒಳಗಾಗದೆ ತಮ್ಮ ಗುರಿಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಬಹಳ ಜಾಗೃತೆಯಿಂದ ಸಾಗಿಸಬೇಕಿದೆ ಎಂದು ಎಚ್ಚರಿಸಿದರು. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಆಗ್ರಶ್ರೇಣೆಯಲ್ಲಿ ಪಾಸಾದ
ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವ ಸನ್ಮಾನ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಭಕ್ತಿ ದಾಸೋಹಿಗಳಾದ ಸರಸ್ವತಿ ಶಿವಕುಮಾರ್ ಜಾನಾಪುರೆ ಕೆ.ಇ.ಬಿ. ದಂಪತಿಗಳಿಗೆ ಗೌರವ ಸನ್ಮಾನ ಮಾಡಲಾಯಿತು. ಸುನೀತಾ ಶಿವಯೋಗಿ ಸ್ವಾಮಿ ಬಸವ ಗುರುಪೂಜೆ ನೆರವೇರಿಸಿದರು. ಶ್ರೀದೇವಿ ಶಾಂತಯ್ಯ ಸ್ವಾಮಿ ಜಾನಪದ ಗೀತೆ ಹಾಡಿದರು. ಕವನ ಸ್ವಾಮಿ ವಚನ ಗಾಯನ ಮಾಡಿದರು. ಸಿದ್ದಲಿಂಗ ಸ್ವಾಮಿ ಮಠಪತಿ ನಿರೂಪಿಸಿದರು. ಶಾಂತಯ್ಯ ಸ್ವಾಮಿ ಸ್ವಾಗತಿಸಿದರು. ಪೆÇ್ರ. ಭೀಮಾಶಂಕರ ಜಿ. ಪಾಟೀಲ್ ವಂದಿಸಿದರು.
ಪ್ರಸಾದದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು ಎಂದು ಶಾಂತಯ್ಯ ಸ್ವಾಮಿಗಳು ಲಿಂಗಯೋಗ ಧ್ಯಾನ ಮಂದಿರ ಉಚ್ಚದ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.