ಸಂಭ್ರಮದ ಹೊನ್ನಳ್ಳಿ ಮಲ್ಲಿಕಾರ್ಜುನ ಜಾತ್ರೆ
ಸಂಜೆವಾಣಿ ವಾರ್ತೆ,
ವಿಜಯಪುರ,ಏ,30:ತಾಲ್ಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ಸೋಮವಾರು ಮಲ್ಲಿಕಾರ್ಜುನ ಸ್ವಾಮಿ ಜಾತ್ರೆ ವಿಜೃಂಭಣೆಯಿಂದ ನೇರೆವೇರಿತು.
ಬೆಳಿಗ್ಗೆ 5 ಗಂಟೆಯಿಂದ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ಪ್ರಾರಂಭಗೊಂಡವು. ನಂತರ 10 ಗಂಟೆಗೆ ಗ್ರಾಮದ ದೇವಸ್ಥಾನದ ಆವರಣದಲ್ಲಿ ಆಕರ್ಷಕ ಪುರವಂತಿಕೆ ಕಾರ್ಯಕ್ರಮ ಜರುಗಿತು. ಪುರುವಂತರು ತಮ್ಮ ಒಡಪುಗಳನ್ನು ಹೇಳುವುದರ ಮೂಲಕ ದೇವರ ಸೇವೆಯನ್ನು ಸಲ್ಲಿಸಿದರು.
ಗ್ರಾಮದ ಹಲವು ಪಲ್ಲಕ್ಕಿಗಳೊಂದಿಗೆ ಕೆಂಡ (ಅಗ್ಗಿ) ಹಾಯುವ ಕಾರ್ಯಕ್ರಮ ನೇರೆವೇರಿತು.
ನಂತರ ಗ್ರಾಮದ ಲಾರಿ ಮಾಲಿಕರ ಸಂಘದ ವತಿಯಿಂದ ಜಾತ್ರೆಗೆ ಆಗಮಿಸಿದ ಭಕ್ತಾಧಿಗಳಿಗೆ ಅನ್ನಪ್ರಸಾದ ಸೇವೆಯನ್ನು ಸಲ್ಲಿಸಲಾಯಿತು. ಬಿರು ಬಿಸಿಲನ್ನೇ ಲೆಕ್ಕಿಸದೇ ದೂರದ ವಿವಿಧ ಗ್ರಾಮಗಳಿಂದ ಸಾವಿರಾರು ಜನರು ಈ ಜಾತ್ರೆಯಲ್ಲಿ ಪಾಲ್ಗೊಂಡು ಪುನೀತರಾದರು.