ಲಾರಿ ಪಲ್ಟಿ ಪಟ್ಟಣಸೆರಗಿನ ಇಬ್ಬರು ಸಾವು 24 ಜನರಿಗೆ ಗಾಯ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.29: ಮದುವೆ ಮುಗಿಸಿಕೊಂಡು ತಿರುಗಿ ಊರಿಗೆ ಬರುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಕುಡತಿನಿ-ಏಳುಬೆಂಚಿ ಮಧ್ಯ ಎಚ್.ಎಲ್.ಸಿ.  ಕಾಲುವೆ ಪಕ್ಕದಲ್ಲಿ ಪಲ್ಟಿಯಾಗಿ ಇಬ್ಬರು ಮಹಿಳೆಯರು ಮೃತಪಟ್ಟ ಘಟನೆ ನಿನ್ನೆ ಸಂಜೆ ನಡೆದಿದೆ.
ಕುರುಗೋಡು ತಾಲೂಕಿನ ಪಟ್ಟಣಶೇರುಗು ಗ್ರಾಮದ ಮಾರೆಮ್ಮ (45) ಸ್ಥಳದಲ್ಲೇ ಮೃತಪಟ್ಟರೆ, ಭಾಗ್ಯಮ್ಮ (50) ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಈ ಘಟನೆಯಲ್ಲಿ 24 ಜನ ಗಾಯಗೊಂಡಿದ್ದಾರೆ. ಗಾಯಗೊಂಡವರು ವಿಮ್ಸ್ ಆಸ್ಪತ್ರೆಗೆ ದಾಖಲಾಗಿದೆ ಚಿಕಿತ್ಸೆ ಪಡೆದಿದ್ದಾರೆ.
ಈ ಕುರಿತು ಕುಡತಿನಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಕಾಂಗ್ರೆಸ್ ಅಭ್ಯರ್ಥಿ ತುಕರಾಂ ಭೇಟಿ ನೀಡಿ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಸಹಕರಿಸಿದ್ದಾರೆ.